Advertisement

8 ವರ್ಷ ರೌಡಿಶೀಟರ್‌ ಆಗಿದ್ದ ಶಾಸಕ ಗಣೇಶ್‌

01:26 AM Jan 24, 2019 | Team Udayavani |

ಬಳ್ಳಾರಿ: ವಿಜಯನಗರ ಶಾಸಕ ಆನಂದ್‌ಸಿಂಗ್‌ ಮೇಲೆ ಹಲ್ಲೆ ನಡೆಸಿರುವ ಕಂಪ್ಲಿ ಶಾಸಕ ಜೆ.ಎನ್‌. ಗಣೇಶ್‌ ಈ ಹಿಂದೆಯೇ ನಗರಸಭೆ ಸದಸ್ಯರೊಬ್ಬರ ಮೇಲೆ ಹಲ್ಲೆ, ಪೊಲೀಸ್‌ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿ 8 ವರ್ಷಗಳ ಕಾಲ ರೌಡಿಶೀಟರ್‌ ಆಗಿದ್ದರು ಎಂದು ಎಸ್‌ಪಿ ಅರುಣ್‌ ರಂಗರಾಜನ್‌ ತಿಳಿಸಿದ್ದಾರೆ.

Advertisement

ಹೊಸಪೇಟೆ ನಗರಸಭೆ ಸದಸ್ಯ ಚಿದಾನಂದಪ್ಪ ಅವರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ 2003ರಲ್ಲಿ ಪ್ರಕರಣ ದಾಖಲಾಗಿದ್ದು, ಗಣೇಶರನ್ನು ಬಂಧಿಸಲಾಗಿತ್ತು. ಇದಾದ ಬಳಿಕ 2006ರಲ್ಲಿ ಹೊಸಪೇಟೆಯಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಗಲಾಟೆಯೊಂದರಲ್ಲಿ ಅಂದಿನ ಸಂಚಾರಿ ಪೊಲೀಸ್‌ ಅಧಿಕಾರಿ ಸುಬೇದಾರ್‌, ಟೌನ್‌ ಠಾಣೆ ಪಿಎಸ್‌ಐ ಮಂಜುನಾಥ್‌ ಮತ್ತು ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದರು. ಇದಕ್ಕೆ ಸಂಬಂಧಿಸಿ ಗಣೇಶ್‌ ಮತ್ತವರ ಸಹೋದರ ಜೆ.ಎನ್‌. ಪರಶು ವಿರುದ್ಧ ಪ್ರಕರಣಗಳು ದಾಖಲಾಗಿದ್ದವು. ಈ ಹಿನ್ನೆಲೆಯಲ್ಲಿ ರೌಡಿಗಳ ಪಟ್ಟಿಯಲ್ಲಿ ಇವರಿಬ್ಬರ ಹೆಸರು ಸೇರಿಸಲಾಗಿತ್ತು ಎಂದರು. 2006ರಿಂದ 2015ರ ವರೆಗೆ ಸುಮಾರು 8 ವರ್ಷ ರೌಡಿಶೀಟರ್‌ ಪಟ್ಟಿಯಲ್ಲಿ ಶಾಸಕ ಗಣೇಶ್‌ ಅವರ ಹೆಸರಿತ್ತು. 2015ರಲ್ಲಿ ರೌಡಿಶೀಟರ್‌ ಪಟ್ಟಿಯಿಂದ ಖುಲಾಸೆಯಾಗಿದ್ದಾರೆ ಎಂದು ಎಸ್‌ಪಿ ಅರುಣ್‌ ರಂಗರಾಜನ್‌ ಸ್ಪಷ್ಪಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next