Advertisement

30ಕ್ಕೆ ಗಡಿ ಹಳ್ಳಿ ಹಬ್ಬ, ಸಂಗೀತ ಸಂಜೆ ಕಾರ್ಯಕ್ರಮ

04:54 PM Oct 21, 2021 | Team Udayavani |

ಔರಾದ: ತಾಲೂಕಿನ ಚೊಂಡಿಮುಖೇಡ್‌ ಗ್ರಾಮದಲ್ಲಿ ಅ.30ರಂದು ಬೆಳಗ್ಗೆ 9ಗಂಟೆಗೆ ಗಡಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಬಿದರಿ, ಬೀದರ ಜಿಲ್ಲಾ ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ “ಗಡಿ ಹಳ್ಳಿ ಹಬ್ಬ’ ಹಾಗೂ ಸಂಜೆ 4ಕ್ಕೆ ಬೀದರನ ರಂಗಮಂದಿರದಲ್ಲಿ ಸಂಗೀತ ಸಂಜೆ ಕಾರ್ಯಕ್ರಮ ಆಯೋಜಿಸಲಾಗಿದೆ.

Advertisement

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಕನ್ನಡಪರ ಸಂಘಟನೆಗಳ ಮುಖಂಡರು, ಸಾಹಿತಿಗಳು ಸೇರಿದಂತೆ ಅನೇಕರು ಕಾರ್ಯಕ್ರಮದ ರೂಪುರೇಷೆಗಳ ಕುರಿತು ಸಮಾಲೋಚನೆ ನಡೆಸಿದರು.

ಗಡಿ ಗ್ರಾಮ ಚೊಂಡಿಮುಖೇಡದಲ್ಲಿ ಬೆಳಿಗ್ಗೆ 9ಕ್ಕೆ ಹಳ್ಳಿ ಹಬ್ಬ ಕಾರ್ಯಕ್ರಮ ಆಯೋಜಿಸಿದರೆ ಸಂಜೆ ಬೀದರನ ರಂಗ ಮಂದಿರದಲ್ಲಿ ಗಾನ ಕೋಗಿಲೆ ಲತಾ ಮಂಗೇಶ್ಕರ್‌ ಹಾಗೂ ಆಶಾ ಭೋಸ್ಲೆ ಅವರ ಗೌರವಾರ್ಥ ಸಂಗೀತ ಸಂಜೆ ಕಾರ್ಯಕ್ರಮ ನೆರವೇರಿಸಲು ಚರ್ಚಿಸಲಾಯಿತು.

ಇದನ್ನೂ ಓದಿ: ಅಕ್ರಮವಾಗಿ ಕೋಣಗಳ ಸಾಗಾಟ: ಲಾರಿ, ಕಾರು ಸಮೇತ ಆರೋಪಿಗಳ ಬಂಧನ

ಚೊಂಡಿಮುಖೇಡ್‌ನ‌ ಪಂಡಿತರಾವ್‌ ಪಾಟೀಲ ಮಾತನಾಸಸಡಿ, ಸಮಾರಂಭದ ಆಯೋಜನೆ ಸಂತಸ ತಂದಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಗಡಿ ಭಾಗದಲ್ಲಿ ಶಿಕ್ಷಣ, ಆರೋಗ್ಯ ಸೇರಿದಂತೆ ಮೂಲ ಸೌಲಭ್ಯಗಳು ಸಾರ್ವಜನಿಕರಿಗೆ ದೊರೆಯುವಂತೆ ಕಾಳಜಿ ವಹಿಸಬೇಕು ಎಂದರು.

Advertisement

ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಸುರೇಶ ಚೆನ್ನಶೆಟ್ಟಿ, ಡಾ| ರಾಜಕುಮಾರ ಹೆಬ್ಟಾಳೆ, ಯುವ ಮುಖಂಡ ಪ್ರದೀಪ ಕುಮಾರ ರಕ್ಷಾಳೆ ಮಾತನಾಡಿದರು. ರಾಮದಾಸ ಅಠವಾಲೆ, ನರೇಂದ್ರ, ಅಜೀತ್‌ ಪಾಟೀಲ, ಡಾ| ವೈಜಿನಾಥ ಬುಟ್ಟೆ, ತಾಪಂ ಇಒ ಮಾಣಿಕರಾವ ಪಾಟೀಲ, ಶಿವಾನಂದ ಔರಾದೆ, ಶಿವಕುಮಾರ ಘಾಟೆ, ಜಗನ್ನಾಥ ಮೂಲಗೆ, ನಾಗಶೆಟ್ಟಿ ಧರಂಪೂರ್‌, ಸಂಜೀವಕುಮಾರ ಜುಮ್ಮಾ, ಬಸವರಾಜ ಶಟಕಾರ, ವೀರೇಶ ಅಲಮಾಜೆ, ಸಂಗಮೇಶ ಬೆಲ್ದಾಳ, ಶಾಲಿವಾನ ಸಿದಬಟ್ಟೆ, ಬಿಎಂ ಅಮರವಾಡಿ, ದೇವಿದಾಸ ಜೋಶಿ, ವಿ.ಎಸ್‌ ಉಪ್ಪಿನ್‌, ಉಮಾಕಾಂತ ಮಹಾಜನ, ಶಿವಶರಣಪ್ಪ ವಲ್ಲೆಪೂರೆ, ಬಸವರಾಜ ರುದನೂರ್‌, ಪರಮೇಶ ವಿಳಸಪೂರೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next