Advertisement

ಮತ್ತೆ ಬಂತು ಗಡ್ಡಪ್ಪ ಗ್ಯಾಂಗ್‌

10:20 AM Feb 15, 2020 | sudhir |

“ತಿಥಿ’ ಚಿತ್ರದ ಮೂಲಕ ಪ್ರೇಕ್ಷಕರಿಗೆ ಪರಿಚಯವಾಗಿದ್ದ ಗಡ್ಡಪ್ಪ, ಸೆಂಚುರಿ ಗೌಡ, ಅಭಿಷೇಕ್‌ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ “ಗಡ್ಡಪ್ಪ ಸರ್ಕಲ್‌’ ಚಿತ್ರ ಈ ವಾರ ತೆರೆಗೆ ಬರುತ್ತಿದೆ. ಇಲ್ಲಿಯವರೆಗೆ ಹಳ್ಳಿಯ ಸೊಗಡಿನ ಕಾಮಿಡಿ ಪಾತ್ರಗಳಲ್ಲಿ ಮಿಂಚಿದ್ದ ಗಡ್ಡಪ್ಪ, ಸೆಂಚುರಿ ಗೌಡ ಈ ಚಿತ್ರದಲ್ಲಿ ಡಾನ್‌ ಪಾತ್ರಗಳಲ್ಲಿ ಔಟ್‌ ಆ್ಯಂಡ್‌ ಔಟ್‌ ಸ್ಟೈಲಿಶ್‌ ಲುಕ್‌ನಲ್ಲಿ ತೆರೆಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಸುಕನ್ಯಾ, ತುಳಸೀ ರಾಮ್‌, ವಿಶ್ವಾಸ್‌, ಯೋಗಿ, ರಾಮ್‌ ಮೊದಲಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಕಾಮಿಡಿ ಕಥಾಹಂದರ ಹೊಂದಿರುವ “ಗಡ್ಡಪ್ಪ ಸರ್ಕಲ್‌’ ಚಿತ್ರವನ್ನು “ಶ್ರೀ ಶ್ರಿನಿವಾಸ ಸಿನಿಮಾಸ್‌’ ಬ್ಯಾನರ್‌ನಲ್ಲಿ ತುಳಸೀ ರಾಮ್‌ ಬಂಡವಾಳ ಹೂಡಿ ನಿರ್ಮಿಸಿದ್ದಾರೆ. ಚಿತ್ರಕ್ಕೆ ಬಿ.ಆರ್‌ ಕೇಶವ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ “ಗಡ್ಡಪ್ಪ ಸರ್ಕಲ್‌’ ಚಿತ್ರದ ಹಾಡುಗಳು, ಟ್ರೇಲರ್‌ಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಥಿಯೇಟರ್‌ನಲ್ಲಿ ಗಡ್ಡಪ್ಪ ಆ್ಯಂಡ್‌ ಗ್ಯಾಂಗ್‌ನ ಕಮಾಲ್‌ ಹೇಗಿರಲಿದೆ ಅನ್ನೋ ಕುತೂಹಲಕ್ಕೆ ಈ ವಾರ ಉತ್ತರ ಸಿಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next