Advertisement

ಮಂಗಳೂರಿಗೆ ನಾಳೆ ಕೇಂದ್ರ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ

01:17 AM Feb 27, 2022 | Team Udayavani |

ಮಂಗಳೂರು: ಕೇಂದ್ರ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಫೆ. 28ರಂದು ದಕ್ಷಿಣ ಕನ್ನಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳಿಗೆ ಸಂಬಂಧಿಸಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಸಂಸದ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

Advertisement

ಕುಲಶೇಖರ ಕೋರ್ಡೆಲ್‌ ಚರ್ಚ್‌ ಮೈದಾನದಲ್ಲಿ ಸಂಜೆ 5 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ, ರಾಜ್ಯ ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ. ಪಾಟೀಲ್‌, ಸಚಿವರಾದ ಸುನಿಲ್‌ ಕುಮಾರ್‌, ಎಸ್‌. ಅಂಗಾರ ಭಾಗವಹಿಸಲಿರುವರು ಎಂದರು.

ಈ ವೇಳೆ ರಾಷ್ಟ್ರೀಯ ಹೆದ್ದಾರಿ 66ರ ಎನ್‌ಎಂಪಿಟಿ ಸಂಪರ್ಕಿಸುವ ಕೆಪಿಟಿ ಜಂಕ್ಷನ್‌ನಲ್ಲಿ 34.61 ಕೋ.ರೂ. ವೆಚ್ಚದಲ್ಲಿ ವಿಯುಪಿ ನಿರ್ಮಾಣ, ರಾ.ಹೆ. 75ರ ಬೆಂಗಳೂರು -ಮಂಗಳೂರು ವಿಭಾಗದಲ್ಲಿ ಗುಂಡ್ಯ ಅಡ್ಡ ಹೊಳೆಯಿಂದ ಪೆರಿಯಶಾಂತಿ ವರೆಗೆ 442.87 ಕೋ.ರೂ. ವೆಚ್ಚದ 15.13 ಕಿ.ಮೀ. ದೂರದ ನಾಲ್ಕು ಪಥ ರಸ್ತೆ ನಿರ್ಮಾಣ, ಗುಂಡ್ಯ ಅಡ್ಡಹೊಳೆಯಿಂದ ಪೆರಿಯಶಾಂತಿ -ಬಂಟ್ವಾಳಕ್ಕೆ 48.48 ಕಿ.ಮೀ. ದೂರಕ್ಕೆ 1,480.85 ಕೋ. ರೂ. ವೆಚ್ಚದ ಚತುಷ್ಪಥ ನಿರ್ಮಾಣ ಮತ್ತು ಕಲ್ಲಡ್ಕ ಪೇಟೆಯಲ್ಲಿ 6 ಪಥದ ಮೇಲ್ಸೇತುವೆ ಕಾಮಗಾರಿ, ರಾ.ಹೆ. 169ರ ಬಿಕರ್ನಕಟ್ಟೆ-ಸಾಣೂರು ನಡುವೆ 45.01 ಕಿ.ಮೀ. ದೂರದ 1,137 ಕೋ.ರೂ. ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ನಡೆಯಲಿದೆ ಎಂದರು.

ರಾ.ಹೆ.73ರ ಮಂಗಳೂರು ತುಮಕೂರು ಭಾಗದ ಪುಂಜಾಲ ಕಟ್ಟೆಯಿಂದ ಚಾರ್ಮಾಡಿ ವರೆಗೆ ಪೇವ್‌ ಶೋಲ್ಡರ್‌ ನೊಂದಿಗೆ ದ್ವಿಪಥವಾಗಿ ರಸ್ತೆಯನ್ನು 696.26 ಕೋರೂ.ಗಳಲ್ಲಿ 35 ಕಿ.ಮೀ. ವರೆಗೆ ಅಭಿವೃದ್ಧಿಪಡಿಸ ಲಾಗುವುದು. ರಾ.ಹೆ. 275ರ 16.35 ಕಿ.ಮೀ, 17.80 ಕಿ.ಮೀ., 20.60 ಕಿ.ಮೀ., 23 ಕಿ.ಮೀ., 24.90 ಕಿ.ಮೀ., 27.36 ಕಿ.ಮೀ, 46.27 ಕಿ.ಮೀ ಮತ್ತು 66.64 ಕಿ.ಮೀ.ಗಳಲ್ಲಿ ಒಟ್ಟು 48.96 ಕೋ.ರೂ.ಗಳಲ್ಲಿ 8 ಕಿರು ಸೇತುವೆಗಳ ನಿರ್ಮಾಣ ವಾಗಲಿದೆ. ಡಿಪಿಆರ್‌ಗೆ ಕೇಂದ್ರ ಭೂಸಾರಿಗೆ ಸಚಿವಾಲಯದಲ್ಲಿ ಅನು ಮೋದನೆ ಹಂತದಲ್ಲಿದೆ ಎಂದರು.

ಲೋಕಾರ್ಪಣೆ
ರಾ.ಹೆ. 234ರ ಬಿ.ಸಿ.ರೋಡ್‌- ಪುಂಜಾಲಕಟ್ಟೆ ಭಾಗದ 20.15 ಕಿ.ಮೀ.ನಿಂದ 40 ಕಿ.ಮೀ. ವರೆಗೆ 19.85 ಕಿ.ಮೀ. ದೂರದ ದ್ವಿಪಥ ರಸ್ತೆ 159.70 ಕೋ.ರೂ. ವೆಚ್ಚದಲ್ಲಿ ವಿಸ್ತರಣೆಯಾಗಿದ್ದು, ಅದರ ಲೋಕಾರ್ಪಣೆ ನೆರವೇರಲಿದೆ ಎಂದು ನಳಿನ್‌ ತಿಳಿಸಿದರು.

Advertisement

ಸಚಿವ ಸುನಿಲ್‌ ಕುಮಾರ್‌, ಶಾಸಕ ವೇದವ್ಯಾಸ ಕಾಮತ್‌, ಮೇಯರ್‌ ಪ್ರೇಮಾನಂದ ಶೆಟ್ಟಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next