Advertisement
ಗಣೇಶ ಹಬ್ಬವನ್ನು ನಾವು ವರ್ಷ ನಾಳೆ(ಸೆ.10, ಶುಕ್ರವಾರ) ಆಚರಿಸುತ್ತೇವೆ. ಗಣೇಶನಿಗೆ ತಾಯಿ ಪಾರ್ವತಿ ಎಳ್ಳುಂಡೆ, ಮೋದಕ, ಕಾಯಿಕಡುಬುಗಳ ಭಕ್ಷ್ಯಗಳನ್ನು ಮಾಡಿ ಉಣಬಡಿಸುತ್ತಿದ್ದಳು ಎಂದು ಪುರಾಣ ಕಥೆಗಳಲ್ಲಿ ಕೇಳಿದ್ದೇವೆ. ಹೀಗಾಗಿಯೇ ಗಣೇಶ ಚತುರ್ಥಿಯಂದು ಎಲ್ಲರ ಮನೆಗಳಲ್ಲೂ ಮೋದಕವನ್ನು ಒಳಗೊಂಡು ಹಲವು ನೈವೇದ್ಯವನ್ನು ಇಡಲಾಗುತ್ತದೆ.
Related Articles
Advertisement
ಮೋದಕ ಒಳಗೆ ತುಂಬಲು ಹೂರಣ ಮತ್ತು ಮೋದಕವನ್ನು ಮಾಡುವ ವಿಧಾನ
* ಕಡಾಯಿಯನ್ನು ಬಿಸಿ ಮಾಡಿ ಒಂದು ಚಮಚ ತುಪ್ಪ ಹಾಕಿ.
* ಈಗ ಅದರಲ್ಲಿ 2 ಕಪ್ ತೆಂಗಿನ ತುರಿ ಹಾಕಿ ಹುರಿಯಿರಿ.
* ಈಗ 1 ಕಪ್ ಬೆಲ್ಲ ಹಾಕಿ ಮಿಕ್ಸ್ ಮಾಡಿ
* ಬೆಲ್ಲ ಕರಗಿ, ತೆಂಗಿನಕಾಯಿ ಹಾಕಿ ಮಿಶ್ರ ಮಾಡಿ, ಅದು ಗಟ್ಟಿಯಾಗುವವರೆಗೆ ಬೇಯಿಸುತ್ತಾ ಇರಬೇಕು.
* ಮಿಶ್ರಣ ಗಟ್ಟಿಯಾದ ಬಳಿಕ ಉರಿ ಆಫ್ ಮಾಡಿ ತೆಗೆದಿಡಿ.
ಮೋದಕ ಹಿಟ್ಟು ತಯಾರಿಸುವುದು ಹೇಗೆ ?
* ಒಂದು ದೊಡ್ಡ ಕಡಾಯಿ ತೆಗೆದು ಅದರಲ್ಲಿ 1 ಕಪ್ ನೀರು ಹಾಕಿ.
* ನೀರನ್ನು ಬಿಸಿ ಮಾಡಿ, ಅದರಲ್ಲಿ 1 ಚಮಚ ತುಪ್ಪ, 1/2 ಚಮಚ ಉಪ್ಪು ಹಾಕಿ.
* ನೀರು ಚೆನ್ನಾಗಿ ಕುದಿಯಲಿ.
* ನೀರು ಕುದಿಯಲಾರಂಭಿಸಿದಾಗ ಅಕ್ಕಿ ಹಿಟ್ಟು ಹಾಕಿ, ಅಕ್ಕಿ ಹಿಟ್ಟು ಮೆಲ್ಲನೆ ಸುರಿಯಿರಿ, ಸುರಿಯುವಾಗ ಹಿಟ್ಟು ಗಂಟು ಕಟ್ಟದಿರಲು ಸೌಟಿನ ಸಹಾಯದಿಂದ ತಿರುಗಿಸುತ್ತಾ ಇರಿ.
* ಉರಿ ಕಡಿಮೆ ಮಾಡಿ ಹಿಟ್ಟನ್ನು ತಿರುಗಿಸುತ್ತಲೇ ಬೇಯಿಸಿ.
* ನಂತರ ಉರಿಯಿಂದ ಇಳಿಸಿ, 5 ನಿಮಿಷ ತಣ್ಣಗಾಗಲು ಇಡಿ.
ಮೋದಕ ಮಾಡುವ ವಿಧಾನ
* ಮೊದಲಿಗೆ ನೀವು ಹಿಟ್ಟಿನಿಂದ ಚಿಕ್ಕ-ಚಿಕ್ಕ ಉಂಡೆ ಮಾಡಿ.
* ಈಗ ಉಂಡೆ ತೆಗೆದು ಕೈಯಲ್ಲಿ ತಟ್ಟಿ, ಮಧ್ಯದಲ್ಲಿ ಸ್ವಲ್ಪ ಗುಂಡಿ ಮಾಡಿ, ಅದರೊಳಗೆ ತೆಂಗಿನಕಾಯಿ ಮಿಶ್ರಣ ಹಾಕಿ ಅದರ ತುದಿ ಕ್ಲೋಸ್ ಮಾಡಿ ಅದರ ತುದಿ ಹಿಡಿದು ತಿರುಗಿಸಿ.
* ಈಗ ಎಲ್ಲಾ ಹಿಟ್ಟನ್ನುಅವುಗಳನ್ನು ಹಬೆಯಲ್ಲಿ ಬೇಯಿಸಿ.
ಹಬೆಯಲ್ಲಿ ಬೇಯಿಸುವಾಗ ಬಾಳೆ ಎಲೆ ಮೇಲೆ ಈ ಮೋದಕಗಳನ್ನು ಇಟ್ಟು 10 ರಿಂದ 15 ನಿಮಿಷ ಬೇಯಿಸಿ.
ಈಗ ಗಣೇಶನಿಗೆ ಇಷ್ಟವಾದ ಮೋದಕ ತಯಾರಾಯಿತು. ಭಕ್ತಿಯಿಂದ ಗಣೇಶನಿಗೆ ನೈವೇದ್ಯ ಅರ್ಪಿಸಿ. ಹಬ್ಬವನ್ನು ಆಚರಿಸಿ.
ಇದನ್ನೂ ಓದಿ : ಕಲಬುರಗಿಪಾಲಿಕೆಯಲ್ಲಿ ಬಿಜೆಪಿಯವರೇ ಮೇಯರ್ ಆಗುತ್ತಾರೆ: ಸಿಎಂ ಬೊಮ್ಮಾಯಿ