Advertisement

ಹದಿಹರೆಯದವರಲ್ಲಿ ದೈಹಿಕ ಬದಲಾವಣೆ ಸಹಜ

03:06 PM Oct 14, 2021 | Team Udayavani |

ಗದಗ: ವಿದ್ಯಾರ್ಥಿಗಳಲ್ಲಿ ಯಾವುದೇ ರೀತಿಯಮಾನಸಿಕ ಸಮಸ್ಯೆಗಳಿದ್ದರೆ ಮಾನಸಿಕ ಆರೋಗ್ಯಅಧಿ ಕಾರಿಗಳನ್ನು ಭೇಟಿಯಾಗಿ ಪರಿಹಾರ ಕಂಡುಕೊಳ್ಳಬಹುದು. ಹದಿಹರೆಯದವರಲ್ಲಿ ದೈಹಿಕ ಬದಲಾವಣೆಗಳು ಆಗುತ್ತವೆ. ಆದಕಾರಣಸಂಕುಚಿತಗೊಳ್ಳದೇ ನಿರ್ಭಯವಾಗಿ ವೈದ್ಯಾಧಿ ಕಾರಿಗಳನ್ನು ಭೇಟಿ ಮಾಡಿ ಸಮಸ್ಯೆಬಗೆಹರಿಸಿಕೊಳ್ಳಬೇಕು ಎಂದು ಡಿಎಚ್‌ಒ ಡಾ|ಸತೀಶಬಸರೀಗಿಡದ ಹೇಳಿದರು.

Advertisement

ಜಿಲ್ಲಾ ಆಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತುಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕಆರೋಗ್ಯ ಕಾರ್ಯಕ್ರಮ ವಿಭಾಗ, ವೈದ್ಯಕೀಯವಿಜ್ಞಾನಗಳ ಸಂಸ್ಥೆಯ ಮಾನಸಿಕ ಆರೋಗ್ಯ ವಿಭಾಗ,ಜಿಲ್ಲಾ ಕಾನೂನು ಸೇವೆಗಳ ಪ್ರಾಧಿ ಕಾರದಿಂದನಗರದ ಕೆಎಲ್‌ಇ ಸಂಸ್ಥೆಯ ಜ|ತೋಂಟದಾರ್ಯಮಹಾವಿದ್ಯಾಲಯದಲ್ಲಿ ಬುಧವಾರ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಿಲ್ಲಾ ಆಸ್ಪತ್ರೆ, ತಾಲೂಕು ಆಸ್ಪತ್ರೆ ಹಾಗೂ ಪ್ರಾಥಮಿಕಆರೋಗ್ಯ ಕೇಂದ್ರಗಳಲ್ಲಿ ಹದಿ-ಹರೆಯದವರಿಗೆ ಪ್ರತಿಸೋಮವಾರ, ಗುರುವಾರ ಚಿಕಿತ್ಸೆ ನೀಡುತ್ತಾರೆ.ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕುರಿತುವಿದ್ಯಾರ್ಥಿಗಳು ಕಾರ್ಯಕ್ರಮದ ಸದುಪಯೋಗಪಡೆದುಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾ ಧಿಕಾರ ಸದಸ್ಯಕಾರ್ಯದರ್ಶಿ ಎಸ್‌.ಜಿ. ಸಲಗರೆ ಮಾತನಾಡಿ,ವಿದ್ಯಾರ್ಥಿಗಳು ಕೇವಲ ಅಂಕ ಗಳಿಸಲುಸೀಮಿತರಾಗದೇ, ಜ್ಞಾನಾರ್ಜನೆ ಹೆಚ್ಚಿಸಿಕೊಳ್ಳಬೇಕು.

ಮಾನಸಿಕ ತೊಂದರೆಗಳನ್ನು ಎದುರಿಸುತ್ತಿರುವವಿದ್ಯಾರ್ಥಿಗಳು ಮನೋವೈದ್ಯರನ್ನು ಸಂಪರ್ಕಿಸಬೇಕುಎಂದು ಸಲಹೆ ನೀಡಿದರು.ಮನೋವೈದ್ಯ ಡಾ|ತಾರಾಚಂದ ನಾಯ್ಕಮಾತನಾಡಿ, ವಿದ್ಯಾರ್ಥಿಗಳಿಗೆ ಮೊಬೈಲ್‌, ಲ್ಯಾಪ್‌ಟಾಪ್‌, ಕಂಪ್ಯೂಟರ್‌ನಿಂದ ಒಳ್ಳೆಯ ಜ್ಞಾನಪಡೆದುಕೊಳ್ಳುವುದಕ್ಕೆ ಅವಕಾಶ ಇರುತ್ತದೆ. ಅದರಉಪಯೋಗ ಪಡೆದುಕೊಳ್ಳಲು ಹೇಳಿದರು.ಮನೋವೈದ್ಯ ಡಾ|ಸೋಮಶೇಖರ ಬಿಜ್ಜಳಅವರು ಮಾನಸಿಕ ತೊಂದರೆಗಳ ಲಕ್ಷಣಗಳು ಹಾಗೂನಿವಾರಣೆ ಕುರಿತು ಉಪನ್ಯಾಸ ನೀಡಿದರು.ಜಗದ್ಗುರು ತೋಂಟದಾರ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಪಿ.ಜಿ.ಪಾಟೀಲ್‌ಅಧ್ಯಕ್ಷತೆ ವಹಿಸಿದ್ದರು.

Advertisement

ಜಿಲ್ಲಾ ಮಾನಸಿಕ ಕಾರ್ಯಕ್ರಮ ಅ ಧಿಕಾರಿಡಾ|ರಾಜೇಂದ್ರ ಬಸರೀಗಿಡದ, ಜಿಲ್ಲಾ ಆರೋಗ್ಯಶಿಕ್ಷಣಾಧಿ ಕಾರಿ ರೂಪಸೇನ ಸಿ.ಚವ್ಹಾಣ,ಉಪಜಿಲ್ಲಾ ಆರೋಗ್ಯ ಶಿಕ್ಷಣಾ ಧಿಕಾರಿ ಉಮೇಶಕರಮುಡಿ, ಗೀತಾ ಕಾಂಬಳೆ, ಶ್ರೀಧರ ಎಂ.ಸಿ.,ವಿನಾಯಕ ಕಾಳೆ, ನಾಗರಾಜ ಜೋಗೀನ್‌,ವಿನಾಯಕ ವಾಗಮೋರೆ, ಶೋಭಾ ವಡ್ಡರಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next