Advertisement
ಏನಿದು ಪರೀಕ್ಷೆ?ಒಂದು ವೇಳೆ, ಗಗನಯಾನ ನೌಕೆಯು ಉಡಾವಣೆಯಾದ ಬಳಿಕ ತುರ್ತಾಗಿ ಸ್ಥಗಿತಗೊಳಿಸಬೇಕಾದ ಸ್ಥಿತಿ ಬಂದರೆ, ಗಗನಯಾತ್ರಿಗಳನ್ನು ಒಳಗೊಂಡ ಕ್ರ್ಯೂ ಮಾಡ್ಯೂಲ್ ಅನ್ನು ಸುರಕ್ಷಿತವಾಗಿ ಭೂಮಿಗೆ ಇಳಿಸಲು ಇರುವಂಥ ತುರ್ತು ಎಸ್ಕೇಪ್ ವ್ಯವಸ್ಥೆಯನ್ನೇ “ಕ್ರ್ಯೂ ಎಸ್ಕೇಪ್ ಮಾಡ್ಯೂಲ್’ ಎಂದು ಕರೆಯುತ್ತಾರೆ. ಇದರ ಪರೀಕ್ಷೆಗಾಗಿ ಇಸ್ರೋ ಒತ್ತಡವಿಲ್ಲದ ಕ್ರ್ಯೂ ಮಾಡ್ಯೂಲ್(ಸಿಎಂ)ವೊಂದನ್ನು ಅಭಿವೃದ್ಧಿಪಡಿಸಿದೆ. ಇದು ಗಗನಯಾನದ ಕ್ರ್ಯೂ ಮಾಡ್ಯೂಲ್‌ನಷ್ಟೇ ಗಾತ್ರ ಮತ್ತು ದ್ರವ್ಯರಾಶಿಯನ್ನು ಹೊಂದಿರುತ್ತದೆ. ಅಲ್ಲದೆ, ನೈಜ ಮಾಡ್ನೂಲ್‌ನಲ್ಲಿರುವ ಎಲ್ಲ ವ್ಯವಸ್ಥೆಗಳು ಅಂದರೆ ಪ್ಯಾರಾಚೂಟ್, ಪತ್ತೆ ಸಾಧನ, ಆಕುcವೇಷನ್ ಸಿಸ್ಟಂ ಇತ್ಯಾದಿಗಳನ್ನು ಹೊಂದಿರುತ್ತದೆ. ಅ.21ರಂದು ನಡೆಯುವ ಪರೀಕ್ಷೆ ವೇಳೆ ಈ ಮಾಡ್ನೂಲ್ ಅನ್ನು ಉಡಾವಣೆ ಮಾಡಿ ಬಂಗಾಳ ಕೊಲ್ಲಿಯಲ್ಲಿ ಇಳಿಯುವಂತೆ ಮಾಡಲಾಗುತ್ತದೆ. ಭೂಮಿಯಿಂದ 17 ಕಿ.ಮೀ. ಎತ್ತರದಲ್ಲಿ ಪರೀಕ್ಷಾ ನೌಕೆಯಿಂದ ಕ್ರ್ಯೂ ಮಾಡ್ಯೂಲ್ ಪ್ರತ್ಯೇಕಗೊಳ್ಳುತ್ತದೆ. ನಂತರ, ನೌಕಾಪಡೆಯ ತಂಡ ಹಾಗೂ ನೌಕೆಯೊಂದನ್ನು ಬಳಸಿಕೊಂಡು ಮಾಡ್ಯೂಲ್ ಅನ್ನು ಪತ್ತೆ ಹಚ್ಚಿ ಹೊರತರಲಾಗುತ್ತದೆ.