Advertisement

ಗಣಪತಿ ಪ್ರಕರಣ: ಇಂದು ಸಿಬಿಐಗೆ ದಾಖಲೆ

10:10 AM Nov 16, 2017 | Team Udayavani |

ಬೆಂಗಳೂರು: ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವ ನಿವೃತ್ತ
ನ್ಯಾಯಮೂರ್ತಿ ಕೇಶವನಾರಾಯಣ ಆಯೋಗ, ನ.21ರಂದು ಖುದ್ದು ಹಾಜರಾಗುವಂತೆ ಮಡಿಕೇರಿ ಟೌನ್‌
ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್‌ ಮೇದಪ್ಪ ಅವರಿಗೆ ಆದೇಶಿ ಸಿದೆ. 

Advertisement

ಪ್ರಕರಣದ ಸತ್ಯಾಸತ್ಯತೆ ಪರಿಶೀಲಿಸುವ ಸಲುವಾಗಿ ಸ್ಥಳಪರಿಶೀಲನೆ, ಸಿಐಡಿ ಸಲ್ಲಿಸಿದ ಬಿ ರಿಪೋರ್ಟ್‌, ಸಾಕ್ಷ್ಯಾ
ಧಾರಗಳನ್ನು ಪರಿಶೀಲಿಸಿರುವ ಆಯೋಗ ಇದುವರೆಗೂ ಒಟ್ಟು 47 ಮಂದಿಯನ್ನು ವಿಚಾರಣೆಗೊಳಪಡಿಸಿದೆ.

ನ.13ರಂದು ಕೊಡಗು ಎಸ್ಪಿಯವರ ವಿಚಾರಣೆ ನಡೆಸಿರುವ ಆಯೋಗ, ಗಣಪತಿ ಆತ್ಮಹತ್ಯೆ ಪ್ರಕರಣ ಕುರಿತು ಹಲವು
ಪ್ರಶ್ನೆಗಳನ್ನು ಕೇಳಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ.

ಅದರಂತೆ ಪ್ರಕರಣದ ಮೊದಲ ತನಿಖಾಧಿಕಾರಿ ಮೇದಪ್ಪ ಅವರನ್ನು ನ.21ರಂದು ವಿಚಾರಣೆ ನಡೆಸಲಾಗುತ್ತದೆ
ಎಂದು ಆಯೋಗದ ಮೂಲಗಳು ತಿಳಿಸಿವೆ. ಮೇದಪ್ಪ ಅವರ ವಿಚಾರಣೆ ಪೂರ್ಣಗೊಳಿಸಿದ ನಂತರ, ವಿಚಾರಣೆಗೆ
ಹಾಜರಾದವರ ಹೇಳಿಕೆಗಳು, ಸಿಐಡಿ ತನಿಖಾ ವರದಿ ಸೇರಿದಂತೆ ಎಲ್ಲವನ್ನು ಪರಿಶೀಲಿಸಿ ವರದಿ
ಸಿದ್ಧಪಡಿಸಲಾಗುವುದು. ಈಗ ಪೂರ್ಣಗೊಂಡಿರುವ ವಿಚಾರಣೆಯಲ್ಲಿ ಕೆಲ ಮಹತ್ವದ ಅಂಶಗಳು ಆಯೋಗದ
ಗಮನಕ್ಕೆ ಬಂದಿವೆ, ವರದಿಯಲ್ಲಿ ಉಲ್ಲೇಖೀಸಿ ಸರ್ಕಾರಕ್ಕೆ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಇಂದು ಸಿಬಿಐ ಅಧಿಕಾರಿಗಳ ಭೇಟಿ!: ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ನಿರ್ದೇಶನದ ಮೇರೆಗೆ ಸಿಬಿಐ ಕೂಡ ತನಿಖೆ ನಡೆಸುತ್ತಿದೆ. ಕೆಲ ದಿನಗಳ ಹಿಂದಷ್ಟೇ ಸಿಬಿಐ ಅಧಿಕಾರಿಗಳು ಆಯೋಗಕ್ಕೆ ಭೇಟಿ ನೀಡಿದ್ದು ಸಿಐಡಿ ವರದಿ ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಕೋರಿದ್ದರು. ಆಯೋಗದ ವಿಚಾರಣೆ ಬಾಕಿ
ಇರುವುದರಿಂದ ದಾಖಲೆಗಳನ್ನು ಗುರುವಾರ(ನ.16) ಸಲ್ಲಿಸುವಂತೆ ಸೂಚಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next