Advertisement

ಜನರ ಮನೆ ಬಾಗಿಲಿಗೇ ಜಿಲ್ಲಾಡಳಿತ

03:00 PM Oct 14, 2021 | Team Udayavani |

ಗದಗ: “ಜನರ ಮನೆ ಬಾಗಿಲಿಗೇ ಜಿಲ್ಲಾಡಳಿತ’ ಘೋಷವಾಕ್ಯ ದೊಂದಿಗೆ ಅ.16ರಂದು ತಾಲೂಕಿನ ಆಯ್ದ ಗ್ರಾಮಗಳಲ್ಲಿಜಿಲ್ಲಾ ಧಿಕಾರಿಗಳು ಹಾಗೂ ತಹಶೀಲ್ದಾರ್‌ರು ಗ್ರಾಮ ವಾಸ್ತವ್ಯ ನಡೆಸುವರು ಎಂದು ಜಿಲ್ಲಾ ಧಿಕಾರಿ ಎಂ.ಸುಂದರೇಶ ಬಾಬು ತಿಳಿಸಿದ್ದಾರೆ.

Advertisement

ಈ ಕುರಿತು ಪ್ರಕಟಣೆ ನೀಡಿರುವ ಜಿಲ್ಲಾಧಿಕಾರಿಗಳು, ಸರ್ಕಾರದ ಆದೇಶದಂತೆಪ್ರತಿ ತಿಂಗಳ ಮೂರನೇ ಶನಿವಾರ ಜಿಲ್ಲಾಧಿಕಾರಿಗಳು ಮತ್ತು ಆಯಾ ತಾಲೂಕುಗಳ ತಹಶೀಲ್ದಾರ್‌ರು ತಾಲೂಕಿನ ಆಯ್ದಗ್ರಾಮಗಳಲ್ಲಿ ವಾಸ್ತವ್ಯ ಮಾಡುವರು. ಅ.16ರಂದು ಅಂದು ಬೆಳಗ್ಗೆ 10 ರಿಂದ ಗ್ರಾಮವಾಸ್ತವ್ಯ ಆರಂಭವಾಗಲಿದ್ದು, ಸಭೆಯಲ್ಲಿ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದಅ ಧಿಕಾರಿಗಳು ಹಾಜರಿರುವರು ಎಂದುತಿಳಿಸಿದ್ದಾರೆ.

ಗದಗ ತಾಲೂಕಿನ ತಿಮ್ಮಾಪುರಗ್ರಾಮದಲ್ಲಿ ತಹಶೀಲ್ದಾರ್‌ ಕಿಶನ್‌ಕಲಾಲ, ರೋಣ ತಾಲೂಕಿನ ತಳ್ಳಿಹಾಳಗ್ರಾಮದಲ್ಲಿ ತಹಶೀಲ್ದಾರ್‌ಜಕ್ಕನಗೌಡರ, ಮುಂಡರಗಿತಾಲೂಕಿನ ಹಳ್ಳಿಕೇರಿ ಗ್ರಾಮದಲ್ಲಿತಹಶೀಲ್ದಾರ್‌ ಆಶಪ್ಪ ಪೂಜಾರ,ನರಗುಂದ ತಾಲೂಕಿನ ಭೈರನಹಟ್ಟಿಗ್ರಾಮದಲ್ಲಿ ತಹಶೀಲ್ದಾರ್‌ಎ.ಡಿ.ಅಮರವಾಡಗಿ, ಲಕ್ಷ್ಮೇಶ್ವರ ತಾಲೂಕಿನ ಅಮರಾಪುರಗ್ರಾಮದಲ್ಲಿ ತಹಶೀಲ್ದಾರ್‌ ಭ್ರಮರಾಂಬಗುಬ್ಬಿಶೆಟ್ಟರ ಹಾಗೂ ಗಜೇಂದ್ರಗಡ ತಾಲೂಕಿನಗುಳಗುಳಿ ಗ್ರಾಮದಲ್ಲಿ ತಹಶೀಲ್ದಾರ್‌ ಆರ್‌.ಡಿ.ಕೆಂಗೇರಿ ಅವರು ಗ್ರಾಮ ವಾಸ್ತವ್ಯ ನಡೆಸಿ,ಸಾರ್ವಜನಿಕರಿಂದ ಕಂದಾಯ ವಿಷಯಕ್ಕೆಸಂಬಂ ಧಿಸಿದಂತೆ ಅಹವಾಲುಗಳನ್ನು ಪಡೆದುಪರಿಹಾರಿಸುವರು ಎಂದಿದ್ದಾರೆ.

ತಹಶೀಲ್ದಾರ್‌ರು ವಾಸ್ತವ್ಯ ಹೂಡಲುನಿಗದಿಪಡಿಸಲಾದ ಗ್ರಾಮಗಳಿಗೆ ತೆರಳಿಗ್ರಾಮದ ಪಹಣಿಯಲ್ಲಿನ ದೋಷಗಳನ್ನುಸರಿಪಡಿಸುವುದು. ಪಾವತಿ ಹೊಂದಿದಖಾತೆದಾರರ ಹೆಸರನ್ನು ಪಹಣಿಯ ಕಾಲಂ9ರಿಂದ ತೆಗೆದು ನೈಜ ವಾರಸುದಾರರಹೆಸರಿಗೆ ಖಾತೆ ಮಾಡಲು ಕ್ರಮವಹಿಸುವುದು. ಗ್ರಾಮದ ಎಲ್ಲಅರ್ಹ ವ್ಯಕ್ತಿಗಳಿಗೆ ಪಿಂಚಣಿ ಸೌಲಭ್ಯದೊರೆಯುತ್ತಿರುವ ಬಗ್ಗೆ ಪರಿಶೀಲಿಸಿಕ್ರಮ ವಹಿಸುವರು. ಬಿಟ್ಟುಹೋದಂತಹ ಅರ್ಹ ಪ್ರಕರಣಗಳಿಗೆಸ್ಥಳದಲ್ಲಿಯೇ ಆದೇಶ ನೀಡಬೇಕುಎಂದು ಸೂಚಿಸಿದ್ದಾರೆ.

ಗ್ರಾಮದಲ್ಲಿ ಸ್ಮಶಾನ ಲಭ್ಯತೆ ಬಗ್ಗೆಪರಿಶೀಲಿಸುವುದು ಮತ್ತು ಸ್ಮಶಾನವಿಲ್ಲದಿದ್ದಲ್ಲಿಸರ್ಕಾರದ ಆದೇಶದಂತೆ ಕ್ರಮ ವಹಿಸುವುದು.ಗ್ರಾಮದಲ್ಲಿ ಆಶ್ರಯ ಯೋಜನೆಗೆ ಅವಶ್ಯಕತೆಇದ್ದಲ್ಲಿ ಲಭ್ಯ ಜಮೀನು ಕಾಯ್ದಿರಿಸುವುದು.ಸರ್ಕಾರ ಜಮೀನು ಅತಿಕ್ರಮ ಒತ್ತುವರಿತೆರವುಗೊಳಿಸುವುದು.

Advertisement

ಆಧಾರ್‌ ಕಾರ್ಡಿನಅನುಕೂಲತೆ ಬಗ್ಗೆ ಸಾರ್ವಜನಿಕರಲ್ಲಿಅರಿವು ಮೂಡಿಸುವುದು. ಸರ್ಕಾರದಿಂದಸಾರ್ವಜನಿಕರಿಗೆ ದೊರೆಯುಬಹುದಾದಸವಲತ್ತುಗಳ ಬಗ್ಗೆ ಅರಿವು ಮೂಡಿಸುವುದು.ಮತದಾರರ ಪಟ್ಟಿ ಪರಿಷ್ಕರಣೆ, ಹದ್ದುಬಸ್ತು,ಪೋಡಿ ಮುಕ್ತ ಗ್ರಾಮ, ದರಖಾಸ್ತುಪೋಡಿ, ಗ್ರಾಮದಲ್ಲಿ ಎಸ್‌ಸಿ, ಎಸ್‌ಟಿ,ಬಿಸಿಎಂ ವಸತಿ ನಿಲಯಗಳಿದ್ದಲ್ಲಿ ಭೇಟಿನೀಡಿ, ಸುಸ್ಥಿತಿಯಲ್ಲಿರುವ ಬಗ್ಗೆ ಕ್ರಮವಹಿಸಬೇಕೆಂದು ತಿಳಿಸಿದ್ದಾರೆ.

ಶಾಲೆ ಹಾಗೂ ಅಂಗನವಾಡಿಗಳಿಗೆ ಭೇಟಿನೀಡಿ ಕಲಿಕಾ ಕ್ರಮದ ಬಗ್ಗೆ ಪರಿಶೀಲಿಸುವುದು.ಎಲ್ಲ ಅರ್ಹ ಬಡ ಕುಟುಂಬಗಳಿಗೆಬಿಪಿಎಲ್‌ ಕಾರ್ಡ್‌ ದೊರೆತಿರುವ ಬಗ್ಗೆಖಾತ್ರಿಪಡಿಸಿಕೊಳ್ಳುವುದು.

ಗುಡಿಸಲುರಹಿತ ವಾಸದ ಮನೆಗಳ ನಿರ್ಮಾಣಕ್ಕೆಇರುವ ಸೌಲಭ್ಯಗಳನ್ನು ಜಾರಿ ಮಾಡಿ,ಗುಡಿಸಲು ಮುಕ್ತ ಗ್ರಾಮಗಳಾಗಿಸುವುದು.ಈ ಎಲ್ಲ ಕ್ರಮಗಳನ್ನು ವಹಿಸಲು ಉನ್ನತಅ ಧಿಕಾರಿಗಳು ಖುದ್ದಾಗಿ ಸ್ಪಂದಿಸಲು,ಸಾಧ್ಯವಾದಷ್ಟು ಸ್ಥಳದಲ್ಲಿಯೇ ಸಮಸ್ಯೆಪರಿಹರಿಸಲು ಅನುಕೂಲವಾಗುವಂತೆಸರ್ಕಾರ ಗ್ರಾಮ ವಾಸ್ತವ್ಯದಲ್ಲಿಅನುಸರಿಸಬೇಕಾದ ನಿಯಮಗಳ ಕುರಿತುಮಾರ್ಗಸೂಚಿ ನೀಡಿದೆ ಎಂದು ಜಿಲ್ಲಾ ಧಿಕಾರಿಎಂ.ಸುಂದರೇಶ ಬಾಬು ಪ್ರಕಟಣೆಯಲ್ಲಿತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next