Advertisement
ಪಟ್ಟಣದಲ್ಲಿ ದೇಶದ ವಿವಿಧ ರಾಜ್ಯದ ಜನರು ವಾಸವಿದ್ದಾರೆ. ಇಲ್ಲಿನ ಪ್ರತಿಯೊಂದು ಧಾರ್ಮಿಕ ಆಚರಣೆ ಚಟುವಟಿಕೆಗಳ ಮೇಲೆ ಮಹಾರಾಷ್ಟ್ರ ಹಾಗೂ ಹೈದರಾಬಾದನ ಸಂಸ್ಕೃತಿಯ ಛಾಯೆ ಆವರಿಸಿದೆ. ಗುರುವಾರ ಪಟ್ಟಣದ ರೈಲು ನಿಲ್ದಾಣದಿಂದ ವಿವಿಧ ಬಡಾವಣೆಗಳತ್ತ ಮೆರವಣಿಗೆ ಹೊರಟ ಗಣೇಶ ಮೂರ್ತಿಗಳು, ಅರ್ಚಕರಿಂದ ವಿಶೇಷ ಪೂಜೆ ಪುನಸ್ಕಾರಗಳು ನಡೆದವು.
ಒಟ್ಟು 45 ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ರಾವೂರ, ಇಂಗಳಗಿ, ಲಾಡ್ಲಾಪುರ, ನಾಲವಾರ,
ಹಳಕರ್ಟಿ, ಕುಂದನೂರ, ಚಾಮನೂರ, ಮಾರಡಗಿ, ಕುಲಕುಂದಾ, ಸನ್ನತಿ, ಬನ್ನೇಟಿ ಗ್ರಾಮಗಳ ಮನೆ ಮನೆಗಳಲ್ಲಿ
ಗೌರಿ ಗಣೇಶ ಪೂಜೆಗಳು ನಡೆದವು ಶಹಾಬಾದ: ತಾಲೂಕಿನ ಭಂಕೂರಿನಲ್ಲಿ ಎರಡು ಉದ್ಭವ ಗಣಪತಿ ಮೂರ್ತಿಗಳಿದ್ದು, ವಿಶೇಷತೆಯಿಂದ ಕೂಡಿವೆ. 12 ಅಡಿ ಎತ್ತರದ ಏಕಶಿಲಾ ಗಣಪತಿ ಮೂತಿ ಗ್ರಾಮದ ಹೊರವಲಯದಲ್ಲಿ ಮತ್ತು ಅದರದೇ ಪ್ರತಿರೂಪದ ನಾಲ್ಕು ಅಡಿ ಗಣಪತಿ ಮೂರ್ತಿ ಸಣ್ಣೂರು ರಸ್ತೆಯಲ್ಲಿ ಕಾಣ ಸಿಗುತ್ತದೆ. ಎರಡು ಮೂರ್ತಿ ಒಂದೇ ರೀತಿ ಇರುವುದರಿಂದ ಅವುಗಳ ದರ್ಶನಕ್ಕೆ ಸಾವಿರಾರು ಜನರು ಬರುತ್ತಾರೆ. ರಾಷ್ಟ್ರಕೂಟರ ಕಾಲದಲ್ಲಿ ಇಲ್ಲಿನ ಅರಸರು ಈ ಗಣೇಶ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ತಮ್ಮ ಹರಕೆ ತೀರಿಸುತ್ತಿದ್ದರು ಎನ್ನಲಾಗಿದೆ.
Related Articles
Advertisement
ತಮ್ಮ ಇಷ್ಟಾರ್ಥಗಳು ನೆರವೇರಿದರೆ ಭಕ್ತರು ಹೆಚ್ಚಾಗಿ ಬಣ್ಣ ಬಳೆಯುತ್ತಾರೆ. ಹೀಗೆ ವರ್ಷಕ್ಕೆ ಹತ್ತಾರು ಬಾರಿ ಇಲ್ಲಿನ ಗಣಪತಿ ಮೂರ್ತಿಗಳ ಬಣ್ಣ ಬದಲಾಗುತ್ತವೆ. ಪ್ರತಿ ವರ್ಷದಂತೆ ವಿಶೇಷ ಪೂಜೆ ನಡೆಯುತ್ತದೆ ಎಂದು ದೇವಸ್ಥಾನದ ಪೂಜಾರಿ ತಿಳಿಸಿದ್ದಾರೆ.
ತಿಲಕರಿಂದ ಗಣೇಶೋತ್ಸವ ಸಾರ್ವಜನಿಕ ಸ್ವರೂಪಶಹಾಬಾದ: ಸ್ವಾತಂತ್ರ್ಯಾ ಪೂರ್ವದಲ್ಲಿ ಗಣೇಶನ ಹಬ್ಬ ಕೇವಲ ಮನೆಯಲ್ಲಿ ಆಚರಣೆಯಲ್ಲಿತ್ತು. ನಂತರ ಸಮಾಜ ಸುಧಾರಕ ಮತ್ತು ಸ್ವಾತಂತ್ರ್ಯಾಯೋಧ ಲೋಕಮಾನ್ಯ ಬಾಲಗಂಗಾಧರ ತಿಲಕ್ ಅದಕ್ಕೆ ಸಾರ್ವಜನಿಕ ಸ್ವರೂಪ ನೀಡಿದರು ಎಂದು ಸಿ.ಎ. ಇಂಗಿನಶೆಟ್ಟಿ ಕಾಲೇಜಿನ ಪ್ರಾಂಶುಪಾಲ ರಾಜಗೋಪಾಲ ಜೂಜಾರೆ ಹೇಳಿದರು. ನಗರದ ರಾಷ್ಟ್ರಭಾಷಾ ಶಿಕ್ಷಣ ಸಮಿತಿಯಲ್ಲಿ ವಿವಿಧ ಪ್ರಕಲ್ಪಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತಿಲಕ್ ಅವರು ಗಣೇಶ ಮೂರ್ತಿ ಸಾಂಸ್ಕೃತಿಕ ಮಹತ್ವ ಅರಿತಿದ್ದರು. ಬ್ರಾಹ್ಮಣರು ಮತ್ತು ಬ್ರಾಹ್ಮಣೇತರರ ನಡುವಿನ ಅಂತರ ತುಂಬಲು ಮತ್ತು ಏಕತೆ ಮೂಡಿಸಲು ಸೂಕ್ತ ಸಂದರ್ಭವಾಗಿ ಗಣೇಶೋತ್ಸವ ಆಚರಣೆಯನ್ನು ರಾಷ್ಟ್ರೀಯ ಹಬ್ಬವನ್ನಾಗಿ ಮಾರ್ಪಡಿಸಿದರು ಎಂದು ಹೇಳಿದರು. ದಮಯಂತಿ ಸೂರ್ಯವಂಶಿ, ಅನಿತಾ ಶರ್ಮಾ, ಬಾಬಾಸಾಹೇಬ ಸಾಳುಂಕೆ,ರಮೇಶ ವಾಲಿ, ಚನ್ನಬಸಪ್ಪ ಕೊಲ್ಲೂರ, ರಾಜಕುಮಾರ ಬಾಸೂತ್ಕರ್, ಪ್ರಕಾಶ ಕೋಸಗಿಕರ್, ಸಾಯಿಬಣ್ಣ, ವೀರಯ್ಯ ಹಿರೇಮಠ, ರಮೇಶ ಮಹಿಂದ್ರಕರ್ ಇದ್ದರು.