Advertisement

ನವಭಾರತ ವರ್ಧಂತ್ಯುತ್ಸವದಲ್ಲಿ ಆಟ-ಕೂಟ

05:58 PM Jun 13, 2019 | Team Udayavani |

ಬಾಳಂಭಟ್‌ ಮನೆತನದ ಸಭಾ ಭವನದಲ್ಲಿ ನವಭಾರತ ಯಕ್ಷಗಾನ ಅಕಾಡೆಮಿಯ ಪಂಚಮ ವರ್ಧಂತ್ಯುತ್ಸವಾಚರಣೆಯು ವಿಭಿನ್ನ ಕಾರ್ಯಕ್ರಮಗಳ ಸಂಯೋಜನೆಯೊಂದಿಗೆ ವಿಶೇಷವಾಗಿ ನಡೆದು ರಂಜಿಸಿತು. ಸತ್ಯನಾರಾಯಣ ಸ್ವಾಮಿಯ ಕಥೆಯನ್ನು ತಾಳಮದ್ದಳೆ ರೂಪದಲ್ಲಿ ಪ್ರದರ್ಶಿಸಲಾಯಿತು. ಹರಿ ಪ್ರಸಾದ್‌ ಕಾರಂತರ ಭಾಗವತಿಕೆ, ಮಧುಸೂದನ ಅಲೆವೂರಾಯ, ಮಾಧವ ನಾವಡ ವರ್ಕಾಡಿ, ರಾಮ್‌ ಪ್ರಸಾದ್‌ ಕಲ್ಲೂರಾಯ ಹಾಗೂ ಹರಿಚರಣ್‌ ಆರ್‌.ಪಿ.ಯವರ ಹಿಮ್ಮೇಳವಿತ್ತು. ವಿಜಯಲಕ್ಷ್ಮೀ ಎಲ್‌. ಮಹಾವಿಷ್ಣುವಾದರೆ, ಶರತ್‌ ಕುಮಾರ್‌ ಶೆಟ್ಟಿ ಕಲಿಯ ಪಾತ್ರವನ್ನೂ, ವಿಶ್ವನಾಥರವರು ನಾರದನಾಗಿಯೂ ಕಥೆಯನ್ನು ಬೆಳೆಸಿದರು. ಸಾವಿತ್ರಿ ಎಸ್‌. ಮಲ್ಯರು ರಾಮ ಭಟ್ಟನಾದರೆ, ಜಯರಾಮ ಪೂಜಾರಿ ಬೀರಣ್ಣನಾದರು. ವಿಪ್ರಹರಿಯಾಗಿ ಚಂದ್ರಶೇಖರ ಪಾಟಾಳಿ ಕಾಣಿಸಿಕೊಂಡರು. ಕಥಾನಾಯಕ ಸಾಧು ವರ್ತಕನ ಪಾತ್ರವನ್ನು ಯಕ್ಷಗುರು ರವಿ ಅಲೆವೂರಾಯರು ಹಾಸ್ಯ ರಸದೊಂದಿಗೆ ಉತ್ತಮವಾಗಿ ನಿರ್ವಹಿಸಿದರು. ಲೀಲಾವತಿಯಾಗಿ ನಮ್ರತಾ ರಾವ್‌, ಕಲಾವತಿಯಾಗಿ ನಾಗಲತಾ ಮತ್ತು ಸುಂದರನಾಗಿ ಜಗದೀಶ್‌ ಸುಳ್ಯರವರು ಭಾಗವಹಿಸಿದ್ದರು. ವೃದ್ಧ ಹರಿಯಾಗಿ ರಘುರಾಮ ಭಟ್‌ರವರು, ರಾಜಾ ಚಂದ್ರಶೇಖರನಾಗಿ ರಿತೇಶ್‌ ಕಾಟಿಪಳ್ಳ, ತುಂಗಧ್ವಜನಾಗಿ ಪ್ರಕಾಶ್‌ ಕುಮಾರ್‌ ಕಾಪಿಕಾಡ್‌ ಉತ್ತಮವಾಗಿ ಕಥಾಪ್ರದರ್ಶನವನ್ನು ನೀಡಿದರು.

Advertisement

ಬಳಿಕ ಅಕಾಡೆಮಿಯ ಸದಸ್ಯರಿಂದ ಶ್ರೀ ದೇವಿ ಮಹಿಷಮರ್ದಿನಿ ಬಯಲಾಟ ನಡೆಯಿತು. ಯುವ ಭಾಗವತ ಚಿನ್ಮಯ ಭಟ್‌ ಕಲ್ಲಡ್ಕ, ಸ್ಕಂದ ಕೊನ್ನಾರ್‌, ಸುಬ್ರಹ್ಮಣ್ಯ ಚಿತ್ರಾಪುರ ಹಾಗೂ ಮಾಧವ ನಾವಡರು ಉತ್ತಮ ಹಿಮ್ಮೇಳ ನೀಡಿದರು. ನಮ್ರತಾ ರಾವ್‌ ದೇವೇಂದ್ರನಾದರೆ ಮಿಥಿಲ್‌ ಕೃಷ್ಣ, ಮುಕುಲ್‌ ಕೃಷ್ಣ, ಸಮೃದ್ಧ್ ರಾವ್‌, ಸ್ಪೂರ್ತಿ ಎಸ್‌. ಪಾಟಾಳಿ, ಅರ್ನವ್‌ ಪ್ರಭು ದೇವತೆಗಳಾದರು. ಮಾಲಿನಿಯಾಗಿ ಪ್ರಥಮ್‌ ರೈ ಉತ್ತಮ ಪ್ರದರ್ಶನ ನೀಡಿದರು. ಸುಪಾರ್ಶ್ವಕನಾಗಿ ಕು| ಪ್ರಣವಿ ಎಸ್‌. ಎಣ್ಮಕಜೆ ಮುನಿಯಾದರು. ಚಂದ್ರಶೇಖರ ಪಾಟಾಳಿಯವರು ಶಂಖಾಸುರನಾದರೆ, ಕೇಶವ ಕಾಮತ್‌, ಅತಿಶಯ್‌ ರಾವ್‌, ಚಿನ್ಮಯ ಪೂಜಾರಿ, ಆಧ್ಯಾ ಡಿ. ಶಂಖ ದುರ್ಗರಾದರು. ಮಾಲಿನಿ ದೂತನಾಗಿ ಅತೀಶ್‌ ಶೆಟ್ಟಿ, ದೇವದೂತನಾಗಿ ಕ್ಷಿತಿಜ್‌ ಡಿ.ಕಟೀಲ್‌ ಇದ್ದರು. ಅಕ್ಷಯ ಮಹಿಷಾಸುರನಾದರೆ, ರಜತ್‌ ಸಿಂಹವಾದರು. ದೇವಿಯಾಗಿ ಶರತ್‌ ಕುಮಾರ್‌ ಶೆಟ್ಟಿಯವರು ಕಾಣಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next