Advertisement

ಸಿದ್ದರಾಮೇಶ್ವರ ಜಾತ್ರೆಯಲ್ಲಿ ಗಜ ಮೆರವಣಿಗೆ

12:11 PM Jan 13, 2018 | Team Udayavani |

ಭಾಲ್ಕಿ: ಹಲಬರ್ಗಾ ಗ್ರಾಮದ ಶ್ರೀ ಗುರು ರಾಚೋಟೇಶ್ವರ ವಿರಕ್ತ ಮಠದಲ್ಲಿ ಶ್ರೀ ಸಿದ್ದರಾಮೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಶ್ರೀಮಠದ ಶ್ರೀಹಾವಗಿಲಿಂಗೇಶ್ವರ ಶಿವಾಚಾರ್ಯರನ್ನು ಗುರುವಾರ ಆನೆ ಮೇಲೆ ಕೂಡ್ರಿಸಿ ಗಜ ಮೆರವಣಿಗೆ ಮಾಡಲಾಯಿತು.

Advertisement

ಈ ವೇಳೆ ಶ್ರೀಮಠದ ಶ್ರೀ ಹಾವಗಿ ಲಿಂಗೇಶ್ವರ ಶಿವಾಚಾರ್ಯರು ಮಾತನಾಡಿ, ಶ್ರೀ ಸಿದ್ದರಾಮೇಶ್ವರ ಜಾತ್ರಾ
ಮಹೋತ್ಸವವು ಮೈಸೂರಿನ ದಸರಾ ಮಹೋತ್ಸವ ಮೀರಿಸುವಂತಿರಬೇಕು ಎನ್ನುವ ಭಕ್ತರ ಆಸೆಯ ಮೇರೆಗೆ
ಗಜ ಮೆರವಣಿಗೆ ಹಮ್ಮಿಕೊಳ್ಳಾಗಿದೆ ಎಂದರು. 

ಮೆರವಣಿಗೆಯು ಗ್ರಾಮದ ಹೊರವಲಯದ ಅನುಗ್ರಹ ಚರ್ಚ್‌ನಿಂದ ವಿವಿಧ ಬೀದಿಗಳ ಮೂಲಕ ಸಂಚರಿಸಿ ಶ್ರೀಮಠದ ಆವರಣದಲ್ಲಿ ಸಮಾವೇಶ ಗೊಂಡಿತು. ಗ್ರಾಮದ ಪ್ರಮುಖರಾದ ಗಣೇಶ ಪಾಟೀಲ ಜಾಂತಿ, ಮಲ್ಲೇಶ ಗಣಾಪುರೆ, ವೈಜನಾಥ ನೌಬಾದೆ, ಶ್ರೀ ಮುರುಘೇಂದ್ರ ದೇವರು ಚಾಂಬೋಳ, ಶಿವಯ್ನಾ ಸ್ವಾಮಿ, ರಾಜಕುಮಾರ ಹೆಬ್ಟಾಳೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next