ಅದೊಂದು ಸುಂದರ ಪರಿಸರದ ಹಳ್ಳಿ. ಆ ಹಳ್ಳಿಯ ಕೆಲವು ಜನರು ನಿಗೂಢವಾಗಿ ನಾಪತ್ತೆಯಾದರೆ, ಇನ್ನು ಕೆಲವರು ಇದ್ದಕ್ಕಿದ್ದಂತೆ ಊರು ಬಿಟ್ಟು ತೆರಳುತ್ತಿರುತ್ತಾರೆ.
ಎಲ್ಲವೂ ಚೆನ್ನಾಗಿದ್ದ ಹಳ್ಳಿಯಲ್ಲಿ ಇದ್ದಕ್ಕಿದ್ದಂತೆ ಹೀಗೇಕಾಗುತ್ತದೆ ಅನ್ನೋದರ ಜಾಡು ಹಿಡಿದು ಹೊರಡುತ್ತಾನೆ ನಾಯಕ. ಕೊನೆಗೆ ಇದೆಲ್ಲದಕ್ಕೂ ಉತ್ತರ ಸಿಗುತ್ತದೆ. ಇದು ಈ ವಾರ ತೆರೆಗೆ ಬಂದಿರುವ “ಗಂಡುಲಿ’ ಚಿತ್ರದ ಕಥಾಹಂದರ.
ಹೆಸರೇ ಹೇಳುವಂತೆ “ಗಂಡುಲಿ’ ಔಟ್ ಆ್ಯಂಡ್ ಔಟ್ ಆ್ಯಕ್ಷನ್ ಕಂ ಫ್ಯಾಮಿಲಿ ಕಥಾಹಂದರದ ಸಿನಿಮಾ. ಒಂದು ಆ್ಯಕ್ಷನ್ ಸಿನಿಮಾದಲ್ಲಿ ಇರಬೇಕಾದ ಎಲ್ಲ ಅಂಶಗಳನ್ನು ಇಟ್ಟುಕೊಂಡು “ಗಂಡುಲಿ’ಯನ್ನು ತೆರೆಗೆ ತಂದಿದ್ದಾರೆ ನಾಯಕ ನಟ ಕಂ ನಿರ್ದೇಶಕ ವಿನಯ್ ರತ್ನಸಿದ್ಧಿ.
ಇದನ್ನೂ ಓದಿ:ನೋ ಬಾಲ್ ವಿವಾದ; ಇನ್ನಿಂಗ್ ಡಿಕ್ಲೇರ್ ಗೆ ಮುಂದಾದ ಪಂತ್ ಗೆ ಪೀಟರ್ಸನ್ ಕ್ಲಾಸ್!
ಒಂದು ಒಳ್ಳೆಯ ಕಥಾಹಂದರವನ್ನು ಆಯ್ಕೆ ಮಾಡಿಕೊಂಡಿದ್ದರೂ, ಅದನ್ನ ಇನ್ನಷ್ಟು ಪರಿಣಾಮಕಾರಿಯಾಗಿ ಪ್ರೇಕ್ಷಕರ ಮುಂದೆ ತರುವ ಸಾಧ್ಯತೆಗಳನ್ನು ಚಿತ್ರತಂಡ ಸಮರ್ಪಕವಾಗಿ ಬಳಸಿಕೊಂಡಿದ್ದರೆ, “ಗಂಡುಲಿ’ ಅಬ್ಬರ ಇನ್ನಷ್ಟು ಹೆಚ್ಚಾಗಿರುತ್ತಿತು.
ಜಿ.ಎಸ್.ಕೆ