Advertisement

ಶಿಖರ್‌ ಧವನ್‌ ಕೈಬಿಡಲು ಶೀಕಾಂತ್‌, ಗಂಭೀರ್‌ ಆಗ್ರಹ

03:38 PM Jan 07, 2020 | Team Udayavani |

ನವದೆಹಲಿ: ಭಾರತ ತಂಡಕ್ಕೆ ಮರಳಿದ ಎಡಗೈ ಆರಂಭಕಾರ ಶಿಖರ್‌ ಧವನ್‌ ಬಗ್ಗೆ ಮಾಜಿಗಳನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆ.ಶ್ರೀಕಾಂತ್‌, ಗೌತಮ್‌ ಗಂಭೀರ್‌ ತುಸು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

Advertisement

ಲಂಕಾ ವಿರುದ್ಧ ಧವನ್‌ ಎಷ್ಟೇ ರನ್‌ ಗಳಿಸಿದರೂ ಅದು ಲೆಕ್ಕಕ್ಕೆ ಬರದು. ನಾನೇನಾದರೂ ಆಯ್ಕೆ ಸಮಿತಿಯ ಅಧ್ಯಕ್ಷನಾಗಿದ್ದರೆ ಮುಂಬರುವ ಟಿ20 ವಿಶ್ವಕಪ್‌ಗೆ ಧವನ್‌ ಅವರನ್ನು ಖಂಡಿತವಾಗಿಯೂ ಆಯ್ಕೆ ಮಾಡುವುದಿಲ್ಲ’ ಎಂದು ಶ್ರೀಕಾಂತ್‌ ನೇರವಾಗಿ ಹೇಳಿದ್ದಾರೆ. ಧವನ್‌ ಗಿಂತ ರಾಹುಲ್‌ ಸೂಕ್ತ ಆಟಗಾರ ಎನ್ನುವುದು ಅವರ ಅಭಿಪ್ರಾಯ.

ಇನ್ನೊಬ್ಬ ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್‌, ಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಧವನ್‌ ಬದಲು ಸಂಜು ಸ್ಯಾಮ್ಸನ್‌ ಅವರನ್ನು ಆರಂಭಿಕರನ್ನಾಗಿ ಆಡಿಸಬೇಕು ಎಂದು ಒತ್ತಾಯಿಸಿದ್ದಾರೆ. ರೋಹಿತ್‌ ಶರ್ಮ ಮುಂದಿನ ಸರಣಿ ವೇಳೆ ತಂಡಕ್ಕೆ ವಾಪಸ್‌ ಆಗುತ್ತಾರೆ. ಆಗ ಸ್ಯಾಮ್ಸನ್‌ ಅವರನ್ನು ತಂಡದಿಂದಲೇ ಕೈಬಿಡಲಾಗುತ್ತದೆ. ಇದರ ಬದಲು ಸಿಕ್ಕಿದ ಸೀಮಿತ ಅವಕಾಶದಲ್ಲಿ ಸ್ಯಾಮ್ಸನ್‌ ಅವರನ್ನು ಆಡಿಸಿ ನೋಡಬಹುದಿತ್ತು. ಧವನ್‌ ಟಿ20ಯಲ್ಲಿ ನಿರೀಕ್ಷಿತ ಯಶಸ್ಸು ಕಂಡವರಲ್ಲ. ಹೀಗಾಗಿ ಟಿ20 ವಿಶ್ವಕಪ್‌ಗೆ ಪೂರ್ವ ತಯಾರಿಗೆ ಹೆಚ್ಚುವರಿ ಆರಂಭಿಕನಾಗಲು ಸ್ಯಾಮ್ಸನ್‌ ಸೂಕ್ತರೇ ಎನ್ನುವುದನ್ನು ಈ ಸರಣಿಯಿಂದ ತಿಳಿಯಬಹುದಿತ್ತು’ ಎಂಬುದು ಗಂಭೀರ್‌ ಅನಿಸಿಕೆ.

Advertisement

Udayavani is now on Telegram. Click here to join our channel and stay updated with the latest news.

Next