Advertisement

ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ದೈವಿಕ ಮಾರ್ಗದರ್ಶಿ: ಪ್ರಮೋದ್ ಸಾವಂತ್

02:53 PM May 26, 2022 | Team Udayavani |

ಮೈಸೂರು: ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಧ್ಯಾನ ಹಾಗೂ ಸಂಗೀತಕ್ಕೆ ಹೆಸರುವಾಸಿಯಾಗಿದ್ದಾರೆ ಮತ್ತು ಅವರು ಪ್ರಾಚೀನ ವೈದಿಕ ಸಂಪ್ರದಾಯಗಳನ್ನು ಉತ್ತೇಜಿಸುವ ದೈವಿಕ ಮಾರ್ಗದರ್ಶಿ ಎಂದು ಪರಿಗಣಿಸಲ್ಪಟ್ಟಿದ್ದಾರೆ ಎಂದು ಗೋವಾ ಮುಖ್ಯ ಮಂತ್ರಿ ಪ್ರಮೋದ್ ಸಾವಂತ್ ಬಣ್ಣಿಸಿದರು.

Advertisement

ಶ್ರೀಗಳವರ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಾವಂತ್ ಅವರುಮಾತನಾಡಿ, ಶ್ರೀಗಳು ನಾದ ಬ್ರಹ್ಮ .ಅವರ ಈ ಉಪಾಸನೆಯು ರಾಷ್ಟ್ರಕ್ಕೆ ಒಂದು ದೊಡ್ಡ ಸೇವೆಯಾಗಿದೆ ಮತ್ತು ನಮ್ಮ ಸಂಗೀತ ಪರಂಪರೆಯನ್ನು ಉಳಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.

ದತ್ತಾತ್ರೇಯರು ಇರುವೆಯಿಂದ ಆನೆಯವರೆಗಿನ ಪ್ರಕೃತಿಯಲ್ಲಿ 24 ಗುರುಗಳನ್ನು ಕಂಡುಕೊಂಡಿದ್ದಾರೆ ಎಂದು ತಿಳಿದಿದೆ, ಇದು ಪ್ರಕೃತಿಯನ್ನು ಆರಾಧಿಸುವ ಸಾಮರಸ್ಯವನ್ನು ತೋರಿಸುತ್ತದೆ. ಪರಿಸರ ಸಂರಕ್ಷಣೆ, ಶುಕ ವನದ ಸ್ಥಾಪನೆ ಮತ್ತು ಪಕ್ಷಿಗಳ ಪುನರ್ವಸತಿಗಾಗಿ ಶ್ರಮಿಸುತ್ತಿರುವ ಪೂಜ್ಯ ಸ್ವಾಮಿಗಳು ನಮ್ಮೊಂದಿಗೆ ಇರುವುದಕ್ಕೆ ನಾವು ಧನ್ಯರು ಎಂದು ಹೇಳಿದರು.

ಈ ಪಕ್ಷಿಧಾಮವು 2100 ಹೆಚ್ಚು ಪಕ್ಷಿಗಳನ್ನು ಹೊಂದಿದೆ. ಪರಿಸರ ಹಾಗೂ ಪ್ರಾಣಿ ಪಕ್ಷಿಗಳನ್ನು ಸಂರಕ್ಷಿಸುವ ಇಂತಹ ಕಾರ್ಯಗಳು ಅತ್ಯಂತ ದೈವಿಕವಾದುದು ಮತ್ತು ಮುಂದಿನ ಪೀಳಿಗೆಗೆ ಸುಸ್ಥಿರತೆಗೆ ಸಹಾಯ ಮಾಡುತ್ತದೆ ಎಂದು ತಿಳಿಸಿದರು.

ಸ್ವಾಮೀಜಿಯವರ ಕೆಲಸವನ್ನು ಗಿನ್ನೆಸ್ ಬುಕ್ ಆಫ್ ರೆಕಾರ್ಡ್‌ನಂತಹ ಅನೇಕ ಪ್ರಶಸ್ತಿಗಳು ಮತ್ತು ಮನ್ನಣೆಗಳಿಂದ ಗುರುತಿಸಲಾಗಿದೆ. ಶ್ರೀ ಸ್ವಾಮೀಜಿಯವರು ಸಂಗೀತಕ್ಕೆ ಹೆಸರುವಾಸಿಯಾಗಿದ್ದಾರೆ.

Advertisement

ಶಾಸ್ತ್ರೀಯ ಸಂಗೀತದ ಅನೇಕ ಮಾಸ್ಷರುಗಳನ್ನು ನಿರ್ಮಿಸಿದ ಗೋಮಾಂತಕ ಭೂಮಿಯಿಂದ ಬಂದವರು. ಶ್ರೀ ಸ್ವಾಮಿ ಜಿಯವರ ಆಶೀರ್ವಾದದೊಂದಿಗೆ, ಗೋವಾದ ಸಾಂಸ್ಕೃತಿಕ ಶ್ರೀಮಂತ ಗುರುತನ್ನು ಉತ್ತೇಜಿಸಲು ನಾವು ಕೆಲಸ ಮಾಡುತ್ತೇವೆ ಎಂದು ಸಾವಂತ್ ತಿಳಿಸಿದರು.

ಪೂಜ್ಯ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಅವರು ಬಾಲ ಸ್ವಾಮೀಜಿ ಆಗಿದ್ದಾರೆ. ಅವರು ಶ್ರೀಮಂತ ಜ್ಞಾನ ವೇದಗಳನ್ನು ಭಕ್ತರಿಗೆ ಸರಳ ಭಾಷೆಯಲ್ಲಿ ಭಾಷಾಂತರಿಸುವ ಧರ್ಮದ ಕಡೆಗೆ ಅವರ ಮಹಾನ್ ಕಾರ್ಯಕ್ಕೆ ಹೆಸರುವಾಸಿಯಾಗಿದ್ದಾರೆ ಬಣ್ಣಿಸಿದರು.

ವೇದಗಳ ಶ್ರೀಮಂತ ಸಂಪ್ರದಾಯಗಳನ್ನು ಪ್ರಚಾರ ಮಾಡುವಲ್ಲಿ ಇದರ ಪ್ರಮುಖ ಕಾರ್ಯವು ಇದೇ ರೀತಿ ಮುಂದುವರಿಯಲಿ ಎಂದು ಸಿಎಂ ಹಾರೈಸಿದರು.

ಪೂಜ್ಯ ಸ್ವಾಮಿಗಳ ಜನ್ಮದಿನದ ಇಂತಹ ಪುಣ್ಯ ಸಂದರ್ಭದಲ್ಲಿ ಉಪಸ್ಥಿತರಿರುವುದು ನನ್ನ ಅದೃಷ್ಟ. ಗೋವಾದ ಸಾಂಸ್ಕೃತಿಕ ಪರಂಪರೆ ಗೋವಾದ ದತ್ತ ದೇವಾಲಯಗಳಿಗೆ ಭೇಟಿ ನೀಡುವಂತೆ ಸ್ವಾಮೀಜಿ ಅವರನ್ನು ವಿನಂತಿಸುತ್ತೇನೆ. ಗೋವಾ ಅನೇಕ ಸಂತರಿಂದ ಆಶೀರ್ವದಿಸಲ್ಪಟ್ಟ ಪುಣ್ಯಭೂಮಿಯಾಗಿದೆ. ಸ್ವಾಮಿಜಿ ಅವರು ಭೇಟಿ ನೀಡಿ ಗೋವಾವನ್ನು ಆಶೀರ್ವದಿಸುವಂತೆ ನಾವು ವಿನಂತಿಸುತ್ತೇವೆ ಎಂದು ಪ್ರಮೋದ್ ಸಾವಂತ್ ನುಡಿದರು.

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಭಕ್ತರಿಗೆ ಆಶೀರ್ವಚನ ನೀಡಿ ಯೋಗಿ,ಭೋಗಿ,ತ್ಯಾಗಿ,ವಿರಾಗಿ ಎಲ್ಲರೂ ಆ ದೇವನ ಮಕ್ಕಳು.ಆದರೆ ಎಲ್ಲರಿಗೂ ಗುರು ದತ್ತಾತ್ರೇಯ ಎಂದರು.ದತ್ತಾತ್ರೇಯನ ನಾಮ ಸ್ಮರಣೆಯಿಂದ ಎಲ್ಲರೂ ಸಂತುಷ್ಟರಾಗಬಹುದು. ನೀವು ಯಜ್ಞ, ಯಾಗ,ಹೋಮ,ವಿಶೇಷ ಅಭಿಶೇಕ ಏನೇ ಮಾಡಿ ಆದರೆ ಆ ಗುರು ದತ್ತನ ಸ್ಮರಣೆಯೊಂದಿದ್ದರೆ ಸಾಕು ಅವನ ಕೃಪೆ ದೊರೆಯುತ್ತದೆ ಎಂದು ಶ್ರೀಗಳು ಹೇಳಿದರು.

ಅವರವರ ಕರ್ಮಗಳ ಅನುಸಾರ ಜೀವನ ಸಾಗುತ್ತದೆ.ಆದರೆ ನಾವು ಮಾಡುವ ಪಾಪಗಳನ್ನು ತೊಡೆದು ಹಾಕಲು ಸದ್ಗುರು ದತ್ತನ ಆರಾಧನೆಯೊಂದೇ ದಾರಿ ಎಂದು ಸ್ವಾಮೀಜಿಯವರು ಬಣ್ಣಿಸಿದರು. ನಾನೂ ಕೂಡಾ ದತ್ತನ ಆರಾದಕ ಎಲ್ಲರಿಗೂ ಒಳಿತಾಗಲಿ ಎಂದು ಹರಿಸಿದರು.

ಗೋವಾದಿಂದ ಮುಖ್ಯ ಮಂತ್ರಿ ಪ್ರಮೋದ್ ಸಾವಂತ್ ‌ಜೀ ಆಗಮಿಸಿದ್ದಾರೆ ಅವರಿಗೆ ದೇವರು ಇನ್ನೂ ಹೆಚ್ಚಿನ ಪದವಿ ಕರುಣಿಸಲಿ. ಉತ್ತಮ ಆರೋಗ್ಯ ಆಯಸ್ಸು, ಶ್ರೇಯಸ್ಸು ಸಿಗಲಿ ಎಂದು ಶುಭ ಹಾರೈಸಿದರು.

Advertisement

Udayavani is now on Telegram. Click here to join our channel and stay updated with the latest news.

Next