Advertisement
ಗಣಪತಿಯು ಮಾತಾಪಿತೃಗಳಾದ ಉಮಾ- ಮಹೇ ಶ್ವರರಿಗೇ ಪ್ರದಕ್ಷಿಣೆ ಹಾಕಿ ಕುಳಿ ತನು. ಆಶ್ಚರ್ಯಗೊಂಡ ದೇವತೆಗಳು ವಿಚಾರಿಸಿದಾಗ ಚತುರ್ಮುಖ ಬ್ರಹ್ಮದೇವರು, ತಂದೆ ತಾಯಿಗೆ ನಮಿಸಿದವರಿಗೆ ಸಮಸ್ತ ಭೂ ಪ್ರದಕ್ಷಿಣೆಯ ಪುಣ್ಯ ಫಲವಿದೆ. ಆದ್ದರಿಂದ ಗಣಪತಿಗೆ ಅಗ್ರ ಪೂಜೆ ಸಲ್ಲಬೇಕು ಎಂದರು.
Related Articles
Advertisement
ಗಣಪತಿ ಚೈತನ್ಯಮೂರ್ತಿ, ಜ್ಞಾನರೂಪಿ, ಆಕಾಶಾಭಿಮಾನಿ, ಶಬ್ದಕ್ಕೆ ಒಡೆಯ. ಆದ್ದರಿಂದ ಮಹಾಭಾರತವು ನಿರಂತರ ಪ್ರಸಾರವಾಗ ಲೆಂಬ ಇಚ್ಛೆಯಿಂದ ವ್ಯಾಸರು ಗಣಪತಿಯನ್ನು ಆಶ್ರಯಿಸಿದರು. ಅವನ ತಾಯಿ ಪಾರ್ವತಿಯು ಪರ್ವತ ರಾಜನ ಮಗಳು. ಆಕೆ ತನ್ನ ದೇಹದ ಅಂಗರಾಗದಿಂದ ಬಾಲಕನನ್ನು ತಯಾರಿಸಿ ಜೀವ ಕಳೆಯನ್ನು ನೀಡಿದಳು. ಮುಂದೆ ಶಿವನಿಂದ ಸಂಹರಿಸಲ್ಪಟ್ಟು ಆನೆಯ ಮುಖವನ್ನಿಟ್ಟು ಪ್ರಾಣಪ್ರತಿಷ್ಠೆಯಾಗಿ “ಗಜಾನನ’ ಆದನು. ಪೃಥ್ವಿಯು ಜೀವ ಕಳೆಯ ಸೆಲೆ. ಒಂದು ಮುಷ್ಟಿ ಮಣ್ಣು, ನೀರು -ಗಾಳಿಯ ಸಂಯೋಗದಿಂದ ಬೀಜವನ್ನು ಮೊಳಕೆ ಬರಿಸಿ ಗಿಡವಾಗಿಸುವ ಸಾಮರ್ಥ್ಯ ಪಡೆದಿದೆ. ಆದ್ದರಿಂದ ಮಹಾಗಣಪತಿ ಜೀವ ಚೈತನ್ಯಕ್ಕೆ ಆಧಾರ. ಮಣ್ಣಿನಲ್ಲಿ ವಿಗ್ರಹ ಮಾಡ ಬೇಕಾದರೆ ಮಣ್ಣನ್ನು ಮೆತ್ತಿ ಮೆತ್ತಿ ಆಕಾರ ತರಬೇಕು. ಗಣಪತಿಯು ದುರ್ಗುಣಗಳನ್ನು ಕೆತ್ತಿ ತೆಗೆದು ಸದ್ಗುಣಗಳನ್ನು ಮೆತ್ತಿ ನಮ್ಮ ಜೀವನ ಪಾವನವಾಗಿಸುತ್ತಾನೆ. ಮಳೆಯಿಂದ ಭೂಮಿ ತೋಯ್ದು ಸಸ್ಯ ಶ್ಯಾಮಲೆಯಾದ ಸಮಯದಲ್ಲಿ ಗಣಪತಿಯ ಆರಾಧನೆಯಿಂದ ದವಸ ಧಾನ್ಯಗಳು ಯಥೇಷ್ಟವಾಗುತ್ತವೆ.
ಶ್ರೀ ಶರವು ರಾಘವೇಂದ್ರ ಶಾಸ್ತ್ರೀ ಶಿಲೆ ಶಿಲೆ ಆಡಳಿತ ಮೊಕ್ತೇಸರರು ಮತ್ತು ಪ್ರಧಾನ ಅರ್ಚಕರು