Advertisement

ಸುದ್ದಿಯಲ್ಲಿದ್ದಾರೆ ನ್ಯಾ|ಗಣೇದಿವಾಲಾ

01:29 AM Jan 30, 2021 | Team Udayavani |

ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠದ ಇತ್ತೀಚಿನ ಮೂರು ತೀರ್ಪುಗಳು ದೇಶಾದ್ಯಂತ ಚರ್ಚೆಗೆ ಕಾರಣವಾಗಿವೆ. ಮೊದಲನೆಯದು ಸ್ಕಿನ್‌ ಟು ಸ್ಕಿನ್‌ ಸ್ಪರ್ಶವಾದರೆ ಮಾತ್ರ ಲೈಂಗಿಕ ದೌರ್ಜನ್ಯವೆಂದು ಪರಿಗಣಿಸಬಹುದು, 2ನೆಯದು ಪ್ಯಾಂಟ್‌ ಜಿಪ್‌ ಬಿಚ್ಚಿದ ಕಾರಣಕ್ಕಾಗಿ ಲೈಂಗಿಕ ಕಿರುಕುಳವೆನ್ನಲಾಗದು ಎಂಬ ತೀರ್ಪು, 3ನೆಯದು ಏಕಕಾಲದಲ್ಲಿ ವ್ಯಕ್ತಿಯೊಬ್ಬ ಸಂತ್ರಸ್ತೆಯ ಬಾಯಿ ಮುಚ್ಚಿ, ಆಕೆಯ ವಸ್ತ್ರ ಮತ್ತು ತನ್ನ ವಸ್ತ್ರವನ್ನು ಬಿಚ್ಚಿ ಒತ್ತಾಯಪೂರ್ವಕವಾಗಿ ಲೈಂಗಿಕ ಕ್ರಿಯೆ ನಡೆಸಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿದೆ. ಈ ಮೂರು ತೀರ್ಪುಗಳ ಹಿಂದಿನ ಪ್ರಮುಖ ಹೆಸರು ನ್ಯಾಯಮೂರ್ತಿ ಪುಷ್ಪಾಗಣೇ ದಿವಾಲ ಅವರದ್ದು.

Advertisement

1969ರಲ್ಲಿ ಮಹಾರಾಷ್ಟ್ರದ ಪರಾಟ್ವಾ ಡಾದಲ್ಲಿ ಜನಿಸಿದ ಗಣೇದಿವಾಲಾ ಬಿ.ಕಾಂ, ಎಲ್‌ಎಲ್‌ಬಿ ಮತ್ತು ಎಲ್‌ಎಲ್‌. ಎಂ ಪದವೀಧರೆಯಾಗಿದ್ದಾರೆ. 2007ರಲ್ಲಿ ಜಿಲ್ಲಾ ನ್ಯಾಯಾಧೀಶರಾಗಿ ನೇಮಕವಾದ ಅವರು, ಮುಂದೆ ಮುಂಬಯಿಯ ಸಿಟಿ ಸಿವಿಲ್‌ ಕೋರ್ಟ್‌ ಮತ್ತು ನಾಗಪುರದ ಜಿಲ್ಲಾ ಮತ್ತು ಕುಟುಂಬ ನ್ಯಾಯಾಲಯಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ತದನಂತರ ಅವರು ನಾಗಪುರದ ಸೆಷನ್ಸ್‌ ನ್ಯಾಯಾಧೀಶರಾಗಿಯೂ ನೇಮಕವಾದರು. 2018ರಲ್ಲಿ ಬಾಂಬೆ ಹೈಕೋರ್ಟ್‌ ಗೆ ನೇಮಕಾತಿಗಾಗಿ ಪರಿಗಣಿಸಲ್ಪಟ್ಟ ಹಲವಾರು ನ್ಯಾಯಾಧೀಶರಲ್ಲಿ ಗಣೇದಿವಾಲಾ ಸಹ ಒಬ್ಬರಾಗಿದ್ದರು ಆದರೆ ಬಾಂಬೆ ಹೈಕೋರ್ಟ್‌ ಹಲವು ಕಾರಣಗಳಿಗಾಗಿ ಅವರ ನೇಮಕಾತಿಯ ವಿರುದ್ಧ ಶಿಫಾರಸು ಮಾಡಿತ್ತು. ಇದನ್ನು ಪರಿಗಣಿಸಿದ್ದ ಸುಪ್ರೀಂ ಕೋರ್ಟ್‌ಅವರ ನೇಮಕಾತಿಯನ್ನು ನಿರಾಕರಿಸಿತ್ತು. ಆದರೆ 2019ರಲ್ಲಿ ಮತ್ತೆ ಪರಿಶೀ ಲಿಸಿ, ಅವರನ್ನು ಬಾಂಬೆ ಹೈಕೋರ್ಟ್‌ ಹೆ ಚ್ಚುವರಿ ನ್ಯಾಯಾಧೀಶರನ್ನಾಗಿಸಲಾಯಿತು.

2019ರಲ್ಲಿ “ಪೆರೋಲ್‌ ಎನ್ನುವುದು ಕೈದಿಗಳಿಗೆ ಲಭ್ಯವಿರುವ ಹಕ್ಕು ಮತ್ತು ಅದು ಕೇವಲ ಆಡಳಿತಾತ್ಮಕ ನಿರ್ಧಾರವಲ್ಲ’ ಎಂದು ಅವರನ್ನೊಳಗೊಂಡ ಪೀಠ ಮಹತ್ವದ ತೀರ್ಪು ನೀಡಿತ್ತು. ಈ ತೀರ್ಪಿನ ಅನಂತರ, ಕೈದಿಯೊಬ್ಬ ಒಂದು ವರ್ಷದಲ್ಲಿ ಹಲವು ಬಾರಿ ಪೆರೋಲ್‌ ಪಡೆಯಬಹುದಾಗಿದೆ.

2020ರ ಅಕ್ಟೋಬರ್‌ ತಿಂಗಳಲ್ಲಿ ಕೋವಿಡ್‌ ಸೋಂಕಿತ ಗರ್ಭಿಣಿಗೆ ಆಸ್ಪತ್ರೆಯೊಂದು ಚಿಕಿತ್ಸೆ ನೀಡಲು ನಿರಾಕರಿಸಿತ್ತು. ಆಗ ಮಧ್ಯಪ್ರವೇಶಿಸಿದ ಅವರು, ಆ ಮಹಿಳೆ ಸೂಕ್ತ ಚಿಕಿತ್ಸೆ ನೀಡಬೇಕೆಂದು ನಿರ್ದೇಶಿಸಿ ದ್ದಷ್ಟೇ ಅಲ್ಲದೇ ಕೋವಿಡ್‌-19 ಸೋಂಕಿತರ ವಿರುದ್ಧದ ತಾರತಮ್ಯವನ್ನು, ದಲಿತರ ವಿರುದ್ಧದ ಅಸ್ಪೃಶ್ಯತೆಯ ಆಚರಣೆಗೆ ಹೋಲಿಸಿದ್ದರು. ಕುಟುಂಬ ನ್ಯಾಯಾಲಯಗಳಲ್ಲಿರುವ ಬಾಕಿ ಪ್ರಕರಣಗಳನ್ನು ತಗ್ಗಿಸಬೇಕು ಎಂದು ಅವರು ಸಾರ್ವಜನಿಕ ವಾಗಿಯೇ ಹೇಳುತ್ತಾ ಬಂದಿದ್ದಾರೆ. ಅಲ್ಲದೇ ಮಹಾರಾಷ್ಟ್ರ ಪೊಲೀಸರು ಸರಿಯಾಗಿ ತನಿಖೆ ನಡೆಸಲು ವಿಫ‌ಲವಾಗುತ್ತಿರುವುದರಿಂದ, ಅಪರಾಧಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳು ವಂತಾಗುತ್ತಿದೆ ಎಂದು ಸಾರ್ವ ಜನಿಕವಾಗಿಯೇ ಟೀಕಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next