ಕೊರೊನಾ ಲಾಕ್‌ಡೌನ್ ತೆರವಾದ ಬಳಿಕ ತನ್ನ ಪೋಸ್ಟರ್, ಟೀಸರ್ ಮತ್ತು ಟ್ರೇಲರ್ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಒಂದಷ್ಟು ಸದ್ದು ಮಾಡುತ್ತಿರುವ “ಗಡಿಯಾರ’ ಚಿತ್ರ ತೆರೆಗೆ ಬರೋದಕ್ಕೆ ಟೈಮ್ ಫಿಕ್ಸ್ ಆಗಿದೆ.
ಯುವ ನಿರ್ದೇಶಕ ಪ್ರಬಿಕ್ ಮೊಗವೀರ್ ನಿರ್ಮಾಣ ಮತ್ತು ನಿರ್ದೇಶನದಲ್ಲಿ ಮೂಡಿ ಬಂದಿರುವ “ಗಡಿಯಾರ’ ಚಿತ್ರ ಇದೇ ನ.27ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಮತ್ತು ನಿರ್ಮಾಪಕ ಪ್ರಬಿಕ್ ಮೊಗವೀರ್, “ಟೈಟಲ್ಲೆ ಹೇಳುವಂತೆ, ಇದೊಂದುಕಳೆದು ಹೋದಕಾಲದಘಟನೆಗಳನ್ನು ನೆನಪಿಸುವಂಥ ಪಕ್ಕಾ ಕಮರ್ಷಿಯಲ್ ಸಿನಿಮಾ. ಇದರಲ್ಲಿ ರಾಜಮನೆತನಗಳ ಇತಿಹಾಸವಿದೆ. ಜೊತೆಗೆ ಇಂದಿನ ವಾಸ್ತವವಿದೆ. ಲವ್,ಕಾಮಿಡಿ, ಹಾರರ್, ಸಸ್ಪೆನ್ಸ್, ಆ್ಯಕ್ಷನ್, ಥ್ರಿಲ್ಲರ್ ಹೀಗೆ ಎಲ್ಲ ಎಲಿಮೆಂಟ್ಸ್ ಸಿನಿಮಾದಲ್ಲಿದೆ. ಆಡಿಯನ್ಸ್‌ಗೆ ಎಲ್ಲೂ ಮಿಸ್ ಆಗದ ಕಂಪ್ಲೀಟ್ ಎಂಟರ್‌ಟೈನ್ಮೆಂಟ್ ಈ ಸಿನಿಮಾದಲ್ಲಿ ನೋಡಬಹುದು’ ಎನ್ನುತ್ತಾರೆ.
ಇನ್ನು “ಗಡಿಯಾರ’ ಚಿತ್ರದಲ್ಲಿ ಬೃಹತ್‌ಕಲಾವಿದರ ದಂಡೇ ಇದೆ. ರಾಜ್ ದೀಪಕ್ ಶೆಟ್ಟಿ, ಶೀತಲ್ ಶೀತಲ್ ಶೆಟ್ಟಿ, ಸುಚೇಂದ್ರ ಪ್ರಸಾದ್, ಶರತ್ ಲೋಹಿತಾಶ್ವ, ಯಶ್ ಶೆಟ್ಟಿ, ಪ್ರದೀಪ್ ಪೂಜಾರಿ, ಗಣೇಶ್ ರಾವ್, ರಾಧಾ ರಾಮಚಂದ್ರ, ಮನ್‌ದೀಪ್ ರಾಯ್, ಪ್ರಣಯ ಮೂರ್ತಿ, ರಾಜ್ ಮುನಿ, ದಬಾಂಗನಾ ಚೌದರಿ ಮೊದಲಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಇದನ್ನೂ ಓದಿ :ಸಂಖ್ಯೆಗಿಂತ ಭಿನ್ನ ಪಾತ್ರಗಳೇ ಮುಖ್ಯ
ಜೊತೆಗೆ ನಿವೃತ್ತ ಐಪಿಎಸ್ ಅಧಿಕಾರಿ ಸಾಂಗ್ಲಿಯಾನ, ಮಲಯಾಳಂ ನಟ ರಿಹಾಜ್, ಹಿಂದಿ ನಟ ಗೌರಿ ಶಂಕರ್ ಕೂಡ ಚಿತ್ರದ ಅತಿಥಿ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಇತ್ತೀಚೆಗೆ “ಗಡಿಯಾದ’ ಚಿತ್ರದ ಫಸ್ಟ್‌ಲುಕ್ ಅನ್ನು ಸಿ.ಎಂ ಬಿ.ಎಸ್ ಯಡಿಯೂರಪ್ಪ, ಪೋಸ್ಟರ್ ಅನ್ನು ಸಚಿವ ವಿ. ಸೋಮಣ್ಣ ಬಿಡುಗಡೆಗೊಳಿಸಿಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. “ಈಗಾಗಲೇ ಬಿಡುಗಡೆಯಾಗಿರುವ “ಗಡಿಯಾರ’ದ ಫಸ್ಟ್‌ಲುಕ್, ಟೀಸರ್, ಟ್ರೇಲರ್ ಎಲ್ಲದಕ್ಕೂ ಬಿಗ್ ರೆಸ್ಪಾನ್ಸ್ ಸಿಗುತ್ತಿದೆ. ಮತ್ತೂಂದೆಡೆ ಚಿತ್ರದ ಡಬ್ಬಿಂಗ್ ರೈಟ್ಸ್ ಗಾಗಿ ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಸಾಕಷ್ಟು ಬೇಡಿಕೆಯಿದ್ದು, ಮಾತುಕತೆ ಕೂಡ ನಡೆದಿದೆ. ಸಿನಿಮಾ ಇದೇ ನ.27ರಂದು ರಾಜ್ಯಾದ್ಯಂತ ರಿಲೀಸ್ ಮಾಡಲು ಪ್ಲಾನ್ ಮಾಡಿಕೊಂಡಿದ್ದು, ಆಡಿಯನ್ಸ್‌ಗೆ ಇಷ್ಟವಾಗುವುತ್ತದೆ’ ಎಂಬ ಭರವಸೆ ವ್ಯಕ್ತಪಡಿಸುತ್ತಾರೆ.
“ಆತ್ಮ ಸಿನಿಮಾಸ್’ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ “ಗಡಿಯಾರ’ ಚಿತ್ರಕ್ಕೆ ಶ್ಯಾಮ್ ಸಿಂಧನೂರು ಛಾಯಾಗ್ರಹಣ, ಎನ್.ಎಂ ವಿಶ್ವ ಸಂಕಲನವಿದೆ. ಚಿತ್ರದ ಹಾಡುಗಳಿಗೆ ರಾಘವ್‌ಸುಭಾಷ್ ಸಂಗೀತ ಸಂಯೋಜಿಸಿದ್ದು, ಹೇಮಂತ್ ಕುಮಾರ್, ವ್ಯಾಸ ರಾಜ್, ಅನುರಾಧಾ ಭಟ್, ಅಪೂರ್ವ ಮೊದಲಾದವರು ಹಾಡುಗಳಿಗೆ ಧ್ವನಿಯಾಗಿದ್ದಾರೆ. “ಆಕಾಶ್ ಆಡಿಯೋ’ಕಂಪೆನಿ ಚಿತ್ರದ ಆಡಿಯೋ ರೈಟ್ಸ್ ಖರೀದಿಸಿದೆ. ಸದ್ಯಒಂದಷ್ಟು ನಿರೀಕ್ಷೆ ಮೂಡಿಸಿರುವ “ಗಡಿಯಾರ’ ಹೇಗಿರಲಿದೆ ಎಂಬ ಕುತೂಹಲಕ್ಕೆ ಮುಂದಿನವಾರ ತೆರೆ ಬೀಳಲಿದೆ.