Advertisement

ಚಿತ್ರೀಕರಣ ಮುಗಿಸಿ ಕುಂಬಳಕಾಯಿ ಹೊಡೆದ ಭಟ್ರು ಟೀಮ್ : ಶೀಘ್ರದಲ್ಲೇ ಬಾಕಿ ಸುದ್ದಿ

11:17 AM Oct 22, 2021 | Team Udayavani |

ಗೋಲ್ಡನ್ ಸ್ಟಾರ್ ಗಣೇಶ್‌, ಪವನ್‌ ಕುಮಾರ್‌, ದಿಗಂತ್‌ ನಟಿಸುತ್ತಿರುವ ‘ಗಾಳಿಪಟ-2’ ನಿರೀಕ್ಷೆ ಹೆಚ್ಚಿಸಿದೆ. ಯೋಗರಾಜ್ ಭಟ್ ಆಕ್ಷನ್ ಕಟ್ ಹೇಳುತ್ತಿರುವ ಈ ಸಿನಿಮಾವನ್ನು ಭಟ್ರು ವಿದೇಶದಲ್ಲಿಯೂ  ಶೂಟಿಂಗ್ ಮಾಡಿದ್ದಾರೆ. ಗಾಳಿಪಟ 2 ಚಿತ್ರತಂಡ ಸದ್ಯ ಸಿನಿಮಾದ ಚಿತ್ರೀಕರಣವನ್ನು ಮುಗಿಸಿ ಕುಂಬಳಕಾಯಿ ಹೊಡೆದಿದೆ.

Advertisement

ಈ ಚಿತ್ರವನ್ನು ಕುದುರೆಮುಖ, ಕಝಕಿಸ್ಥಾನದಲ್ಲಿ ಶೂಟಿಂಗ್ ಮಾಡಲಾಗಿದೆ. ಇನ್ನು ಸಿನಿಮಾದಲ್ಲಿ ಇಂಟ್ರೋ  ಸಾಂಗ್ ಅನ್ನು ಕುದುರೆ ಮುಖದಲ್ಲಿ ಶೂಟ್ ಮಾಡಲಾಗಿದೆ ಎಂದು ಒಮ್ಮೆ ಯೋಗರಾಜ್ ಭಟ್ ಹೇಳಿದ್ದರು.

ಸದ್ಯ ಶೂಟಿಂಗ್ ಮುಗಿದಿರುವ ಬಗ್ಗೆ ಸ್ವತಃ ಯೋಗರಾಜ್ ಭಟ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ನಮಸ್ತೆ..ಗಾಳಿಪಟ 2 ಚಿತ್ರದ ಚಿತ್ರೀಕರಣ ಮುಕ್ತಾಯ.. ಜೈ ತಂಡ.. ಅತೀ ಶೀಘ್ರದಲ್ಲೇ ಬಾಕಿ ಸುದ್ದಿ ಎಂದು ಹೇಳಿದ್ದಾರೆ. ವಿಶೇಷ ಅಂದ್ರೆ ಗಾಳಿಪಟ ಚಿತ್ರದಲ್ಲಿ ಬಣ್ಣ ಹಚ್ಚಿದ್ದ ಹಿರಿಯ ನಟ ಅನಂತ್ ನಾಗ್ ಈ ಸಿನಿಮಾದಲ್ಲಿಯೂ ನಟಿಸಿದ್ದಾರೆ. ಅಲ್ಲದೆ ಮೂವರು ನಾಯಕಿಯರು ಇದ್ದಾರೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next