Advertisement
ಧ್ವಜಾರೋಹಣ ವೇಳೆ ಆಗಿದ್ದೇನು?ಧ್ವಜಾರೋಹಣಕ್ಕೆಂದು ಸಿಎಂ ಸಿದ್ದರಾಮಯ್ಯ ಶೂ ಬಿಚ್ಚಲು ಹೋದಾಗ ಅವರು ಬಗ್ಗಿ ಲೇಸ್ ಬಿಚ್ಚಲು ಸಾಧ್ಯವಾಗಿರಲಿಲ್ಲ. ಇದನ್ನು ಕಂಡ ಕಾರ್ಯಕರ್ತರೊಬ್ಬರು ಸಿದ್ದರಾಮಯ್ಯ ಶೂ ಲೇಸ್ ಬಿಚ್ಚಲು ಸಹಾಯ ಮಾಡಲು ಮುಂದಾದರು. ಆದರೆ ಕೈಯಲ್ಲಿ ಭಾರತ ಧ್ವಜ ಇರೋದನ್ನೇ ಆತ ಮರೆತ್ತಿದ್ದರು, ಇದನ್ನು ಮನಗಂಡು ಪಕ್ಕದಲ್ಲಿದ್ದ ವ್ಯಕ್ತಿ ಕೂಡಲೇ ಕಾರ್ಯಕರ್ತನ ಕೈಯಲ್ಲಿದ್ದ ರಾಷ್ಟಧ್ವಜವನ್ನು ಕಿತ್ತುಕೊಂಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಶೂ ಲೇಸ್ ಬಿಚ್ಚುವ ವೇಳೆ ಧ್ವಜ ಕಾಲಿಗೆ ತಾಗುತ್ತಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ. ಕಾರ್ಯಕರ್ತ ಶೂ ಲೇಸ್ ಬಿಚ್ಚುವ ವೇಳೆ ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ಶೂ ಲೇಸ್ ಬಿಚ್ಚಿರುವುದು ಸದ್ಯ ಭಾರೀ ಟೀಕೆಗೆ ಕಾರಣವಾಗಿದೆ.
ಕಾರ್ಯಕರ್ತರೊಬ್ಬರು ಸಿದ್ದರಾಮಯ್ಯ ಶೂ ಲೇಸ್ ಬಿಚ್ಚುವಾಗ ರಾಷ್ಟ್ರಧ್ವಜ ಕೈ ಯಲ್ಲಿ ಹಿಡಿದಿರುವುದನ್ನು ವಿಪಕ್ಷ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತನ್ನ ಎಕ್ಸ್ ಖಾತೆಯಲ್ಲಿ ಟೀಕಿಸಿದ್ದಾರೆ. “ಗುಲಾಮಗಿರಿಯ ದವಡೆಯಿಂದ ಮುಕ್ತವಾದ ಭಾರತ, ಇಂದು ವಿಶ್ವದ ಮುಂಚೂಣಿ ರಾಷ್ಟ್ರವಾಗಿದೆ. ರಾಷ್ಟ್ರಭಕ್ತಿ, ರಾಷ್ಟ್ರಧ್ವಜ, ರಾಷ್ಟ್ರ ಭಕ್ತರು ಎಂದರೆ ಕಾಂಗ್ರೆಸ್’ಗೆ ಯಾವಾಗಲೂ ಕಾಲ ಕಸ. ಗುಲಾಮಗಿರಿಯನ್ನು ಆರಾಧಿಸಿಕೊಂಡು ಬಂದ ಕಾಂಗ್ರೆಸ್ಸಿಗರು ರಾಷ್ಟ್ರಧ್ವಜವನ್ನು ಗಾಂಧಿ ಜಯಂತಿಯಂದೇ ಗುಲಾಮಗಿರಿಯ ಸಂಕೇತದಂತೆ ಕಾಲಕಸವಾಗಿ ಕಂಡಿರುವುದು, ಸ್ವತಃ ಮುಖ್ಯಮಂತ್ರಿಗಳು ಅದನ್ನು ಆಕ್ಷೇಪಿಸದೆ ಉತ್ತೇಜಿಸುವ ಮಾದರಿಯಲ್ಲಿ ಉಡಾಫೆ ಪ್ರದರ್ಶಿಸಿರುವುದು ರಾಷ್ಟ್ರ ಹಾಗೂ ರಾಷ್ಟ್ರಧ್ವಜಕ್ಕೆ ಮಾಡಿದ ಅಪಮಾನವಾಗಿದೆ”. ಈ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷವು ಭಾರತೀಯರ ಕ್ಷಮೆ ಕೇಳಲಿ ಎಂದು ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.
Related Articles
ವಿಧಾನಸೌಧದ ಮುಂಭಾಗ 200ನೇ ಕಿತ್ತೂರು ವಿಜಯೋತ್ಸವ ಆಚರಣೆಯ ಕಾರ್ಯಕ್ರಮ ವೇಳೆ ವಿಜಯಜ್ಯೋತಿ ಯಾತ್ರೆಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ಈ ವೇಳೆ ವಿಜಯಜ್ಯೋತಿಗೆ ಚಾಲನೆ ನೀಡುವ ಸಂದರ್ಭದಲ್ಲಿ ಗ್ರೀನ್ ಫ್ಲ್ಯಾಗ್ ತೆಗೆದುಕೊಳ್ಳಲು ಮುಂದಾದ ವೇಳೆ ಸಿಎಂ ಅವರು ಧರಿಸಿದ್ದ ಬಟ್ಟೆಗೆ ಬೆಂಕಿಯ ಬಿಸಿ ತಾಕಿತ್ತು, ಕೂಡಲೇ ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ಎಚ್ಚೆತ್ತು ಸಿದ್ದರಾಮಯ್ಯರನ್ನು ಬೆಂಕಿಯಿಂದ ದೂರ ಸರಿಸಿದರು. ಆ ಬಳಿಕ ಸಿಎಂ ಯಾತ್ರೆಗೆ ಚಾಲನೆ ನೀಡಿದ್ದು, ಈ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಿತ್ತೂರು ಉತ್ಸವ ಜ್ಯೋತಿಗೆ ಚಾಲನೆ ನೀಡಿದ ಬಳಿಕ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಜಾಗ ಬಿಡಲು ಸಿಎಂ ಮುಂದಾದ ಘಟನೆಯು ಈ ವೇಳೆ ನಡೆಯಿತು.
Advertisement
ವಿಜಯಜ್ಯೋತಿ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಅಕ್ಟೋಬರ್ 23, 24, 25 ರಂದು ಕಿತ್ತೂರು ಚೆನ್ನಮ್ಮನ ಉತ್ಸವ ನಡೆಯಲಿದೆ. ಅದರ ಅಂಗವಾಗಿ ವಿಜಯಜ್ಯೋತಿ ಯಾತ್ರೆ ನಡೆಯುತ್ತಿದೆ, ವಿಜಯಜ್ಯೋತಿ ಯಾತ್ರೆ ಇಂದಿನಿಂದ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಕಿತ್ತೂರು ತಲುಪಲಿದೆ. 23 ರಂದು ಕಿತ್ತೂರಿನಲ್ಲಿ ವಿಜಯೋತ್ಸವ ಆಚರಿಸುತ್ತೇವೆ ಎಂದರು.