Advertisement

ಗಾಂಧೀಜಿ ತತ್ವ-ಸಿದ್ಧಾಂತಗಳ ಅನುಸರಣೆ ಅಗತ್ಯ

11:37 AM Oct 03, 2018 | |

ಮೈಸೂರು: ಮಹನೀಯರ ಜಯಂತಿಗಳನ್ನು ಆಚರಿಸುವುದರಲ್ಲಿ ನಾವು ಸಂಭ್ರಮಿಸುತ್ತಿದ್ದೇವೆಯೇ ಹೊರತು ಅವರ ತತ್ವ-ಸಿದ್ಧಾಂತಗಳನ್ನು ಅನುಸರಿಸಲು ಮುಂದಾಗುತ್ತಿಲ್ಲ ಎಂದು ಸ್ವಾತಂತ್ರ್ಯ ಹೋರಾಟಗಾರರಾದ ನಿವೃತ್ತ ಶಿಕ್ಷಕ ವೈ.ಸಿ.ರೇವಣ್ಣ ವಿಷಾದಿಸಿದರು.

Advertisement

ನಗರದ ಬಿ.ಎನ್‌.ರಸ್ತೆಯ ಜೆಎಸ್‌ಎಸ್‌ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಏರ್ಪಡಿಸಿದ್ದ ಮಹಾತ್ಮ ಗಾಂಧೀಜಿ 150ನೇ ಜಯಂತಿ ಮತ್ತು ಅಂತಾರಾಷ್ಟ್ರೀಯ ಅಹಿಂಸಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದರು.

ನಮ್ಮಲ್ಲಿ ಸ್ವಾರ್ಥ ರಾಜಕಾರಣ ಮೇಲ್ಮೆ ಪಡೆಯುತ್ತಿದೆ. ಬುದ್ಧ, ಬಸವ, ಮಹಾತ್ಮಗಾಂಧಿ, ಲಾಲ್‌ ಬಹುದ್ದೂರ್‌ ಶಾಸಿŒ ಮುಂತಾದವರ ಜಯಂತಿಗಳನ್ನು ಆಚರಿಸಿ ಸಂಭ್ರಮಿಸಿದರಷ್ಟೇ ಸಾಲದು, ಅವರ ತತ್ವ-ಸಿದ್ಧಾಂತಗಳನ್ನೂ ಅನುಸರಿಸಬೇಕು. ಅಂದು ಬ್ರಿಟಿಷರ ವಿರುದ್ಧ ಹೋರಾಡಲು ದೇಶದಾದ್ಯಂತ ಯುವಕರು ಮುಂದಾದಂತೆ, ಇಂದು ಭ್ರಷ್ಟಾಚಾರದ ವಿರುದ್ಧ ಹೋರಾಡುವಲ್ಲಿ ಯುವಪಡೆ ಮುಂದಾಗಬೇಕಿದೆ ಎಂದರು.
 
92ನೇ ಇಳಿ ವಯಸ್ಸಿನಲ್ಲೂ ಉತ್ಸಾಹ ಕುಗ್ಗದೆ ಅಂದಿನ ದಿನಗಳನ್ನು ಸ್ಮರಿಸಿದ ಅವರು, ತಾವು ಶಿಕ್ಷಕರಾಗಿದ್ದಾಗ ಹಮ್ಮಿಕೊಂಡಿದ್ದ ಸ್ವತ್ಛ ಭಾರತ್‌ ಕಾರ್ಯಕ್ರಮ ಇಂದಿನ ಕೇಂದ್ರ ಸರ್ಕಾರ ಮುಂದುವರೆಸಿಕೊಂಡು ಬರುತ್ತಿರುವುದನ್ನು ಶ್ಲಾ ಸಿದರು.

ಜೆಎಸ್‌ಎಸ್‌ ಕಾಲೇಜು ಸಮುತ್ಛಯದ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ. ಸಾಂಬಶಿವಯ್ಯ ಮಾತನಾಡಿ, ಸ್ವಧರ್ಮ, ಸ್ವದೇಶಿ, ಸ್ವರಾಜ್ಯ ಈ ಮೂರು ಚಿಂತನೆಗಳನ್ನು ತಮ್ಮ ಮಂತ್ರ ಶಕ್ತಿಗಳಂತೆ ಮುನ್ನಡೆಸಿಕೊಂಡು ಬಂದ ಮಹಾತ್ಮ ಗಾಂಧೀಜಿಯವರು ದೇಶದ ನಾಡಿಮಿಡಿತ ಹಾಗೂ ಆತ್ಮ ಸ್ವರೂಪವನ್ನು ಬಲ್ಲವರಾಗಿದ್ದರು.

ಸಂತರಂತಹ ತಮ್ಮ ಜೀವನ ಕ್ರಮದಿಂದಾಗಿ ಮಹಾತ್ಮರೆಂಬ ಗೌರವಕ್ಕೆ ಭಾಜನರಾದ ಗಾಂಧೀಜಿ ಮಹಿಳೆಯರ ಬಗ್ಗೆಯೂ ಕಾಳಜಿ ಹೊಂದಿದವರಾಗಿದ್ದರು ಎಂದು ಹೇಳಿದರು. ಪ್ರಾಂಶುಪಾಲ ಪ್ರೊ.ಎಂ.ಮಹದೇವಪ್ಪ, ಪಿ.ಯು ಕಾಲೇಜಿನ ಪ್ರಾಂಶುಪಾಲ ಸೋಮಶೇಖರ ಎಸ್‌., ಸಂಚಾಲಕ ಪ್ರೊ.ಎಸ್‌.ಬಿ.ನಾಗರಾಜಮೂರ್ತಿ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next