ಗಜೇಂದ್ರಗಡ: ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳ ಸರ್ಕಾರಿ ಕಚೇರಿ, ಶಾಲಾ ಕಾಲೇಜು, ಸಂಘ ಸಂಸ್ಥೆಗಳಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವವನ್ನು ಬುಧವಾರ ವಿಜೃಂಭಣೆಯಿಂದ ಆಚರಿಸಲಾಯಿತು.
ಸಮೀಪದ ವೀರಾಪುರ ಗ್ರಾಮದಲ್ಲಿ ಶ್ರೀ ತುಳಜಾಭವಾನಿ ಟ್ರಸ್ಟ್ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವವನ್ನು ಆಚರಿಸಲಾಯಿತು. ಗ್ರಾಪಂ ಸದಸ್ಯ ಎಂ.ವೈ. ಅವಧೂತ್, ಮಹಾಂತೇಶ ಆರೇರ, ವೀರಪ್ಪ ಮೋಹಿತೆ, ಬಸವರಾಜ ಘೋರ್ಪಡೆ, ಶರಣಪ್ಪ ತಳವಾರ, ಪವಾಡೆಪ್ಪ ಗುಡದೂರ, ಭೀಮಪ್ಪ ಕಿಲ್ಲೇದಾರ, ಹನಮಂತ ಹೂಗಾರ, ಭೀಮಪ್ಪ ಘೋರ್ಪಡೆ, ಈರಪ್ಪ ಮೋಹಿತೆ, ರವಿ ಘೋರ್ಪಡೆ, ಮೌನೇಶ ರಾಮಜಿ, ಈರಪ್ಪ ಘೋರ್ಪಡೆ ಇದ್ದರು.
1ನೇ ವಾರ್ಡ್: ಪಟ್ಟಣದ 1ನೇ ವಾರ್ಡ್‌ನ ಅಡೇಕಾರ ಓಣಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಆಚರಿಸಲಾಯಿತು. ಪಿಎಸ್‌ಐ ಗುರುಶಾಂತ್ ದಾಶ್ಯಾಳ, ಪುರಸಭೆ ಸದಸ್ಯ ರಾಜು ಸಾಂಗ್ಲಿಕಾರ, ಎಪಿಎಂಸಿ ಸದಸ್ಯೆ ಮಂಗಳಾದೇವಿ ದೇಶಮುಖ, ಶಿವರಾಜ ಘೋರ್ಪಡೆ, ಯಶರಾಜ್ ಘೋರ್ಪಡೆ, ಪಾಷಾ ಗಂಗಾವತಿ, ಹುಸೇನಸಾಬ್ ನಿಶಾನದಾರ, ಬಾಳಪ್ಪ ಪವಾರ, ನಭಿಸಾನ ನಿಶಾನದಾರ, ಹನಮಂತ ಪಾಗಾದ, ರವಿ ಮೋಹಿತೆ ಇದ್ದರು.
ಹಿರೇಕೊಪ್ಪ ಗ್ರಾಮ: ಹಿರೇಕೊಪ್ಪ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಪ್ರಯುಕ್ತ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಮುಖ್ಯ ಶಿಕ್ಷಕ ಐ.ಎ. ರೇವಡಿ ಅಧ್ಯಕ್ಷತೆ ವಹಿಸಿದ್ದರು. ಎಸ್.ಜಿ. ಕುಲಕರ್ಣಿ, ಆರ್.ಜಿ. ಮ್ಯಾಕಲ್, ಎಂ.ಎಚ್. ತಟಗಾರ, ಸಿ.ಐ. ಜೂಚನಿ, ಜಿ.ಎಂ. ಬೋಸಲೆ ಇದ್ದರು.
ಓಂ ಸಾಯಿ ಪ್ರಾಥಮಿಕ ಶಾಲೆ: ಪಟ್ಟಣದ ಹಿರೇಮನಿ ಬಡಾವಣೆಯಲ್ಲಿನ ಓಂ ಶ್ರೀಸಾಯಿ ಪ್ರಾಥಮಿಕ ಶಾಲೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಪ್ರಯುಕ್ತ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಮುಖ್ಯ ಶಿಕ್ಷಕಿ ಡಾ| ಮಂಜುಳಾ ಹಳಕಟ್ಟಿ, ಸಿದ್ದು ವಿ.ಜಿ., ಕವಿತಾ ಹಾದಿಮನಿ, ಫರ್ಜನಾ ಮುಧೋಳ, ವಿಜಯಲಕ್ಷ್ಮೀ ಮುಲ್ಕಿಪಾಟೀಲ, ಲಕ್ಷ್ಮೀ ಹಳ್ಳದ, ಮಲ್ಲಿಕಾರ್ಜುನ ಮಾಟರಂಗಿ, ಮಂಜುಳಾ ದವೆ, ಬಿ.ಎಸ್. ಸಿದ್ದರೆಡ್ಡಿ, ಸುನಂದಾ ದಿವಟೆ, ಲಕ್ಷ್ಮೀಕಾಂತ ಗಾಡಗೋಳಿ, ಉಮಾ ಹಳ್ಳಿಗುಡಿ ಸೇರಿ ಇತರರು ಇದ್ದರು.