ಗಾಲೆ: ಗಾಲೆ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ಪ್ರಚಂಡ ಚೇಸಿಂಗ್ ಆರಂಭಿಸಿದ್ದು, ಗೆಲುವಿನ ಸಾಧ್ಯತೆಯನ್ನು ತೆರೆದಿರಿಸಿದೆ. ನ್ಯೂಜಿಲ್ಯಾಂಡ್ ಎದುರು ಗೆಲುವಿಗೆ 268 ರನ್ ಗುರಿ ಪಡೆದ ಲಂಕಾ, 4ನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 133 ರನ್ ಗಳಿಸಿದೆ. ಇನ್ನು ಬೇಕಿರುವುದು 135 ರನ್ ಮಾತ್ರ.
ನಾಯಕ ದಿಮುತ್ ಕರುಣ ರತ್ನೆ (ಬ್ಯಾಟಿಂಗ್ 71) ಮತ್ತು ಲಹಿರು ತಿರಿಮನ್ನೆ (ಬ್ಯಾಟಿಂಗ್ 57) ನ್ಯೂಜಿಲ್ಯಾಂಡ್ ಬೌಲರ್‌ಗಳ ಮೇಲೆ ಸವಾರಿ ಮಾಡುವ ಮೂಲಕ ಗಾಲೆ ಪಿಚ್ ಬ್ಯಾಟಿಂಗಿಗೂ ಸಹಕರಿಸಲಿದೆ ಎಂಬುದನ್ನು ಸಾಬೀತುಪಡಿಸಿದರು. ಇಬ್ಬರೂ ಭರ್ತಿ 50 ಓವರ್ ನಿಭಾ ಯಿಸಿದ್ದಾರೆ. ಕಿವೀಸ್ ತಂಡದ ಯಾವುದೇ ಬೌಲರ್‌ನ ಆಟ ಈ ವೇಳೆ ನಡೆಯಲಿಲ್ಲ.
ಇದಕ್ಕೂ ಮುನ್ನ 7ಕ್ಕೆ 195 ರನ್ ಮಾಡಿದಲ್ಲಿಂದ ಶನಿವಾರದ ಆಟ ಮುಂದುವರಿಸಿದ ನ್ಯೂಜಿಲ್ಯಾಂಡ್ 285ರ ತನಕ ದ್ವಿತೀಯ ಇನ್ನಿಂಗ್ಸ್ ಬೆಳೆಸಿತು. ಬ್ರಾಡ್ಲಿ ವಾಟಿÉಂಗ್ 77, ಸೋಮರ್‌ವಿಲ್ಲೆ ಅಜೇಯ 40, ಟ್ರೆಂಟ್ ಬೌಲ್ಟ್ 26 ರನ್ ಹೊಡೆದರು. ಎಂಬುಲೆªàನಿಯ 4, ಧನಂಜಯ ಡಿ’ಸಿಲ್ವ 3, ಲಹಿರು ಕುಮಾರ 2 ವಿಕೆಟ್ ಉರುಳಿಸಿದರು.
ಸಂಕ್ಷಿಪ್ತ ಸ್ಕೋರ್
ನ್ಯೂಜಿಲ್ಯಾಂಡ್-249 ಮತ್ತು 285. ಶ್ರೀಲಂಕಾ-267 ಮತ್ತು ವಿಕೆಟ್ ನಷ್ಟವಿಲ್ಲದೆ 133.