Advertisement

ಮಂಜುಗಣಿಯಲ್ಲಿ ಜಯತೀರ್ಥ ಮೇವುಂಡಿ ಗಾನ ನಾದ ಸೇವೆ

03:14 PM Nov 29, 2021 | Team Udayavani |

ಶಿರಸಿ: ತಾಲೂಕಿನ ಶ್ರೀ ಕ್ಷೇತ್ರ ಮಂಜಗುಣಿಯ ವೆಂಕಟ್ರಮಣ ದೇವಸ್ಥಾನದ ಸಭಾ ಮಂಟಪದಲ್ಲಿ ಗಾನ ಸೇವಾ ಕಾರ್ಯಕ್ರಮ ನಡೆಯಿತು.

Advertisement

ಅಂತರಾಷ್ಟ್ರೀಯ ಖ್ಯಾತಿಯ ಗಾಯಕ ಪಂಡಿತ್ ಜಯತೀರ್ಥ ಮೇವುಂಡಿಯವರು ಕಳೆದ ಅನೇಕ ವರ್ಷಗಳಿಂದ ಗಾಯನ ಸೇವಾ ಕಾರ್ಯಕ್ರಮ ನಡೆಸಿಕೊಡುತ್ತಿದ್ದು ಇದೇ ಸಂದರ್ಭದಲ್ಲಿ ಅನೇಕ ಗಾಯಕರು, ಮೇವುಂಡಿಯವರ ಶಿಷ್ಯ ಬಳಗವು ಪಾಲೊಳ್ಳುವುದು ವಿಶೇಷವಾಗಿದೆ.

ಬಾಲ ಪ್ರತಿಭೆ ಹುಬ್ಬಳ್ಳಿಯ ಕು. ರೇವತಿ ಹಾಗೂ ಪ್ರಗತಿ ಇವರ ಗಾಯನ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. ಭಕ್ತಿಗಾನ ಕಾರ್ಯಕ್ರಮ ಮುಂಜಾನೆ ಆರು ಘಂಟೆಯಿಂದ ಆರಂಭಗೊಂಡು ಇಳಿಹೊತ್ತು ಆರುಘಂಟೆಯವರೆಗೆ ನಡೆಯಿತು.

ಸೇವೆಯಲ್ಲಿ ವಾಣಿ ರಮೇಶ ಯಲ್ಲಾಪುರ, ವಿಭಾ ಹೆಗಡೆ, ಚೈತನ್ಯ ಪರಬ್, ಐರಾ ಆಚಾರ್ಯ ಉಡುಪಿ, ಲಲಿತ್ ಮೇವುಂಡಿ ಇನ್ನಿತರರು ನಡೆಸಿದ ಗಾಯನ ಸೇವೆ ದೇವಸ್ಥಾನದ ಕಲ್ಲಿನ ಸಭಾ ಮಂಟಪದಲ್ಲಿ ಹೊಸದೊಂದು ವಾತಾವರಣ ಸೃಷ್ಠಿಸಿತು.

ಹಾರ್ಮೋನಿಯಂನಲ್ಲಿ ವಿ.ಪ್ರಕಾಶ ಹೆಗಡೆ ಯಡಳ್ಳಿ, ಭರತ ಹೆಗಡೆ ಹೆಬ್ಬಲಸು ಸಹಕರಿಸಿದರೆ ತಬಲಾ ವಾದನದಲ್ಲಿ ಗುರುರಾಜ ಹಗಡೆ ಆಡುಕಳ, ಯೋಗೀಶ ಭಟ್ಟ ಬೆಂಗಳೂರು ಮತ್ತು ಸಂಜೀವ ಜೋಶಿ ಹಾಗೂ ತಬಲಾ ಪಕ್ವಾಜ್ ನಲ್ಲಿ ಗಣೇಶ ಗುಂಟ್ಕಲ್ ಸಾಥ್ ನೀಡಿದರು.

Advertisement

ಸೇವೆಯ ಕೊನೆಯ ಹಂತವಾಗಿ ಪಂ.ಜಯತೀರ್ಥರ ಗಾನ ಸೇವೆಗೆ ಪ್ರಕಾಶ ಹೆಗಡೆ ಕಲ್ಲಾರೆಮನೆ ಮುರಳಿಯ ನಾದದ ಸಾಥ್ ನೀಡಿ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ನೀಡಿದರು.

ಗಾನ ಸೇವೆಗೆ ಪಾಲ್ಗೊಂಡ ಎಲ್ಲಾ ಕಲಾವಿದರನ್ನು ಪ್ರಶಂಸಿಸಿ ದೇವಾಲಯದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ಭಟ್ಟ ಅವರು ದೇವರ ಪ್ರಸಾದ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next