ದಾಂಡೇಲಿ : ನಗರದ ವೆಸ್ಟ್ ಕೊಸ್ಟ್ ಕಾಗದ ಕಾರ್ಖಾನೆಯಲ್ಲಿ ಗಾಂಧಿ ಜಯಂತಿ ಆಚರಣೆ ವೇಳೆ ಕಾರ್ಖಾನೆಯ ಸಿ.ಎಸ್.ಆರ್ ಯೋಜನೆಯಡಿ ಬ್ಯಾರಿಕೇಡ್ ಗಳನ್ನು ಮತ್ತು ನೀರು ಸರಬರಾಜು ಮಾಡುವ 2 ಟ್ಯಾಂಕ್ ಗಳನ್ನು ವಿತರಿಸುವ ಕಾರ್ಯಕ್ರಮವನ್ನು ಶನಿವಾರ ನಡೆಸಲಾಯಿತು.
ಆರಂಭದಲ್ಲಿ ಮಹಾತ್ಮಾ ಗಾಂಧೀಜಿಯವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಆರತಿ ಬೆಳಗಿ ಪೂಜೆ ಸಲ್ಲಿಸಲಾಯಿತು. ನಗರ ಸಭೆಯ ಅಧ್ಯಕ್ಷೆ ಸರಸ್ವತಿ ರಜಪೂತ್, ಉಪಾಧ್ಯಕ್ಷ ಸಂಜಯ್ ನಂದ್ಯಾಳ್ಕರ, ಸ್ಥಾಯಿ ಸಮಿತಿ ಅಧ್ಯಕ್ಷ ಮೌಲಾಲಿ ಮುಲ್ಲಾ, ತಹಶೀಲ್ದಾರ್ ಶೈಲೇಶ ಪರಮಾನಂದ, ಪೌರಾಯುಕ್ತರಾದ ಆರ್.ಎಸ್.ಪವಾರ್, ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಕೆ.ಜಿ.ಗಿರಿರಾಜ ಹಾಗೂ ನಗರ ಸಭೆಯ ಸದಸ್ಯರುಗಳು .ಉಪಸ್ಥಿತರಿದ್ದರು.
ಕಾರ್ಖಾನೆಯ ಸಿ.ಎಸ್.ಆರ್ ಯೋಜನೆಯಡಿ 50 ಬ್ಯಾರಿಕೇಡ್ ಗಳನ್ನು ಹಾಗೂ ನಗರ ಸಭೆಗೆ 2 ನೀರು ಸರಬರಾಜು ಮಾಡುವ ನೀರಿನ ಟ್ಯಾಂಕ್ ಗಳನ್ನು ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಕೆ.ಜಿ.ಗಿರಿರಾಜ ಅವರು ನಗರ ಸಭೆಯ ಅಧ್ಯಕ್ಷರಾದ ಸರಸ್ವತಿ ರಜಪೂತ್ ಹಾಗೂ ಉಪಾದ್ಯಕ್ಷರಾದ ಸಂಜಯ್ ನಂದ್ಯಾಳ್ಕರ್ ಮತ್ತು ಪೌರಾಯುಕ್ತರಾದ ಆರ್.ಎಸ್.ಪವಾರ್ ಅವರ ಮೂಲಕ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೆ.ಜಿ.ಗಿರಿರಾಜ ಅವರು ವೆಸ್ಟ್ ಕೊಸ್ಟ್ ಕಾಗದ ಕಾರ್ಖಾನೆಯು ತನ್ನ ಸಿ.ಎಸ್.ಆರ್ ಯೋಜನೆಯಡಿ ಸಾರ್ವಜನಿಕ ಹಾಗೂ ಶೈಕ್ಷಣಿಕ ಕ್ಷೇತ್ರಕ್ಕೆ ತನ್ನದೇ ಆದ ರೀತಿಯ ಕೊಡುಗೆಯನ್ನು ನೀಡುತ್ತಿದೆ. ಈ ನಿಟ್ಟಿನಲ್ಲಿ ಇಂದು ಅವಶ್ಯವಾಗಿ ಬೇಕಾಗಿದ್ದ ಬ್ಯಾರಿಕೇಡ್ ಗಳನ್ನು ಹಾಗೂ ನೀರಿನ ಟ್ಯಾಂಕುಗಳನ್ನು ವಿತರಿಸಲಾಗಿದೆ ಎಂದರು.
ನಗರ ಸಭೆಯ ಅಧ್ಯಕ್ಷೆ ಸರಸ್ವತಿ ರಜಪೂತ್ ಅವರು ಕಾಗದ ಕಾರ್ಖಾನೆಯ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಮೌಲಾಲಿ ಮುಲ್ಲಾ, ನಗರ ಸಭಾ ಸದಸ್ಯರುಗಳಾದ ಯಾಸ್ಮಿನ್ ಕಿತ್ತೂರು, ಆಷ್ಪಾಕ್ ಶೇಖ, ಮಜೀದ್ ಸನದಿ, ನರೇಂದ್ರ ಚೌವ್ಹಾಣ್, ಮೋಹನ ಹಲವಾಯಿ, ಆಸೀಪ್ ಮುಜಾವರ, ದಶರಥ ಬಂಡಿವಡ್ಡರ, ವೆಂಕಟ್ರಮಣಮ್ಮ ಮೈಥುಕುರಿ, ಪ್ರೀತಿ ನಾಯರ್, ರುಕ್ಮಿಣಿ ಬಾಗಾಡೆ, ಪದ್ಮಜಾ ಜನ್ನು, ರುಹಿನಾ ಖತೀಬ್, ಸಪೂರ ಯರಗಟ್ಟಿ ಹಾಗೂ ಕಾಗದ ಕಾರ್ಖಾನೆಯ ಸಿಬ್ಬಂದಿಗಳಾದ ಖಲೀಲ್ ಕುಲಕರ್ಣಿ, ರಾಜು ರೋಸಯ್ಯಾ, ಬಸೀರ್ ಶೇಖ್, ಮಹೇಶ ನಾಗಪ್ಪ, ರಾಜು, ಸಂತೋಷ್, ಮಹಮ್ಮದ್ ಮೊದಲಾದವರು ಉಪಸ್ಥಿತರಿದ್ದರು.