ಕೆ.ಆರ್.ನಗರ: ತಾವು ಗಳಿಸಿದ ಜ್ಞಾನ ಯಾವತ್ತೂ ಮಾಜಿಯಾಗುವುದಿಲ್ಲ ಎಂದು ನಿವೃತ್ತ ಪ್ರಾಧ್ಯಾಪಕ ಹಾಗೂ ಸಾಹಿತಿ ಮಲೆಯೂರು ಗುರುಸ್ವಾಮಿ ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಾವೇರಿ ಸಭಾಂಗಣದಲ್ಲಿ ನಡೆದ 2017-18ನೇ ಸಾಲಿನ ಸಾಸ್ಕೃತಿಕ, ಕ್ರೀಡೆ, ಎನ್‌ಸಿಸಿ, ಎನ್‌ಎಸ್‌ಎಸ್, ಸ್ಕೌಟ್ಸ್ ಮತ್ತು ಗೈಡ್ಸ್, ರೆಡ್‌ಕ್ರಾಸ್ ಚಟುವಟಿಕೆಗಳ ಸಮಾರೋಪ ಸಮಾರಂಭ ಮತ್ತು ಕಾಲೇಜು ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.
ಜಾnನಕ್ಕೆ ಸಮಾನವಾದ ಸಂಪತ್ತು ಯಾವುದೂ ಇಲ್ಲ. ಬಳಸಿದಷ್ಟೂ ವೃದ್ಧಿಯಾಗುತ್ತದೆ. ಆದ ಕಾರಣ ವಿದ್ಯಾರ್ಥಿಗಳು ಸಂಸ್ಕಾರವಂತರಾಗುವುದರ ಜತೆಗೆ ಜಾnನ ಸಂಪಾದನೆಯ ಕಡೆ ಗಮನ ನೀಡಬೇಕು. ತ್ಯಾಗ, ಸೇವೆ ಆದರ್ಶವಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಪ್ರಾಂಶುಪಾಲ ಕೆ.ಸಿ.ವೀರಭದ್ರಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಸಾಂಸ್ಕೃತಿಕ ಸಮಿತಿ ಸಂಚಾಲಕ ಡಾ.ಯೋಗೇಶ್, ಅಧ್ಯಾಪಕ ಸಂಘದ ಕಾರ್ಯದರ್ಶಿ ಪ್ರೊ.ಪ್ರಸನ್ನಕುಮಾರ್, ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಪೊ›.ಎಂ.ವಿಶ್ವನಾಥನ್, ಲೆಫ್ಟಿನೆಂಟ್ ಪೊ›.ಪಿ.ಪ್ರಶಾಂತ್, ಪೊ›.ಹರೀಶ್‌ಗೌಡ, ಪೊ›,ಎಸ್.ಟಿ.ರಾಮು, ಎಚ್.ಜೆ.ಬೋರಯ್ಯ, ಜಿ.ಆರ್.ಲಕ್ಷ್ಮೀ, ಡಾ.ಎಚ್.ಆರ್.ಚಂದ್ರಕಲಾ, ಡಾ.ಎಂ.ಮಾದಯ್ಯ, ವ್ಯವಸ್ಥಾಪಕ ಎ.ಆರ್.ಸುರೇಶ್, ವಿದ್ಯಾರ್ಥಿಗಳಾದ ಸಹನಾ, ಅಕ್ಷತಾ ಪಾಲ್ಗೊಂಡಿದ್ದರು.