Advertisement
ಶಿಕ್ಷೆ ವಿಳಂಬವಾಗುತ್ತಿರುವುದು ಸರಿಯಲ್ಲ ಎಂದು ಸರಕಾರ ಕೋರ್ಟ್‌ಗೆ ತಿಳಿಸಿದೆ. ಈ ಹಿಂದೆ ದಿಲ್ಲಿ ಕೋರ್ಟ್ ಹೊರಡಿಸಿದ್ದ ಡೆತ್ ವಾರಂಟ್ ಪ್ರಕಾರ ಶನಿವಾರ(ಫೆ.1)ವೇ ನಾಲ್ವರು ಅತ್ಯಾಚಾರಿಗಳನ್ನು ನೇಣು ಗಂಬಕ್ಕೇರಿಸಬೇಕಿತ್ತು. ಆದರೆ ಅಪರಾಧಿ ಗಳ ಕಾನೂನಾತ್ಮಕ ಅವಕಾಶಗಳು ಬಾಕಿ ಉಳಿದಿರುವ ಕಾರಣ ಶುಕ್ರವಾರ ಕೊನೆಯ ಕ್ಷಣದಲ್ಲಿ ಗಲ್ಲುಶಿಕ್ಷೆ ಜಾರಿಗೆ ಕೋರ್ಟ್ ತಡೆ ನೀಡಿತ್ತು.
ಈ ನಡುವೆ, ಅಪರಾಧಿ ವಿನಯ್ ಶರ್ಮಾ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ಕೋವಿಂದ್ ಅವರು ಶನಿವಾರ ತಿರಸ್ಕರಿಸಿದ್ದು, ಅದರ ಬೆನ್ನಲ್ಲೇ, ಮತ್ತೂಬ್ಬ ದೋಷಿ ಅಕ್ಷಯ್ ಠಾಕೂರ್ ಸಹ ಕ್ಷಮಾದಾನ ಕೋರಿ ಅರ್ಜಿ ಸಲ್ಲಿದ್ದಾನೆ.