Advertisement

ಕಾರಾಗೃಹದಲ್ಲಿ ಗಾಂಧಿ ಜಯಂತಿ ಆಚರಣೆ

04:20 PM Oct 04, 2018 | Team Udayavani |

ಹಾವೇರಿ: ಇಲ್ಲಿಯ ಬಸವೇಶ್ವರ ನಗರದ ಮಹಿಳಾ ನಾಗರಿಕ ವೇದಿಕೆ ಗಾಂಧಿ ಜಯಂತಿ ಜಿಲ್ಲಾ ಕಾರಾಗೃಹದ ವಿಚಾರಣಾ ಕೈದಿಗಳೊಂದಿಗೆ ವಿಶಿಷ್ಟವಾಗಿ ಆಚರಿಸಿತು. ಜಿಲ್ಲಾ ಕಾರಾಗೃಹದ ಗ್ರಂಥಾಲಯಕ್ಕೆ ಭೇಟಿ ಕೊಟ್ಟ ವೇದಿಕೆ ಸದಸ್ಯರು ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಕೈದಿಗಳ ಓದಿಗಾಗಿ ನೀಡಿದರು.

Advertisement

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಕಾರಾಗೃಹದ ಅಧೀಕ್ಷಕ ಟಿ.ಬಿ. ಭಜಂತ್ರಿ ಮಾತನಾಡಿ, ಮಹಿಳೆ ಸಮಾಜದಲ್ಲಿ ಬೆರೆತು ತೊಡಗಿಸಿಕೊಳ್ಳಬೇಕೆಂಬ ಗಾಂಧೀಜಿಯವರ ಆಶಯದಂತೆ ಮಹಿಳಾ ವೇದಿಕೆಯವರು ಕೈದಿಗಳೊಂದಿಗೆ ಗಾಂಧಿ ಜಯಂತಿ ಆಚರಿಸಲು ಬಂದದ್ದು ಸಂತೋಷ ಸಂಗತಿ. ನೊಂದವರೊಂದಿಗೆ ಸಂತೋಷ ಹಂಚಿಕೊಳ್ಳುವುದು ಬಲು ದೊಡ್ಡ ಪ್ರೀತಿ ಎಂದರು.

ವೇದಿಕೆಯ ಅಧ್ಯಕ್ಷೆ ಅನುಪಮಾ ಹಿರೇಮಠ ಮಾತನಾಡಿ, ತಪ್ಪು ಮಾಡಿಯೋ, ಮಾಡದೆಯೋ ಬಂಧಿತರು ಜೈಲಿನೊಳಗೆ ನೋವು ಅನುಭವಿಸುತ್ತಿದ್ದರೆ ಕುಟುಂಬದ ಸದಸ್ಯರು ಹೊರಗೆ ಮನೆಯಲ್ಲಿ ಯಾತನೆಯನ್ನು ಅನುಭವಿಸುತ್ತಿರುತ್ತಾರೆ. ಶಿಕ್ಷೆ ಎಂಬುದು ಎರಡೂ ಕಡೆಗೆ ಇರುತ್ತದೆ. ಪರಿವರ್ತನೆಯೇ ದುಃಖಕ್ಕೆ ಪರಿಹಾರ ಎಂಬ ಗಾಂಧೀಜಿ ಅವರ ಮಾತನ್ನು ಅನುಸರಿಸುವಂತಾಗಬೇಕು ಎಂದರು. ನಗರಸಭೆ ಮಾಜಿ ಅಧ್ಯಕ್ಷೆ ರತ್ನಾ ಭೀಮಕ್ಕನವರ ಮಾತನಾಡಿ, ತಪ್ಪುಗಳಿಗೆ ಪ್ರಾಯಶ್ಚಿತ ಪಟ್ಟು ಹೊಸ ಜೀವನ ನಡೆಸುವ ಸಂಕಲ್ಪವು ಸೆರೆವಾಸದಲ್ಲಿ ಆದರೆ, ಮಹಾಪರಿವರ್ತನೆ ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಪಾರ್ವತಮ್ಮಾ ಹಲಗಣ್ಣನವರ, ತೇಜಶ್ವಿ‌ನಿ ಕಾಶೆಟ್ಟಿ, ಶಶಿಕಲಾ ಮಠದ, ಜಯಶ್ರೀ ಕಾರಂಜಿ, ನಿರ್ಮಲಾ ಯತ್ನಳ್ಳಿ, ಕಸ್ತೂರಮ್ಮಾ ರಿತ್ತಿ ಮುಂತಾದವರು ಪಾಲ್ಗೊಂಡಿದ್ದರು. ಗಾಂಧಿ ಭಜನ ಮತ್ತು ದೇಶ ಭಕ್ತಿಗೀತೆಗಳನ್ನು ಕೈದಿಗಳೊಂದಿಗೆ ಮಮತಾ ಹಿಂಚಿಗೇರಿ ಮುಂತಾದವರು ಹಾಡಿ ಮನಗೆದ್ದರು. ರಾಜೇಶ್ವರಿ ಸಾರಂಗಮಠ ಗಾಂಧೀಜಿ ಕುರಿತು ಕಾವ್ಯವಾಚನ ಮಾಡಿದರು. 

ವೇದಿಕೆಯ ಕಾರ್ಯದರ್ಶಿ ಲತಾ ಹಳಕೊಪ್ಪ ಪ್ರಾರ್ಥನೆ ಹಾಡಿದರು. ಜಿಲ್ಲಾ ಕಾರಾಗೃಹದ ಸಂದರ್ಶಕ ಮಂಡಳಿಯ ಸದಸ್ಯೆ ರೇಣುಕಾ ಗುಡಿಮನಿ ಸ್ವಾಗತಿಸಿದರು. ಕವಿತಾಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನಾಡಿದರೆ, ಸರೋಜಾ ಬಣಕಾರ ನಿರೂಪಿಸಿದರು. ಪ್ರೇಮಾ ಬೋಗಾರ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next