Advertisement

ಜು. 8ಕ್ಕೆ ‘ಪತ್ತೀಸ್‌ ಗ್ಯಾಂಗ್‌’ಗಾನ ಬಜಾನ

12:41 PM Jul 05, 2018 | |

ಸೂರಜ್‌ ಬೋಳಾರ್‌ ಹಾಗೂ ಪ್ರೀತಂ ಎಂ.ಎನ್‌. ನಿರ್ದೇಶನದಲ್ಲಿ ಸಿದ್ಧಗೊಂಡ ‘ಪತ್ತೀಸ್‌ ಗ್ಯಾಂಗ್‌’ ಮುಂದಿನ ತಿಂಗಳು 10ಕ್ಕೆ ಬಿಡುಗಡೆಗೊಳ್ಳಲಿದೆ. ಮನೋಜ್‌ ಕುಮಾರ್‌ ಅವರು ಈ ಸಿನೆಮಾವನ್ನು ಪ್ರಸ್ತುತಪಡಿಸಲಿದ್ದಾರೆ. ಈ ಸಿನೆಮಾದ ಆಡಿಯೋ ರಿಲೀಸ್‌ ಜು. 8ರಂದು ಮಂಗಳೂರಿನ ಫೋರಂ ಫಿಜ್ಜಾ ಮಾಲ್‌ನಲ್ಲಿ ಸಂಜೆ 7 ಗಂಟೆಗೆ ನಡೆಯಲಿದೆ. ಸಿನೆಮಾದಲ್ಲಿ ಎರಡು ಹಾಡುಗಳಿವೆ. 

Advertisement

ಕದ್ರಿ ಮಣಿಕಾಂತ್‌ ಸಂಗೀತ ನೀಡಿ ಅವರೇ ಹಾಡಿದ್ದು ಈ ಸಿನೆಮಾದ ವಿಶೇಷ. ಮೈತ್ರಿ ಅಯ್ಯರ್‌ ಕೂಡ ಧ್ವನಿಗೂಡಿಸಿದ್ದಾರೆ. ಸಿನೆಮಾಟೋಗ್ರಫಿಯನ್ನು ಸಿದ್ದು ಅವರು ಮಾಡಿದ್ದಾರೆ. ಅಂದಹಾಗೆ ಸಿನೆಮಾದಲ್ಲಿ ಮೋಹನ್‌ ಶೇಣಿ, ಅಜಯ್‌ ರಾಜ್‌, ವಿಸ್ಮಯ ವಿನಾಯಕ್‌, ಚಂದ್ರಹಾಸ್‌ ಉಳ್ಳಾಲ್‌, ನವ್ಯತಾ ರೈ ಇದ್ದಾರೆ. ವಿಜಯ್‌ ಕುಮಾರ್‌ ಕೊಡಿಯಾಲ್‌ಬೈಲ್‌, ಕಿಶೋರ್‌ ಡಿ. ಶೆಟ್ಟಿ ಅತಿಥಿ ಪಾತ್ರದಲ್ಲಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next