Advertisement

ಎಂಆರ್‌ಪಿಎಲ್‌ಗ‌ೂ ಸರಬರಾಜಾಗಲಿದೆ ಗೇಲ್‌ ಗ್ಯಾಸ್‌

01:45 AM Nov 23, 2020 | mahesh |

ಮಂಗಳೂರು: ರಾಜ್ಯವ್ಯಾಪಿ ತೈಲ ಸರಬರಾಜು ಮಾಡುವ ಮಂಗಳೂರಿನ ಎಂಆರ್‌ಪಿಎಲ್‌ಗ‌ೂ ಕೇಂದ್ರ ಸರಕಾರದ ಅಧೀನಕ್ಕೆ ಒಳಪಟ್ಟ ನವರತ್ನ ಕಂಪೆನಿಯಾದ ಗೇಲ್‌ (ಇಂಡಿಯಾ) ಲಿ. ವತಿಯಿಂದ ನೈಸರ್ಗಿಕ ಅನಿಲ ಸರಬರಾಜಾಗಲಿದೆ. ಕೊಚ್ಚಿಯಿಂದ ಪೈಪ್‌ಲೈನ್‌ನಲ್ಲಿ ಬರುವ ನೈಸರ್ಗಿಕ ಅನಿಲವನ್ನು ಸೋಮವಾರ ದಿಂದ ಎಂಸಿಎಫ್‌ ಸಂಸ್ಥೆಯು ಸ್ವೀಕರಿಸಿದ ಅನಂತರ ಮುಂದಿನ ದಿನಗಳಲ್ಲಿ ಮಂಗಳೂರು- ಉಡುಪಿ ನಗರ ಸೇರಿದಂತೆ ಎಂಆರ್‌ಪಿಎಲ್‌ಗ‌ೂ ಪ್ರತ್ಯೇಕ ಪೈಪ್‌ಲೈನ್‌ಗಳಲ್ಲಿ ಸರಬರಾಜಾಗಲಿದೆ.

Advertisement

 ಎಂಆರ್‌ಪಿಎಲ್‌ಗೆ ಏಕೆ?
ಎಂಆರ್‌ಪಿಎಲ್‌ನಲ್ಲಿ ಪ್ರತಿದಿನ 2,500 ಟನ್‌ ಎಲ್‌ಪಿಜಿ ಉತ್ಪಾದನೆಯಾಗಿ ಅಲ್ಲಿಂದಲೇ ರಾಜ್ಯಾದ್ಯಂತ ಅನಿಲ ಸರಬರಾಜು ಆಗುತ್ತಿದೆ. ಜತೆಗೆ ಅಲ್ಲಿನ ಸ್ಥಾವರದ ಬಳಕೆಗಾಗಿ ಕಚ್ಚಾತೈಲದಿಂದ ಗ್ಯಾಸ್‌ ಉತ್ಪಾದನೆ ಮಾಡಿ “ಫೀಡ್‌’ (ಸ್ಥಾವರದ ಕಚ್ಚಾ ವಸ್ತು) ಮಾಡಲಾಗುತ್ತಿತ್ತು. ಆದರೆ ನೈಸರ್ಗಿಕ ಅನಿಲ ಲಭಿಸಿದ ಬಳಿಕ ಅನಿಲದಿಂದ ನೇರವಾಗಿ ಫೀಡ್‌ ಮಾಡಲು ಸಾಧ್ಯ. ಜತೆಗೆ ಎಂಆರ್‌ಪಿಎಲ್‌ನಲ್ಲಿಯೇ ಎಲ್‌ಎಸ್‌ಎಚ್‌ಎಸ್‌ ಎಣ್ಣೆ ಉಪಯೋಗಿಸಿ ಇಂಧನ ಉತ್ಪಾದಿಸಲಾಗುತ್ತಿತ್ತು. ನೈಸರ್ಗಿಕ ಅನಿಲ ಬಂದ ಮೇಲೆ ಎಣ್ಣೆಯ ಬಳಕೆಯೂ ತಪ್ಪಲಿದೆ. ಹೈಡ್ರೋಜನ್‌ ಘಟಕ ಸೇರಿದಂತೆ ಸ್ಥಾವರದ ಇತರ ನಿರ್ವಹಣೆಯ ಇಂಧನವಾಗಿಯೂ ನೈಸರ್ಗಿಕ ಅನಿಲ ಬಳಕೆಯಾಗಲಿದೆ.

ಲಾಭವೇನು?
“ಉದಯವಾಣಿ’ಯ ಜತೆಗೆ ಮಾತನಾಡಿದ ಎಂಆರ್‌ಪಿಎಲ್‌ನ ಕಾರ್ಪೊರೇಟ್‌ ಕಮ್ಯುನಿಕೇಶನ್‌ನ ಜಿಎಂ ರುಡೋಲ್ಫ್ ನೊರೋನ್ಹಾ ಅವರು, “ಎಂಆರ್‌ಪಿಎಲ್‌ ಸ್ಥಾವರದಲ್ಲಿ ಇಂಧನ ಹಾಗೂ ಫೀಡ್‌ ಬಳಕೆಗಾಗಿ ನೈಸರ್ಗಿಕ ಅನಿಲವನ್ನು ಬಳಕೆ ಮಾಡಲು ನಿರ್ಧರಿಸಲಾಗಿದೆ. ಗ್ಯಾಸ್‌ ಬಳಕೆಯಿಂದ ಸಲ#ರ್‌ ಅಂಶ ಗಣನೀಯ ಪ್ರಮಾಣದಲ್ಲಿ ಕಡಿಮೆ ಯಾಗಿ ಪರಿಸರಕ್ಕೆ ಪೂರಕವಾಗಲಿದೆ. ಆರ್ಥಿಕವಾಗಿಯೂ ನೈಸರ್ಗಿಕ ಅನಿಲ ಲಾಭದಾಯಕವಾಗಲಿದೆ. ಶೀಘ್ರ ಅನಿಲ ಸರಬರಾಜು ಆಗಲಿದೆ ಎಂದರು.

5750 ಕೋ.ರೂ. ವೆಚ್ಚ
ಕೊಚ್ಚಿ-ಮಂಗಳೂರು ಮಧ್ಯೆ ಒಟ್ಟು 444 ಕಿ.ಮೀ. ಉದ್ದದ ಪೈಪ್‌ಲೈನ್‌ನ ಕೆಲಸವನ್ನು 2,915 ಕೋಟಿ ರೂ. ವೆಚ್ಚದಲ್ಲಿ ಪ್ರಾರಂಭಿಸಲಾಗಿತ್ತು. ಆದರೆ ಭೂಸ್ವಾಧೀನದಲ್ಲಿ ಆದ ವಿಳಂಬದಿಂದಾಗಿ ಯೋಜನೆ ಅನುಷ್ಠಾನದಲ್ಲಿ ಪ್ರಗತಿ ಕುಂಠಿತವಾಗಿತ್ತು. ಇದರಿಂದಾಗಿ ಯೋಜನಾ ವೆಚ್ಚವೂ 5,750 ಕೋಟಿ ರೂ.ಗೆ ಏರಿತು.

ಕೊಚ್ಚಿಯಿಂದ 90 ಕಿ.ಮೀ.
ಉತ್ತರಕ್ಕೆ ಕುಟ್ಟನಾಡುವರೆಗೆ 2019ರಲ್ಲೇ ಗ್ಯಾಸ್‌ ಲಭ್ಯವಾಗಿದ್ದರೆ, 354 ಕಿ.ಮೀ. ದೂರದ ಕಣ್ಣೂರು ವರೆಗೆ ಪೈಪ್‌ಲೈನ್‌ ಬಳಕೆಗೆ ಸಿದ್ಧ ಗೊಂಡಿದೆ. ಪ್ರಸ್ತುತ ಕೊಚ್ಚಿಯಲ್ಲಿ ವಿತರಣೆ ಮಾಡಲಾಗುತ್ತಿದ್ದು ಅಲ್ಲಿನ ಪ್ರತಿ ದಿನದ ಬೇಡಿಕೆ 3.8 ದಶಲಕ್ಷ ಘನ ಮೀಟರ್‌ ಆಗಿದೆ.

Advertisement

ಮಂಗಳೂರಿನ ಬೇಡಿಕೆ
ಮಂಗಳೂರಿನಲ್ಲಿ 2.5 ದಶಲಕ್ಷ ಘನ ಮೀಟರ್‌ ಅನಿಲ ಬೇಡಿಕೆಯ ನಿರೀಕ್ಷೆಯನ್ನು ಗೇಲ್‌ ಅಧಿಕಾರಿಗಳು ಇರಿಸಿಕೊಂಡಿದ್ದಾರೆ.

ಮಂಗಳೂರಿಗೆ ಬಂತು ಗೈಲ್‌ ಗ್ಯಾಸ್‌
ಬಹುನಿರೀಕ್ಷಿತ ನೈಸರ್ಗಿಕ ಅನಿಲ ಮೊದಲ ಬಾರಿಗೆ ರವಿವಾರ ಸಂಜೆಯೇ ಮಂಗಳೂರಿಗೆ ಕೊಚ್ಚಿಯಿಂದ ಪೈಪ್‌ಲೈನ್‌ನಲ್ಲಿ ಸರಬರಾಜಾಗಿದೆ. ರಾಜ್ಯದ ಏಕೈಕ ರಸಗೊಬ್ಬರ ಕಾರ್ಖಾನೆ ಎಂಸಿಎಫ್‌ ಸಂಸ್ಥೆಗೆ ಸೋಮವಾರದಿಂದ ಅನಿಲ ಪೂರೈಕೆ ಅಧಿಕೃತವಾಗಿ ಆರಂಭವಾಗುವ ನಿರೀಕ್ಷೆಯಿದೆ. ವಾರದ ಹಿಂದಷ್ಟೇ ಕಾಸರಗೋಡಿನ ಚಂದ್ರಗಿರಿ ನದಿಯಲ್ಲಿ ಕ್ಲಿಷ್ಟಕರವಾಗಿದ್ದ ಪೈಪ್‌ ಅಳವಡಿಕೆ ಕಾರ್ಯ ಮುಗಿದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next