Advertisement

ಕಾಂಗ್ರೆಸ್‌ನಿಂದ ಗಾಂಧಿ ಸಿದ್ಧಾಂತ ನಾಶ

02:31 PM Mar 17, 2018 | |

ಔರಾದ: ಕಾಂಗ್ರೆಸ್‌ ಮುಖಂಡರು ಮಹಾತ್ಮಗಾಂಧೀಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಅವರ ಆಚಾರ, ವಿಚಾರ ನಡೆ-ನುಡಿ ಹಾಗೂ ಉತ್ತಮ ಸಿದ್ಧಾಂತಗಳನ್ನು ಸರ್ವನಾಶ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ ಕಾಂಗ್ರೆಸ್‌ ನಾಯಕರ ವಿರುದ್ಧ ವಾಗ್ಧಾಳಿ ನಡೆಸಿದರು.

Advertisement

ಪಟ್ಟಣ ಗುರುಪಾದಪ್ಪ ನಾಗಮಾರಪಳ್ಳಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ತಾಲೂಕು ಬಿಜೆಪಿ ಘಟಕ ಆಯೋಜಿಸಿದ್ದ ಬಿಜೆಪಿ ನವಶಕ್ತಿ ಸಮಾವೇಶದಲ್ಲಿ ಮಾತನಾಡಿದ ಅವರು, ಹಿಂದಿನ ಕಾಲದಿಂದಲೂ ಕಾಂಗ್ರೆಸ್‌ ಪಕ್ಷದ ಮುಖಂಡರು ತಮ್ಮ ಕಚೇರಿಯಲ್ಲಿ ಗಾಂಧೀಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರ ಹೆಸರಿನಲ್ಲಿ ಮತ ಕೇಳಿ ಅಧಿಕಾರಕ್ಕೆ ಬಂದ್ದಾರೆ. ಅವರ ಆಚಾರ ಹಾಗೂ ದೇಶದ ಅಭಿವೃದ್ಧಿಗೆ ಪೂರಕವಾದ ಉತ್ತಮ ಕೊಡುಗೆ ನೀಡುವಲ್ಲಿ ಕಾಂಗ್ರೆಸ್‌ ಸಂಪೂರ್ಣವಾಗಿ ವಿಫಲವಾಗಿದೆ. ಇಂಥ ಪಕ್ಷವನ್ನು ಜನ ಸಾಮಾನ್ಯರು ಶಾಶ್ವತವಾಗಿ ಮನೆಯಲ್ಲಿ ಕುಳಿತುಕೊಳ್ಳುವಂತೆ ಮಾಡಬೇಕು ಎಂದು ಸಲಹೆ ನೀಡಿದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ತಾಲೂಕಿನಲ್ಲಿ ಪಕ್ಷದ ಕಾರ್ಯಕರ್ತರು ಮಾಡಿದ ಕಠಿಣ ಪರಿಶ್ರಮದಿಂದ ಶಾಸಕ
ಪ್ರಭು ಚವ್ಹಾಣ ಪ್ರಚಂಡ ಬಹುಮತಗಳಿಂದ ವಿಜಯ ಸಾಧಿಸಿದ್ದಾರೆ. ಅದಂತೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಪ್ರಭು ಚವ್ಹಾಣ 40 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿ ಸುವಂತೆ ಪಕ್ಷದ ಕಾರ್ಯಕರ್ತರು ದುಡಿಯಬೇಕೆಂದು ಹೇಳಿದರು. ಕೇಂದ್ರದ ಮಾಜಿ ಸಚಿವೆ ಪುರಂದೇಶ್ವರಿ ಮಾತನಾಡಿ, ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಆಡಳಿತಕ್ಕೆ ಬಂದ ಬಳಿಕ 22 ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಆದ್ದರಿಂದ ಪಕ್ಷದ ಕಾರ್ಯಕರ್ತರು, ಪ್ರಧಾನಿ ಮೋದಿ ಅವರ ಜನಪರ ಯೋಜನೆ ಹಾಗೂ ಪಕ್ಷದ ತತ್ವ ಸಿದ್ಧಾಂತಗಳ ಬಗ್ಗೆ ಮತದಾರರ ಮನೆಮನೆಗೆ
ತೆರಳಿ ತಿಳಿಸಬೇಕು. ಆ ಮೂಲಕ ರಾಜ್ಯವನ್ನು ಕಾಂಗ್ರೆಸ್‌ ಮುಕ್ತವಾಗಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಶಾಸಕ ಪ್ರಭು ಚವ್ಹಾಣ ಮಾತನಾಡಿ, ತಾಲೂಕಿನ 4ಲಕ್ಷ ಜನರ ಸೇವಕನಾಗಿ 9 ವರ್ಷಗಳಿಂದ ನಿರಂತರವಾಗಿ ಜನರ
ಮಧ್ಯದಲ್ಲಿಯೇ ಉಳಿದುಕೊಂಡು ಜನರ ಹಾಗೂ ತಾಲೂಕಿನ ಅಭಿವೃದ್ಧಿಗಾಗಿ ನಿಸ್ವಾರ್ಥವಾಗಿ ದುಡಿಯುತ್ತಿದ್ದೇನೆ. ಜನರು ನೀಡಿರುವ ಅವಕಾಶವನ್ನು ಜನರ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದೇನೆ ಎಂದರು. 

ತಾಲೂಕಿನಲ್ಲಿ ಬಿಜೆಪಿ ಕಾರ್ಯಕರ್ತರು ಪಕ್ಷ ಬಲಿಷ್ಠಗೊಳಿಸಿಲು ನಿರಂತರವಾಗಿ ದುಡಿಯುತ್ತಿದ್ದಾರೆ. ಪಕ್ಷದ ಕಾರ್ಯಕರ್ತರ
ಕಠಿಣ ಪರಿಶ್ರಮದಿಂದ ಎರಡು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ ಎಂದರು. 

Advertisement

ಪಕ್ಷದ ವಿಭಾಗೀಯ ಸಂಘಟನಾ ಕಾರ್ಯದರ್ಶೀ ದತ್ತು ತುಗಾಂವಕರ್‌, ತಾಲೂಕು ಅಧ್ಯಕ್ಷ ಸತೀಶ ಪಾಟೀಲ, ಜಿಪಂ
ಸದಸ್ಯ ಅನೀಲ ಗುಂಡಪ್ಪ, ಮಾರುತಿ ಚವ್ಹಾಣ, ಮೀನಾ ಮಾಣಿಕ ಚವ್ಹಾಣ, ಜಿಪಂ ಮಾಜಿ ಸದಸ್ಯ ಕಾಶಿನಾಥ ಜಾಧವ, ವಸಂತ ಬಿರಾದಾರ, ಮುಖಂಡ ಬಂಡೆಪ್ಪ ಕಂಟೆ, ರಾಮಶೆಟ್ಟಿ ಪನ್ನಾಳೆ, ದೀಪಕ ಪಾಟೀಲ, ಅರಹಂತ ಸಾವಳೆ, ಕಿರಣ ಪಾಟೀಲ, ಡಾ| ವೈಜೀನಾಥ ಬುಟ್ಟೆ, ನಾಗೇಶ ಪತ್ರೆ, ಅಶೋಕ ಅಲ್ಮಾಜೆ, ಶೇಷರಾವ್‌ ಕೋಳಿ, ಚದ್ರಕಾಂತ ಪಾಟೀಲ, ಶರಣಬಸವ ಸಾವಳೆ ಹಾಗೂ ತಾಲೂಕಿನ ವಿವಿಧ ಗ್ರಾಮಗಳ ಪಕ್ಷದ ಕಾರ್ಯಕರ್ತರು, ಮುಖಂಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next