Advertisement

ಗಜ: ಬಲಿ ಸಂಖ್ಯೆ 45ಕ್ಕೆ; ಕಳಪೆ ಪರಿಹಾರ, ಸಂತ್ರಸ್ತರಿಂದ ಪ್ರತಿಭಟನೆ

12:25 PM Nov 19, 2018 | Team Udayavani |

ಸೇಲಂ : ಅತ್ಯಂತ ಪ್ರಬಲ ಹಾಗೂ ವಿನಾಶಕಾರಿಯಾಗಿ ಪ್ರಹಾರ ನಡೆಸಿರುವ ಗಜ ಚಂಡಮಾರುತಕ್ಕೆ ಬಲಿಯಾಗಿರುವವರ ಸಂಖ್ಯೆ 45ಕ್ಕೇರಿದೆ. 

Advertisement

ಚಂಡಮಾರುತ ಸಂತ್ರಸ್ತರು ಕಳಪೆ ಪರಿಹಾರ ಕಾರ್ಯವೈಖರಿಯ ವಿರುದ್ಧ ತೀವ್ರ ಅಸಮಾಧಾನ, ಅತೃಪ್ತಿ ತೋರ್ಪಡಿಸಿ ಪ್ರತಿಭಟನೆ ನಡೆಸಿರುವ ವರದಿಗಳು ಬಂದಿವೆ. 

ಈ ನಡುವೆ ಮುಖ್ಯಮಂತ್ರಿ ಪಳನಿಸ್ವಾಮಿ ಅವರು ಚಂಡಮಾರುತದ ಪ್ರಕೋಪಕ್ಕೆ 1.7 ಲಕ್ಷ ಮರಗಳು ಧರಾಶಾಯಿಯಾಗಿವೆ; 735 ದನಗಳು ಸತ್ತಿವೆ; 1.17 ಲಕ್ಷ ಮನೆಗಳು ಹಾನಿಗೊಂಡಿವೆ ಮತ್ತು ಆರು ಜಿಲ್ಲೆಗಳಲ್ಲಿನ ಒಟ್ಟು   88,102 ಹೆಕ್ಟೇರ್‌ ಕೃಷಿ ಭೂಮಿ ತೀವ್ರವಾಗಿ ಹಾನಿಗೀಡಾಗಿವೆ ಎಂದು ತಿಳಿಸಿದ್ದಾರೆ. 

ಅತ್ಯಂತ ಕಳಪೆ ಪರಿಹಾರ ಕಾಮಗಾರಿಯನ್ನು ಚಂಡಮಾರುತ ಸಂತ್ರಸ್ತರು ಅತ್ಯುಗ್ರವಾಗಿ ಪ್ರತಿಭಟಿಸಿರುವ ನಡುವೆಯೇ ಮುಖ್ಯಮಂತ್ರಿ ಪಳನಿಸ್ವಾಮಿ ಅವರು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗೆ ಎಲ್ಲ ರಾಜಕೀಯ ಪಕ್ಷಗಳು ಕೈಜೋಡಿಸಬೇಕೆಂದು ಮನವಿ ಮಾಡಿದ್ದಾರೆ.

Advertisement

ಚೆನ್ನೈನಿಂದ ಸುಮಾರು 300 ಕಿ.ಮೀ. ದೂರದಲ್ಲಿನ ನಾಗಪಟ್ಟಿಣಂ ಸಮೀಪದ ವೇದಾರಣ್ಯಂ ಕರಾವಳಿಯನ್ನು ದಾಟುವಲ್ಲಿ ಗಜ ಚಂಡಮಾರುತ ಅಪಾರ ನಾಶ ನಷ್ಟ ಎಸಗಿದ್ದು 45 ಜೀವಗಳನ್ನು ಬಲಿಪಡೆದಿದೆ. ವೇದಾರಣ್ಯ ಪಟ್ಟಣವು ಚಂಡಮಾರುತದ ಹೊಡೆತದಿಂದ ತೀವ್ರವಾಗಿ ತತ್ತರಿಸಿದ್ದು ಅಪಾರ ನಾಶ ನಷ್ಟ ಅನುಭವಿಸಿದೆ. 

ಪುದುಕೊಟ್ಟೈ ನಿಂದ ಬಂದಿರುವ ವರದಿಯ ಪ್ರಕಾರ ಕೊತ್ತಮಂಗಲಂ ಗ್ರಾಮದ ಸಂತ್ರಸ್ತರು ತಮಗೆ ಸರಿಯಾದ ಪರಿಹಾರ, ನೆರವು ನೀಡದ್ದಕ್ಕೆ ಸರಕಾರಿ ಅಧಿಕಾರಿಗಳ ವಿರುದ್ಧ ತಮ್ಮ ಸಿಟ್ಟು, ಆಕ್ರೋಶ ತೋರಿಸಿದ್ದಾರೆ; ಪ್ರತಿಭಟನೆಯನ್ನೂ ನಡೆಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next