Advertisement
ಶಿವ ದೇಗುಲದ ದರ್ಶನಕ್ಕೆ ಭೇಟಿ ನೀಡುತ್ತಿದ್ದ ಅಪಾರ ಸಂಖ್ಯೆಯ ಭಕ್ತರಿಗೆ ಶಿವಪರಿವಾರ ಸಮೇತ ಮಹಾಗಿರಿಯ ದರ್ಶನಕ್ಕೂ ಅವಕಾಶ ದೊರಕಿದೆ. ಧಾರ್ಮಿಕ ಪುಣ್ಯಕ್ಷೇತ್ರವಾದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ.
Related Articles
Advertisement
ಲಕ್ಷ ಲಿಂಗ ಸಮೇತ ಆತ್ಮಲಿಂಗ ಪ್ರತಿಷ್ಠಾಪನಾ ಮಹೋತ್ಸವ ಹಿನ್ನೆಲೆಯಲ್ಲಿ ಭಕ್ತರಿಗೆ ದರ್ಶನ ಅವಕಾಶ ಮಾಡಿಕೊಡಲಾಗಿತ್ತು. ಸಾಮಾನ್ಯ ದಿನಗಳಲ್ಲಿ ಆತ್ಮಲಿಂಗ ದೇಗುಲದೊಳಕ್ಕೆ ಪ್ರವೇಶ ಇರಲ್ಲ. ಮಹಾಶಿವರಾತ್ರಿಯ ಕಾರ್ತಿಕ ಹುಣ್ಣಿಮೆ ದಿನಗಳಲ್ಲಿ ಅನುಮತಿ ಪಡೆಯುವ ದಂಪತಿಗೆ ಮಾತ್ರ ಲಿಂಗಾಭಿಷೇಕಕ್ಕೆ ಅವಕಾಶವಿರುತ್ತದೆ. ವರ್ಷದಲ್ಲಿ ಒಂದು ದಿನ ಬೆಳಗ್ಗೆ 4ಗಂಟೆಯಿಂದ 5.30ರವರೆಗೆ ದರ್ಶನ-ಅಭಿಷೇಕಕ್ಕೆ ಮಾತ್ರ ಅವಕಾಶ. ಅವರು ತಮ್ಮೊಂದಿಗೆ 10 ಮಂದಿಯನ್ನು ಮಾತ್ರ ಕರೆದುಕೊಂಡು ಹೋಗಿ ಅಭಿಷೇಕದಲ್ಲಿ ಭಾಗವಹಿಸಬಹುದು. ಶಿವಪರಿವಾರದ ಎಲ್ಲ ಶಕ್ತಿ ದೇವರು ಹಾಗೂ ಕರ್ನಾಟಕದಲ್ಲಿಯೇ ಅಪರೂಪವಾದ ಸ್ಪಟಿಕ ಲಿಂಗ (ಆತ್ಮಲಿಂಗ)ವನ್ನು ಪ್ರತಿಷ್ಠಾಪಿಸಿರುವುದರಿಂದ ಶ್ರೀಕ್ಷೇತ್ರ ಅಂತಾರಾಜ್ಯಮಟ್ಟದಲ್ಲೂ ಭಕ್ತರ ಗಮನ ಸೆಳೆಯುತ್ತಿದೆ.
ದೇಶದ ಹಲವಾರು ದೇವಸ್ಥಾನಗಳಿಗೆ ಭೇಟಿ ನೀಡಿ ದರ್ಶನ ಪಡೆದಿದ್ದು, ಗಾಂಧಿ ನಗರದಲ್ಲಿ ನಿರ್ಮಿಸಿರುವ ಸ್ಫಟಿಕಲಿಂಗ ಮಹಾಗಿರಿಯನ್ನು ನೋಡಿರಲಿಲ್ಲ. ಇದೊಂದು ಐತಿಹಾಸಿಕ ಪುಣ್ಯಕ್ಷೇತ್ರವಾಗಲಿದೆ. – ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ
-ಯಮನಪ್ಪ ಪವಾರ