Advertisement

ಕೇರಳದಲ್ಲಿ ಉದ್ದದ ಫ್ಲೈ ಓವರ್‌ ನಿರ್ಮಾಣ

11:04 PM Dec 15, 2022 | Team Udayavani |

ತಿರುವನಂತಪುರ: ಕೇರಳದ ಅರೂರ್‌ನಿಂದ ತುರವೂರ್‌ ತೆಕ್ಕುವರೆಗೆ 13 ಕಿಮೀ ಉದ್ದದ ಫ್ಲೈಓವರ್‌ ನಿರ್ಮಾಣ ಮಾಡಲಾಗುತ್ತದೆ. ಕಾಮಗಾರಿ ಮುಕ್ತಾಯದ ಬಳಿಕ ಅದು ದೇಶದಲ್ಲಿಯೇ ಅತ್ಯಂತ ಉದ್ದದ ಫ್ಲೈ ಓವರ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.

Advertisement

ತಿರುವನಂತಪುರದಲ್ಲಿ 45,536 ಕೋಟಿ ರೂ. ಮೌಲ್ಯದ ಯೋಜನೆಗಳ ಶಿಲಾನ್ಯಾಸ ಮತ್ತು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, 2025ರ ಒಳಗಾಗಿ ಕೇರಳವೊಂದರಲ್ಲಿಯೇ 3 ಲಕ್ಷ ಕೋಟಿ ರೂ. ಹೆದ್ದಾರಿ ಕಾಮಗಾರಿ ಗಳಿಗಾಗಿ ವೆಚ್ಚ ಮಾಡಲಿದೆ. ಕೇರಳ ಸೇರಿದಂತೆ ದಕ್ಷಿಣ ಭಾರತ ರಾಜ್ಯಗಳಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟ ಇರುವ ಹೆದ್ದಾರಿ ನಿರ್ಮಾಣದ ಗುರಿ ಹಾಕಿ ಕೊಂಡಿದೆ ಎಂದರು.

ತಮಿಳುನಾಡು ಮತ್ತು ಕರ್ನಾಟಕ ನಡುವೆ ಸಂಪರ್ಕವನ್ನು ಇನ್ನಷ್ಟು ಉತ್ತಮಗೊಳಿಸಲು ನೆರವಾಗಲಿದೆ ಎಂದು ಸಚಿವ ಗಡ್ಕರಿ ಹೇಳಿದರು. ಈ ಹೆದ್ದಾರಿಯಿಂದಾಗಿ ಕಾಸರಗೋಡು, ಕಣ್ಣೂರು, ಕಲ್ಲಿಕೋಟೆ, ಮಲಪ್ಪುರಂ, ಪಾಲಕ್ಕಾಡ್‌, ತೃಶೂರ್‌, ಎರ್ನಾಕುಳಂ, ಆಲಪ್ಪುಳ, ಕೊಲ್ಲಂ ಮತ್ತು ತಿರುವ ನಂತಪುರ ಜಿಲ್ಲೆಗಳ ಆರ್ಥಿಕಾಭಿವೃದ್ಧಿ ವೃದ್ಧಿಯಾಗಲಿದೆ ಎಂದರು.

ಕೈಗಾರಿಕಾ ಕಾರಿಡಾರ್‌: ಒಟ್ಟು 919 ಕಿಮೀ ಉದ್ದದ ಕೈಗಾರಿಕಾ ಕಾರಿಡಾರ್‌ ಕೇರಳದ ಮೂಲಕ ಹಾದುಹೋಗಲಿದೆ ಎಂದು ಹೇಳಿದ ಸಚಿವ ಗಡ್ಕರಿ,  ಬೆಂಗಳೂರಿನಿಂದ ಮಲಪ್ಪುರಂ ನಡುವಿನ 323 ಕಿಮೀ ದೂರದ ಪೈಕಿ 73 ಕಿಮೀ ಕೇರಳದಲ್ಲಿ ನಿರ್ಮಾಣವಾಗಲಿದೆ. ಅದಕ್ಕಾಗಿ 7,314 ಕೋಟಿ ರೂ. ವೆಚ್ಚ ವಾಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next