ಕಾರ್ಕಳ: ಕಾರ್ಕಳ ಪುರಸಭೆ ವ್ಯಾಪ್ತಿಯ ಗಾಂಧಿ ಮೈದಾನದ ಬಳಿ ಇರುವ ಮಹಾತ್ಮಾ ಗಾಂಧಿ ಶಿಥಿಲ ಪ್ರತಿಮೆಗೆ ಹೊಸತನ ನೀಡಿ ಪುರಸಭೆ ಕ್ರಮ ಕೈಗೊಂಡಿದೆ.
2015ರಲ್ಲಿ ಅಂದಿನ ಪುರಸಭೆ ಅಧ್ಯಕ್ಷೆ ರೆಹಮತ್ ಶೇಖ್ ಹಾಗೂ ಮುಖ್ಯಾಧಿಕಾರಿ ರಾಯಪ್ಪ ಅವಧಿಯಲ್ಲಿ ಗಾಂಧಿ ಮೈದಾನದಲ್ಲಿ ಗಾಂಧಿ ಪ್ರತಿಮೆ ನಿರ್ಮಿಸಿದ್ದರು. ಅದಾದ ಬಳಿಕ ಪ್ರತಿಮೆ ನಿರ್ವಹಣೆಯಿಲ್ಲದೆ ಶೋಚನೀಯ ಸ್ಥಿತಿಗೆ ತಲುಪಿತ್ತು. ಪ್ರತಿಮೆಯ ಮೈಮೇಲಿನ ಬಟ್ಟೆ, ಕನ್ನಡಕ, ಕೈಕೋಲು ಎಲ್ಲವೂ ಬಣ್ಣ ಮಾಸಿ ನಾದುರಸ್ತಿಯಲ್ಲಿತ್ತು.
ಗಾಂಧಿಗೆ 150 ತುಂಬಿದಾಗಲೂ ಗಾಂಧಿ ಪ್ರತಿಮೆ ನವೀ ಕರಿಸುವ ಕೆಲಸ ಆಗಿರಲಿಲ್ಲ. ಪ್ರತಿ ಬಾರಿ ಸ್ವಾತಂತ್ರೊéàತ್ಸವ ಸಹಿತ ರಾಷ್ಟ್ರೀಯ ದಿನಾಚರಣೆ ಸಂದರ್ಭ ಅದೇ ಪ್ರತಿಮೆ ಬಳಿ ಗಣ್ಯರ ಸಮ್ಮುಖ ಕಾರ್ಯಕ್ರಮಗಳು ನಡೆಯುತ್ತಿದ್ದವು. ಗಣ್ಯರು ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡುತ್ತಿದ್ದರು. ಪ್ರತಿಮೆಯನ್ನು ನವೀಕರಿಸುವ ಕೆಲಸ ಆಗಿರಲಿಲ್ಲ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮರ ಪ್ರತಿಮೆ ಈ ರೀತಿ ಶಿಥಿಲಾವಸ್ಥೆಗೆ ತಲುಪಿರುವುದು ನಾಗರಿಕರಲ್ಲಿ ತೀರಾ ಅಸಮಾಧಾನಕ್ಕೆ ಕಾರಣವಾಗಿತ್ತು. ಪ್ರತಿಮೆ ಬಿದ್ದು ಮಹಾತ್ಮರಿಗೆ ಅವಮಾನ ಆಗುವ ಮೊದಲೇ ಅದನ್ನು ನವೀಕರಿಸುವ ಅಗತ್ಯದ ಕುರಿತು ಆಗಸ್ಟ್ ತಿಂಗಳಲ್ಲಿ ಉದಯವಾಣಿ ಸುದಿನ ವರದಿ ಪ್ರಕಟಿಸಿತ್ತು.
ಇದೇ ವೇಳೆ ಪುರಸಭೆ ಮುಖ್ಯಾಧಿಕಾರಿ ರೇಖಾ ಶೆಟ್ಟಿ ಪ್ರತಿಮೆ ಶಿಥಿಲಾವಸ್ಥೆಗೆ ತಲುಪಿರುವ ಹಿನ್ನೆಲೆಯಲ್ಲಿ ಗಾಂಧಿಜಯಂತಿಗೆ ಮೊದಲು ಕಾಯಕಲ್ಪ ನೀಡುವ ಭರವಸೆಯಿತ್ತಿದ್ದರು. ಅದರಂತೆ ಪುರಸಭೆ ವತಿಯಿಂದ ಸೆ. 29ರಂದು ಗಾಂಧಿ ಪ್ರತಿಮೆಗೆ ಸಿಲ್ವರ್ ಬಣ್ಣ ಬಳಿದು ಅಂದಗೊಳಿಸಲಾಗಿದೆ. ಶಿಥಿಲವಿದ್ದ ಪ್ರತಿಮೆಯನ್ನು ನವೀಕರಿಸಲಾಗಿದೆ. ಗಾಂಧಿಜಯಂತಿ ಆಚರಣೆಗೆ ಇನ್ನೆರಡು ದಿನಗಳು ಬಾಕಿ ಇರುವಂತೆ ಹೊಸ ಲುಕ್‌ನಲ್ಲಿ ಗಾಂಧಿ ಪ್ರತಿಮೆ ಶೋಭಿಸುತ್ತಿ ರುವುದು ನಾಗರಿಕ ರಿಗೂ ಸಮಾಧಾನ ತಂದಿದೆ.