Advertisement
ಗ್ರಾಮೀಣ ಭಾಗದ ಶ್ರೇಯೋಭಿವೃದ್ಧಿಗೆ ಗ್ರಾ.ಪಂ. ಆಡಳಿತ ಹಾಗೂ ಜನರ ಸಹಕಾರ ಜತೆಗೂಡಿ ರೂಪಿಸಿದ ಮಹತ್ತರ ಯೋಜನೆಗಳಿಂದಾಗಿ ಈ ಬಾರಿಯ ರಾಜ್ಯ ಸರಕಾರದ ಗಾಂಧಿ ಪುರಸ್ಕಾರದಡಿ ಪಂ. ಪ್ರಗತಿಗೆ ಸಂಬಂಧಿಸಿದ 150 ಅಂಕಗಳಲ್ಲಿ 138 ಅಂಕ ಪಡೆಯುವ ಮೂಲಕ ಮಡಂತ್ಯಾರು ಗ್ರಾ.ಪಂ. ಗಾಂಧಿ ಪುರಸ್ಕಾರಕ್ಕೆ ಆಯ್ಕೆಯಾಗಿದೆ.
ಪಂ. ವ್ಯಾಪ್ತಿಯಲ್ಲಿ ಪಾರೆಂಕಿ ಮತ್ತು ಕುಕ್ಕಳ ಎರಡು ಗ್ರಾಮಗಳಿದ್ದು, ಒಟ್ಟು 6,450 ಜನಸಂಖ್ಯೆ ಹೊಂದಿದೆ. 16 ಪಂ. ಸದಸ್ಯರಿದ್ದು, 6 ಸಿಬಂದಿಯಿದ್ದಾರೆ. ಎಲ್ಲ ಮನೆಗಳಲ್ಲೂ ಶೌಚಾಲಯ ಹೊಂದುವ ಮೂಲಕ ಬಯಲು ಶೌಚ ಮುಕ್ತ ಗ್ರಾಮ ವಾಗಿಸುವ ಗ್ರಾ.ಪಂ. ಕನಸು ಈಡೇರಿದೆ. ಇಷ್ಟು ಮಾತ್ರವಲ್ಲದೆ ಶೇ. 86 ತೆರಿಗೆ ಸಂಗ್ರಹಿಸಿ ಆದಾಯದಲ್ಲೂ ಪ್ರಗತಿಯತ್ತ ದಾಪುಗಾಲು ಇರಿಸಿದೆ. ಹೊಸತನದ ಕಲ್ಪನೆ ಸಾಕ್ಷಾತ್ಕಾರ
ನವೀನ ಚಿಂತನೆಗಳೊಂದಿಗೆ ಗ್ರಾಮಕ್ಕೆ ಹೊಸ ಆಯಾಮ ತಂದುಕೊಡುವಲ್ಲಿ ಅಧ್ಯಕ್ಷರು ಹಾಗೂ ಸದಸ್ಯರ ಪಾತ್ರ ಗೌರವಯುತ. ಗ್ರಾ.ಪಂ. ವ್ಯಾಪ್ತಿಯಲ್ಲಿ ಮಿಂಚುಬಂಧಕ ಅಳವಡಿಸಿದ ತಾಲೂಕಿನ ಏಕೈಕ ಗ್ರಾ.ಪಂ. ಆಗಿದೆ. ಪಂ. ಸಭಾಂಗಣ ದಲ್ಲಿ ಮಳೆ ಕೊಯ್ಲು ಅಳವಡಿಸಿ ಬೃಹತ್ ಟ್ಯಾಂಕ್‌ನಲ್ಲಿ ಸಂಗ್ರಹಿಸಿ, ಶುದ್ಧ ನೀರಿನ ಘಟಕದ ಮೂಲಕ ಕುಡಿಯುವ ನೀರನ್ನು 5 ಲೀ. 2ರೂ.ನಲ್ಲಿ ನೀಡುವ ವಿನೂತನ ಯೋಜನೆ ಜನ ಮೆಚ್ಚುಗೆ ಪಡೆದಿದೆ.
Related Articles
Advertisement
ಕುಡಿಯುವ ನೀರಿನ ಬಳಕೆ ಶುಲ್ಕ ವಸೂಲಿಗಾಗಿ ಸುಧಾರಿತ ತಂತ್ರಾಂಶ ಆಧಾರಿತ ಸಿಂಪ್ಯೂಟರ್ ಬಳಸಿ ಶುಲ್ಕದ ಬಿಲ್ ನೀಡುವುದು ಮತ್ತು ಶುಲ್ಕ ವಸೂಲಿ ಮಾಡುವ ವ್ಯವಸ್ಥೆ ಮಾಡಲಾಗಿದೆ. ಪಂ. ವ್ಯಾಪ್ತಿಯಲ್ಲಿ ಮಳೆ ನೀರು ಕೊಯ್ಲನ್ನು ಕಡ್ಡಾಯವಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ 100 ಕುಟುಂಬಗಳಿಗೆ ತಲಾ 1,000 ರೂ. ಸಹಾಯಧನ ನೀಡಲು ಕ್ರಮ ಕೈಗೊಂಡಿರುವುದು ಇತರ ಗ್ರಾಮಗಳೂ ಅನುಸರಿಸುವಂತೆ ಮಾಡಿದೆ.
ಸೊÌàದ್ಯೋಗಗ್ರಾಮೀಣ ಯುವ ಜನತೆಗೆ ಸೊÌàದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಗ್ರಾ.ಪಂ. ಸ್ವಂತ ಆದಾಯದ ಕ್ರಿಯಾ ಯೋಜನೆಯಲ್ಲಿ ಅನುದಾನ ಕಾಯ್ದಿರಿಸಿ 5 ಕುಟುಂಬಗಳ ಯುವತಿಯರಿಗೆ ಟೈಲರಿಂಗ್ ಯಂತ್ರ ವಿತರಿಸುವ ಮೂಲಕ ಸ್ವಾವಲಂಬಿ ಬದುಕಿಗೆ ಸಹಕಾರ ನೀಡಲಾಗಿದೆ. ಇ- ವೇಸ್ಟ್ ಮ್ಯಾನೇಜ್‌ಮೆಂಟ್ ಹೊಸ ಪರಿಕಲ್ಪನೆಯಂತೆ ಮಡಂತ್ಯಾರು ಗ್ರಾ.ಪಂ. ವ್ಯಾಪ್ತಿಯಲ್ಲಿ ಇ-ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಮಾಡಿದ ರಾಜ್ಯದ ಏಕೈಕ ಗ್ರಾ.ಪಂ. ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನರೇಗಾ ಯೋಜನೆಯಡಿ ವರ್ಷಕ್ಕೊಂದು ಸುಸಜ್ಜಿತ ರುದ್ರಭೂಮಿ ನಿರ್ಮಿಸಲಾಗಿದೆ. ಪಾರೆಂಕಿ ಗ್ರಾಮದ ಕುಕ್ಕಳಬೆಟ್ಟು ಬಳಿ ರುದ್ರಭೂಮಿ ನಿರ್ಮಾಣದ ಕಾರ್ಯ ಪೂರ್ಣಗೊಂಡು ಬಳಕೆಗೂ ಯೋಗ್ಯ ವಾಗಿದೆ. ಕುಕ್ಕಳ ಗ್ರಾಮದ ಮಂಜಲಪಲ್ಕೆ ಬಳಿ ರುದ್ರಭೂಮಿ ನಿರ್ಮಾಣದ ಕಾಮಗಾರಿ ಪ್ರಗತಿಯಲ್ಲಿದೆ. ನಿವೇಶನ ವಂಚಿತರಿಗೆ ನಿವೇಶನ
ನಿವೇಶನ ವಂಚಿತರಿಗೆ ಮನೆಗಳ ಹಂಚಿಕೆ ಯಾಗಿದ್ದು, 41 ಮನೆಗಳು 2017ರಲ್ಲಿ ಹಂಚಿಕೆಯಾಗಿವೆ. 2018-19ರಲ್ಲಿ 10 ಎಕ್ರೆ 56 ಸೆನ್ಸ್ ಜಾಗದಲ್ಲಿ 2.50 ಎಕ್ರೆ ಜಾಗವನ್ನು ಸಮತಟ್ಟು ಮಾಡಿ 50 ಫಲಾನುಭವಗಳಿಗೆ ಭೂಮಿ ಸಮತಟ್ಟು ಮಾಡಲಾಗುತ್ತಿದೆ. ಮಡಂತ್ಯಾರಿನ ಗೌರವ ಹೆಚ್ಚಿದೆ
ಗಾಂಧಿ ಪುರಸ್ಕಾರದಿಂದ ಗ್ರಾ.ಪಂ. ಆಡಳಿತದಲ್ಲಿ ಹೊಸತನ ರೂಪಿಸಲು ಸ್ಫೂರ್ತಿ ತಂದಂತಾಗಿದೆ. ಜನೋಪಯೋಗಿ ಚಿಂತನೆಯಿಂದ ಗ್ರಾಮ ಅಭಿವೃದ್ಧಿ ಸಾಧ್ಯ. ಅವಳಿ ಗ್ರಾಮಗಳ ಅಭ್ಯುದಯದ ಕಡೆಗೆ ಪಣ ನಿರಂತರವಾಗಿದ್ದು, ಗ್ರಾಮಸ್ಥರ ಪ್ರೋತ್ಸಾಹ, ಸಂಘ-ಸಂಸ್ಥೆಗಳ ಸಹಕಾರ, ಸದಸ್ಯರ ಸಹಮತದಿಂದ ಮಡಂತ್ಯಾರಿನ ಗೌರವ ಹೆಚ್ಚಿದೆ.
- ಗೋಪಾಲಕೃಷ್ಣ ಕೆ. ಕುಕ್ಕಳ, ಅಧ್ಯಕ್ಷರು, ಮಡಂತ್ಯಾರು ಗ್ರಾ.ಪಂ. ಸಾಧನೆಗೆ ಸಂದ ಪುರಸ್ಕಾರ
ಪಂ. ಅಭಿವೃದ್ಧಿ ಜತೆಗೆ ವಿಶೇಷ ಸಾಧನೆಗೆ ಸಂದ ಅಪರೂಪದ ಪುರಸ್ಕಾರ. ಗ್ರಾಮದ ಜನರ ಸಹಕಾರ, ಎಲ್ಲ ಪಕ್ಷಗಳ ಸದಸ್ಯರು ಹಾಗೂ ಸಿಬಂದಿಯ ಪ್ರೋತ್ಸಾಹ ಹಾಗೂ ರೋಟರಿ ಕ್ಲಬ್, ಜೆಸಿಐ, ಎಸ್‌ಕೆಡಿಆರ್‌ಡಿಪಿ, ವರ್ತಕರ ಸಂಘದ ನಿರಂತರ ಸಹಕಾರದಿಂದ ಪಂ. ವಿನೂತನ ಚಿಂತನೆಗೆ ತಕ್ಕ ಪುರಸ್ಕಾರ ಲಭಿಸಿದೆ.
- ನಾಗೇಶ್ ಎಂ. ಪಿಡಿಒ