Advertisement

ಬಂಡಾಯದ ನೆಲ ನವಲಗುಂದದಲ್ಲಿ ಗಡ್ಡಿ, ದ್ಯಾಮಕ್ಕನವರ ಕಹಳೆ

12:47 PM Apr 18, 2018 | |

ನ‌ವಲಗುಂದ: ಮೂರು ಬಾರಿ ಸೋತಿದ್ದೇನೆಂದು ನನಗೆ ಟಿಕೆಟ್‌ ನೀಡಿಲ್ಲ. ಆದರೆ ಅಜೀಂಪೀರ ಖಾದ್ರಿ ಮತ್ತು ಆರ್‌.ಬಿ. ತಿಮ್ಮಾಪುರ ಮೂರು ಬಾರಿ  ಸೋತರೂ ಅವರಿಗೆ ಟಿಕೆಟ್‌ ನೀಡಿದ್ದಾರೆ. ತಿಮ್ಮಾಪುರ ಸೋತಾಗ ಎಂಎಲ್‌ಸಿ ಮಾಡಿದ್ದರು. ಆದರೆ ನನಗೆ ಯಾವುದೇ ಹುದ್ದೆ ಕೇಳಿಲ್ಲ, ಕೇವಲ ಪಕ್ಷದ  ಟಿಕೆಟ್‌ ಮಾತ್ರ ಕೇಳಿದ್ದೇನೆ ಎಂದು ಮಾಜಿ ಸಚಿವ ಕೆ.ಎನ್‌. ಗಡ್ಡಿ ಹೇಳಿದರು. 

Advertisement

ಪಟ್ಟಣದ ತಮ್ಮ ಹತ್ತಿ ಜಿನ್ನಿಂಗ್‌ ಫ್ಯಾಕ್ಟರಿಯಲ್ಲಿ ಅಭಿಮಾನಿಗಳ  ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ನಿಷ್ಠೆಯಿಂದ ದುಡಿದಿದ್ದೇನೆ. ಆದರೆ, ಪಕ್ಷ ಮತ್ತು  ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ನನಗೆ ಮೋಸವಾಗಿದೆ ಎಂದು ವಿಷಾದಿಸಿದರು. 

ಪಕ್ಷದಲ್ಲಿದ್ದುಕೊಂಡೇ ನನ್ನ ಬೆನ್ನಿಗೆ ಚೂರಿ ಹಾಕಿರುವವರು ಬಹಳ  ಜನ ಇದ್ದಾರೆ. ಆದರೆ, ನಾನು ಯಾರೊಬ್ಬರಿಗಾದರೂ ಮೋಸ, ವಂಚನೆ ಮಾಡಿದ್ದರೆ ಅಥವಾ ಜಾತಿ ಆಧಾರದ ಮೇಲೆ ಇವನಿಗೆ ಮತ ಹಾಕಿ-ಹಾಕಬೇಡಿ  ಎಂದಿದ್ದರೆ ಒಬ್ಬರನ್ನಾದರೂ ತೋರಿಸಿ ಎಂದು ಸವಾಲು ಹಾಕಿದರು. 

ನನ್ನ ಪಕ್ಷ ನಿಷ್ಠೆಗೆ ಬೇರೆಯ ಪ್ರಮಾಣ ಪತ್ರ ಬೇಕಿಲ್ಲ. ಮುಂದಿನ ದಿನಗಳಲ್ಲಿ ನನ್ನ  ಅಭಿಮಾನಿಗಳಲ್ಲಿ ಒಬ್ಬರನ್ನು ಶಾಸಕರನ್ನಾಗಿ ಮಾಡುವ ತಾಕತ್ತು ನನ್ನಲ್ಲಿ ಇದೆ. ಅಭಿಮಾನಿಗಳು ಸ್ವಲ್ಪ ದಿನ ಕಾಯಬೇಕು. ನಾನು ಯಾರಿಗೂ ನನ್ನ  ಪರವಾಗಿ ರಾಜೀನಾಮೆ ನೀಡುವಂತೆ ಹೇಳಲ್ಲ ಎಂದರು.

ಜಿಲ್ಲಾಧ್ಯಕ್ಷ ಎಚ್‌.ವಿ. ಮಾಡಳ್ಳಿ. ಬಿ.ಕೆ. ಮಹೇಶ, ಸದುಗೌಡ ಪಾಟೀಲ, ವೆಂಕಮ್ಮ ಚಾಕಲಬ್ಬಿ, ಎ.ಎಂ. ನದಾಫ್‌ ಮಾತನಾಡಿ, ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಎಂದರೆ ಗಡ್ಡಿಯವರು, ಗಡ್ಡಿಯವರೆಂದರೆ ಕಾಂಗ್ರೆಸ್‌ ಪಕ್ಷ ಎಂಬುದಾಗಿದೆ. ಚುನಾವಣೆ ನಿಮ್ಮ ನೇತೃತ್ವದಲ್ಲೇ ಎದುರಿಸೋಣ. ಪಕ್ಷದಲ್ಲಿ ನಿಮ್ಮ ಗೌರವಕ್ಕೆ ಧಕ್ಕೆ ಬರದಂತೆ ಹಿರಿಯ ಮುಖಂಡರೊಂದಿಗೆ ಚರ್ಚಿಸಿ  ಸ್ಥಾನಮಾನ ದೊರಕಿಸಿ ಕೊಡುತ್ತೇವೆ ಎಂದರು. ಗಡ್ಡಿ ಅವರು ಅದಕ್ಕೂ ಒಪ್ಪಲಿಲ್ಲ. 

Advertisement

ಗಡ್ಡಿ ನೇತೃತ್ವದಲ್ಲೇ ಚುನಾವಣೆ
ನವಲಗುಂದ:
ಕೆ.ಎನ್‌.ಗಡ್ಡಿ ಪಕ್ಷಕ್ಕೆ ರಾಜೀನಾಮೆ ನೀಡಿದರೂ ಅವರನ್ನು ಮತ್ತೆ ಕರೆತಂದು ಅವರ ನೇತೃತ್ವದಲ್ಲೇ ವಿಧಾನಸಭಾ ಚುನಾವಣೆ ಎದುರಿಸಲಿದ್ದೇವೆ  ಎಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಎಚ್‌.ವಿ. ಮಾಡಳ್ಳಿ ಹೇಳಿದರು. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಾನಂದ  ಕರಿಗಾರ ಅವರು ಪಕ್ಷ ಸೇರ್ಪಡೆಗೊಂಡ ಸಂದರ್ಭದಲ್ಲಿ ಅವರಿಗೆ ಟಿಕೆಟ್‌ ನೀಡಬಾರದು, ನಮ್ಮ ಹತ್ತು ಜನರಲ್ಲಿ ಯಾರಾದರೂ ಒಬ್ಬರಿಗೆ ಟಿಕೆಟ್‌ ನೀಡಿದರೂ ಎಲ್ಲರೂ ಕೂಡಿಕೊಂಡು ಚುನಾವಣೆ ಎದುರಿಸುತ್ತೇವೆ ಎಂದು ಮಾತುಕತೆ ನಡೆಸಲಾಗಿತ್ತು. ಮಾಜಿ ಸಚಿವರ ನೇತೃತ್ವದಲ್ಲಿ ಚುನಾವಣೆ  ನಡೆಸಬೇಕೆಂದು ಈ ಮೊದಲೇ ನಿರ್ಧರಿಸಲಾಗಿತ್ತು.

ಮಾಜಿ ಸಚಿವ ಕೆ.ಎನ್‌. ಗಡ್ಡಿ ಹಿರಿಯ ಮುತ್ಸದ್ದಿ ರಾಜಕಾರಣಿ. ಅವರಿಗೆ ಪಕ್ಷದ ಟಿಕೆಟ್‌ ನೀಡಿದರೆ ಈ  ಬಾರಿ ಗೆಲುವು ಸಾಧಿಸಲಿದ್ದಾರೆಂದು ಎಲ್ಲ ಹಿರಿಯ ಮುಖಂಡರು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವರಿಕೆ ಮಾಡಲಾಗಿತ್ತು. ಆದರೆ  ಹೈಕಮಾಂಡ್‌ ಯುವಕರಿಗೆ ಆದ್ಯತೆ ನೀಡುವ ದೃಷ್ಟಿಯಿಂದ ವಿನೋದ ಅಸೂಟಿ ಅವರಿಗೆ ಟಿಕೆಟ್‌ ನೀಡಿದೆ. ಎಲ್ಲರೂ ಕೂಡಿಕೊಂಡು ಕಾಂಗ್ರೆಸ್‌ ಜಯ ಗಳಿಸಲು ಶ್ರಮಿಸೋಣ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next