Advertisement

ಜ್ಞಾನ ಸಂಪಾದಿಸಿ ಸಾರ್ಥಕ ಜೀವನ ನಡೆಸಿ

05:03 PM Apr 30, 2018 | |

ತೇರದಾಳ: ಕಾಲೇಜಿನ ಜೀವನದಲ್ಲಿ ಜೀವನ ತೃಪ್ತಿಯಾಗುವಷ್ಟು ಜ್ಞಾನ ಸಂಪಾದಿಸಿಕೊಂಡು ಸಾರ್ಥಕ ಹಾಗೂ ಉದಾತ್‌ ಜೀವನ ನಡೆಸುವಂತಾಗಬೇಕು ಎಂದು ಪ್ರೊ.ಬಿ.ಆರ್‌. ಪೊಲೀಸ್‌ಪಾಟೀಲ ಹೇಳಿದರು.

Advertisement

ಪಟ್ಟಣದ ದಾನಿಗೊಂಡ ಪದವಿ ವಾಣಿಜ್ಯ ಮಹಾವಿದ್ಯಾಲಯದ ಸಭಾಭವನದಲ್ಲಿ ಜರುಗಿದ ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. ಆಚಾರಕ್ಕೆ ಅರಸನಾಗು, ನೀತಿಯಲ್ಲಿ ದೊರೆಯಾಗು, ಮಾತಿನಲ್ಲಿ ಚೂಡಾಮಣಿಯಾಗು, ಜಗಕ್ಕೆಲ್ಲ ಜ್ಯೋತಿಯಾಗು ಎನ್ನುವಂತೆ ಮನುಷ್ಯ ಎಲ್ಲರಿಗೂ ಬೆಳಕಿನಂತ ಉತ್ಸಾಹ ತರಿಸುವ ವ್ಯಕ್ತಿಯಾಗಬೇಕು. ಕಾಲೇಜಿನ ಜೀವನದಲ್ಲಿ ಮನಸ್ಸನ್ನು ಕೇಂದ್ರೀಕರಿಸಿಕೊಂಡು ಅಭ್ಯಾಸದತ್ತ ಸಾಗುವುದರೊಂದಿಗೆ ಭಾರತೀಯ ಸಂಸ್ಕೃತಿ, ಸಾಹಿತ್ಯಕ್ಕೆ ಗೌರವಿಸಬೇಕು. ಎಲ್ಲ ಬಗೆಯ ಕಲೆ-ಸಾಹಿತ್ಯಕ್ಕೆ ಜನಪದ ಸಾಹಿತ್ಯವೆ ಮೂಲವಾಗಿದ್ದು ನಮ್ಮ ಜನಪದ ಸಾಹಿತ್ಯದ ರುಚಿಯನ್ನು ಎಲ್ಲರು ಸವಿಯಬೇಕು. ಉತ್ಸಾಹವಿಲ್ಲದ ಜೀವನ ಜೀವನವೆ ಅಲ್ಲ. ಜನಪದ ಸೊಗಡು ಬದುಕಿಗೆ ಉತ್ಸಾಹ ನೀಡಬಲ್ಲದು. ಆಸಕ್ತಿಯಿಂದ ಓದಿ ಹೆಚ್ಚು ಅಂಕ ಗಳಿಸುವುದರೊಂದಿಗೆ, ಮೀತಿ-ನಿಯಮ, ಗುರು ಹಿರಿಯರಿಗೆ ಗೌರವಿಸುವ ಭಾವನೆ ಹೊಂದಿರಬೇಕು ಎಂದರು.

ಎಸ್‌ಡಿಎಂ ಟ್ರಸ್ಟ್‌ ದಾನಿಗೊಂಡ ಸಮೂಹ ಶಿಕ್ಷಣ ಸಂಸ್ಥೆಗಳ ಚೇರಮನ್‌ ಡಾ. ಎಂ.ಎಸ್‌. ದಾನಿಗೊಂಡ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೆ ಸಂದರ್ಭದಲ್ಲಿ ಪ್ರೊ.ಬಿ.ಆರ್‌. ಪೊಲೀಸ್‌ ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಆರ್‌.ಪಿ. ಪಟೇಲ, ಆರ್‌.ಪಿ. ಚಿಂಚಖಂಡಿ, ಜಿ.ಐ. ಕುಂಬಾರ, ಗಂಗಾ ಯಾದವಾಡ, ಶ್ರೀಕಾಂತ ಕೆಂಧೂಳಿ ಸೇರಿದಂತೆ ಸಿಬ್ಬಂದಿ, ವಿದ್ಯಾರ್ಥಿ ಮುಖಂಡರಾದ ಚೇತನ ಆಲಗೂರ, ದಾನಮ್ಮ ಹಿರೇಮಠ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಐಶ್ವರ್ಯ ಬಡಿಗೇರ ಪ್ರಾರ್ಥಿಸಿದರು.

ತೇಜಶ್ವಿ‌ನಿ ಆಲಗೂರ ಸ್ವಾಗತಿಸಿದರು. ಪಂಶುಪಾಲ ಆರ್‌.ಡಿ. ಬೀಳಗಿ ಪ್ರಾಸ್ತಾವಿಕ ಮಾತನಾಡಿದರು. ಕೆ.ಎಸ್‌. ವಿಟೇಕರ ವರದಿ ವಾಚಿಸಿದರು. ಸುಷ್ಮಿತಾ ಆಲಗೂರ, ತೇಜಶ್ವಿ‌ನಿ ಕಡಹಟ್ಟಿ ನಿರೂಪಿಸಿದರು. ದೀಪಾ ಶಿರಗಾರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next