Advertisement

ಧೋನಿಯನ್ನು ಕೂಲ್ ಎಂದು ಹೇಳುತ್ತಾರೆ.. ಆದರೆ ಅವರು ಕೋಪ ಮಾಡುವುದನ್ನು ನೋಡಿದ್ದೇನೆ: ಗಂಭೀರ್

10:26 AM May 15, 2020 | keerthan |

ಹೊಸದಿಲ್ಲಿ: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕೂಲ್ ಕ್ಯಾಪ್ಟನ್ ಎಂದೇ ಹೆಸರಾದವರು. ಯಾವುದೇ ಸಂಕಷ್ಟದ ಸಮಯದಲ್ಲಿ ತನ್ನ ತಾಳ್ಮೆ ಕಳೆದುಕೊಳ್ಳದೆ ಪರಿಸ್ಥಿತಿ ನಿಭಾಯಿಸುತ್ತಿದ್ದರು. ಆದರೆ ಧೋನಿ ತಾಳ್ಮೆ ಕಳೆದುಕೊಳ್ಳುತ್ತಿದ್ದರು,, ಕೋಪ ಮಾಡಿಕೊಳ್ಳುತ್ತಿದ್ದರು ಎನ್ನುತ್ತಾರೆ ಗೌತಮ್ ಗಂಭೀರ್.

Advertisement

ಧೋನಿ ತಾಳ್ಮೆ ಕಳೆದುಕೊಳ್ಳುವುದಿಲ್ಲ ಎಂದು ಜನರು ಹೇಳುತ್ತಾರೆ. ಅದರೆ ಅವರು ತಾಳ್ಮೆ ಕಳೆದುಕೊಳ್ಳುವುದನ್ನು ನಾನು ಕೆಲವು ಬಾರಿ ನೋಡಿದ್ದೇನೆ. 2007ರ ವಿಶ್ವಕಪ್ ನಲ್ಲಿ ಧೋನಿ ಕೋಪ ಮಾಡಿಕೊಂಡಿದ್ದರು. ಆ ವಿಶ್ವಕಪ್ ನಲ್ಲಿ ನಾವು ಉತ್ತಮ ಪ್ರದರ್ಶನ ತೋರಿರಲಿಲ್ಲ. ಆಗ ತಾಳ್ಮೆ ಕಳೆದುಕೊಂಡಿದ್ದರು. ಅವರೂ ಒಬ್ಬ ಮನುಷ್ಯ. ಕೋಪ ಬರುವುದು ಸಹಜ. ಐಪಿಎಲ್ ನಲ್ಲಿ ಚೆನ್ನೈ ತಂಡದಲ್ಲಿ ಯಾರೋ ಕ್ಯಾಚ್ ಕೈಚೆಲ್ಲಿದಾಗ ಮಾಹಿ ರೇಗಾಡಿದ್ದರು. ಅವರು ಕೂಲ್ ನಿಜ. ಇತರ ನಾಯಕರಿಗಿಂತ ಶಾಂತ. ನನಗಿಂತ ಖಂಡಿತವಾಗಿಯೂ ಶಾಂತವಾಗಿರುತ್ತಾರೆ ಎಂದು ಗಂಭೀರ್ ಹೇಳಿದ್ದಾರೆ.

ಗೌತಮ್ ಗಂಭೀರ್ ಅವರು ಧೋನಿ ತಂಡದ ಸ್ಟಾರ್ ಆಟಗಾರರಾಗಿದ್ದರು. 2007 ಮತ್ತು 2011ರ ಎರಡೂ ವಿಶ್ವಕಪ್ ಗೆಲುವಿನಲ್ಲೂ ಗಂಭೀರ್ ಪಾತ್ರ ಬಹುಮುಖ್ಯವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next