ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವವನ್ನು ಸರಳವಾಗಿ ಆಚರಿಸಲು ನಿರ್ಧಾರ ಮಾಡಿದ ಬೆನ್ನಲ್ಲೆ ಅರಣ್ಯ ಇಲಾಖೆ ದಸರಾ ಗಜಪಡೆ ಆಯ್ಕೆ ಪ್ರಕ್ರಿಯೆ ಆರಂಭಿಸಿದ್ದು, ಬುಧವಾರ ಆನೆಶಿಬಿರಗಳಿಗೆ ಅಧಿಕಾರಿಗಳ ತಂಡ ತೆರಳಿ ಪರಿಶೀಲನೆ ನಡೆಸಿದೆ.
ದಸರಾ ಮಹೋತ್ಸವದ ಗಜಪಡೆ ಆಯ್ಕೆ,ಅವುಗಳ ಕಾಳಜಿ ಸೇರಿದಂತೆ ಆನೆಗಳ ಜವಾ ಬ್ದಾರಿ ಮೈಸೂರು ವನ್ಯಜೀವಿ ವಿಭಾಗಕ್ಕೆ ಸೇರಿರುವ ಹಿನ್ನೆಲೆ ಡಿಸಿಎಫ್ ಅಲೆಗ್ಸಾಂಡರ್ ಗುರುವಾರ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಪಶುವೈದ್ಯ ಡಾ.ಮುಜೀಬ್ ಹಾಗೂ ಇತರೆ ಸಿಬ್ಬಂದಿಯೊಂದಿಗೆ ಮತ್ತಿಗೂಡು, ಆನೆಕಾಡು, ದುಬಾರೆ ಆನೆ ಶಿಬಿರಕ್ಕೆ ಹೋಗಿ ದಸರಾ ಆನೆಗಳ ಆರೋಗ್ಯ ಸ್ಥಿತಿಗತಿಯನ್ನು ಪರಿಶೀಲಿಸಿದರು.
ಅಂಬಾರಿ ಜವಾಬ್ದಾರಿ: ಕಳೆದ ಬಾರಿ ಅಂಬಾರಿಹೊತ್ತಿದ್ದ ಅರ್ಜುನ 63 ವರ್ಷ ದಾಟಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಈ ಬಾರಿ ಭಾರ ಹೊರಿಸದಿರಲುಅರಣ್ಯಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದು, ಈ ಬಾರಿ ಅಂಬಾರಿ ಹೊರುವ ಜವಾಬ್ದಾರಿ ಕೂಂಬಿಂಗ್ ಸ್ಪೆಷಲಿಸ್ಟ್ ಎಂದೆ ಹೆಸರಾಗಿರುವಅಭಿಮನ್ಯು ಹೆಗಲಿಗೆ ವರ್ಗಾಯಿಸಲಾಗುತ್ತದೆ ಎಂಬ ಮಾತು ಕೇಳಿ ಬರುತ್ತಿದೆ.ಅರ್ಜುನನ ಮೇಲೆ ಅಂಬಾರಿ ಹೊರಿಸಿದ್ದೇ ಆದಲ್ಲಿ ವನ್ಯಜೀವಿ ಸಂರಕ್ಷಣಾ ಹೋರಾಟಗಾರರು, ಪ್ರಾಣಿ ದಯಾ ಸಂಘಟನೆ ಹಾಗೂವಿವಿಧ ಸಂಘ-ಸಂಸ್ಥೆಗಳು ನ್ಯಾಯಾಲಯದಮೆಟ್ಟಿಲೇರಬಹುದೆಂಬ ಆತಂಕ ಅರಣ್ಯಇಲಾಖೆ ಮುಂದಿದೆ.
ಅಲ್ಲದೇ ಕಳೆದ ವರ್ಷವೇ ದೆಹಲಿ ಹಾಗೂ ಬೆಂಗಳೂರಿನ ಪೀಠದ ಕಾರ್ಯಕರ್ತರು ಅಂಬಾರಿಯ 750 ಕೇಜಿ ಭಾರ ಆನೆ ಮೇಲೆ ಹೊರಿಸದಂತೆ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಕಾನೂನಿನ ನಿಯಮ ಪಾಲಿಸಿ ಅರ್ಜುನನಿಗೆ ಅಂಬಾರಿ ಹೊರುವ ಜವಾಬ್ದಾರಿಯಿಂದ ವಿನಾಯಿತಿ ನೀಡಿ, ಉಂಟಾಗಲಿರುವ ಕಾನೂನುಸಮಸ್ಯೆಯಿಂದ ತಪ್ಪಿಸಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಗುರವಾರ ಬೆಳಗ್ಗೆ ಡಿಸಿಎಫ್ ಅಲೆಗಾÕಂಡರ್ ನೇತೃತ್ವದ ತಂಡ ಮತ್ತಿಗೂಡು ಆನೆ ಶಿಬಿರಕ್ಕೆ ತೆರಳಿಅಭಿಮನ್ಯು (53)ಆನೆಯ ಆರೋಗ್ಯ, ಸ್ವಭಾವ ಹಾಗೂ ಮದ ಬಂದಿದೆಯಾಎನ್ನುವುದನ್ನು ಪರಿಶೀಲಿಸಿದರು.
ಬಳಿಕ ಆನೆಕಾಡು ಕ್ಯಾಂಪ್‌ನಲ್ಲಿರುವ ಪಟ್ಟದ ಆನೆವಿಕ್ರಮ, ಕುಮ್ಕಿ ಆನೆ ವಿಜಯ, ದುಬಾರೆಕ್ಯಾಂಪ್‌ನಲ್ಲಿರುವ ಗೋಪಿ, ಹಾಗೂ ಮತ್ತೂಂದು ಕುಮ್ಕಿ ಆನೆ ಕಾವೇರಿಯನ್ನುಪರಿಶೀಲಿಸಿದರು. ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ಜಂಬೂಸವಾರಿ ಮೆರವಣಿಗೆ ಅರಮನೆ ಆವರಣಕ್ಕೆ ಮಾತ್ರ ಸೀಮಿತಗೊಳಿಸಿರುವುದರಿಂದ ಕೇವಲ 5 ಅಥವಾ 6 ಆನೆಗಳನ್ನಷ್ಟೇ ಬರುವ ನಿರೀಕ್ಷೆ ಇದೆ.