Advertisement
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ. 23 ರಂದು ಸಂಜೆ 5.30ಕ್ಕೆ ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ನೂತನ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಗದಗ ಉತ್ಸವ ಉದ್ಘಾಟಿಸುವರು. ಜ| ತೋಂಟದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ಹಾಗೂ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಎಂ.ಬಿ. ಸುರಕೋಡ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.
Related Articles
Advertisement
ಶ್ರೇಷ್ಠ ಉದ್ಯಮಿ, ವರ್ತಕ ಪ್ರಶಸ್ತಿ: ಆ. 25ರಂದು ಸಂಜೆ 5.30ಕ್ಕೆ ಶ್ರೇಷ್ಠ ಉದ್ಯಮಿ, ಶ್ರೇಷ್ಠ ವರ್ತಕ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಸ್ಥಳೀಯ ಉದ್ಯಮಿ ಅಲಿರಝಾ ಎಂ. ಭಾವನಗರಿ, ಗಜೇಂದ್ರಗಡದ ಸ್ಟೋನ್ ಕ್ರಷರ್ ಉದ್ಯಮಿ ಹಾಗೂ ಶಾಸಕ ಕಳಕಪ್ಪ ಬಂಡಿ , ಅವರಿಗೆ ಶ್ರೇಷ್ಠ ಉದ್ಯಮಿ, ಶರಣು ವಿರೂಪಾಕ್ಷಪ್ಪ ಗದಗ (ಗದಗ), ಬಾಬುಲಾಲ ಜೈನ್ (ಮುಂಡರಗಿ), ವಿಜಯಕುಮಾರ ಮಾದಿನೂರ, (ನರಗುಂದ), ಶಿವಪ್ರಕಾಶ ಮಹಾಂತಶೆಟ್ಟರ (ಲಕ್ಷೆ ್ಮೕಶ್ವರ) ಅವರಿಗೆ ಶ್ರೇಷ್ಠ ವರ್ತಕ ಪ್ರಶಸ್ತಿಗಳನ್ನು ಕೇಂದ್ರದ ಸಂಸದೀಯ ವ್ಯವಹಾರ ಖಾತೆ ಸಚಿವ ಪ್ರಲಾØದ ಜೋಶಿ, ಉದ್ಯಮಿ ಡಾ| ವಿಜಯ ಸಂಕೇಶ್ವರ, ಬೆಂಗಳೂರಿನ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಅಧ್ಯಕ್ಷ ಸಿ.ಆರ್. ಜನಾರ್ದನ ಪ್ರದಾನ ಮಾಡಲಿದ್ದಾರೆ.
ಆ. 27 ರಂದು ಸಂಜೆ 5.30ಕ್ಕೆ ಶ್ರೇಷ್ಠ ಮಳಿಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಎಂ.ಬಿ. ಸುರಕೋಡ ಅಧ್ಯಕ್ಷತೆ ವಹಿಸುವರು. ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಾಥ ಜೋಶಿ, ಜಿ.ಪಂ. ಸಿಇಒ ಮಂಜುನಾಥ ಚವ್ಹಾಣ, ನಬಾರ್ಡ್‌ನ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ರಾಮನ್ ಜಗದೀಶ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ಧಲಿಂಗೇಶ ರಂಗಣ್ಣವರ ಮುಖ್ಯ ಅತಿಥಿಗಳಾಗಿ ಆಗಮಿಸುವರು ಎಂದು ತಿಳಿಸಿದರು.
ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಎಂ.ಬಿ. ಸುರಕೋಡ, ಉಪಾಧ್ಯಕ್ಷ ಅರವಿಂದ ಪಟೇಲ, ಕೈಗಾರಿಕಾ ವಸ್ತು ಪ್ರದರ್ಶನ ಸಮಿತಿ ಕೋ-ಚೇರಮನ್ ಜಯದೇವ ಮೆಣಸಗಿ, ಪ್ರಚಾರ ಸಮಿತಿ ಅಧ್ಯಕ್ಷ ಎಚ್.ವಿ. ಶಾನುಭೋಗರ, ಮಧುಸೂದನ ಪುಣೇಕರ ಮಸೇರಿ ಉಪಸ್ಥಿತರಿದ್ದರು.
ನೆರೆ ಸಂತ್ರಸ್ತರಿಗೆ ಪರಿಹಾರಪ್ರವಾಹದ ನಿಮಿತ್ತ ಕೈಗಾರಿಕಾ ವಸ್ತು ಪ್ರದರ್ಶನ ಹಾಗೂ ಮಾರಾಟದ ಗದಗ ಉತ್ಸವದಲ್ಲಿ ಈ ಬಾರಿ ಸಾಂಸ್ಕೃತಿಕ ಕಾರ್ಯಕ್ರಮ ಮೊಟಕುಗೊಳಿಸಲಾಗಿದೆ. ಜೊತೆಗೆ ಉತ್ಸವದಿಂದ ಬಂದ ಲಾಭದಲ್ಲಿ ಕನಿಷ್ಠ ಒಂದು ಲಕ್ಷ ರೂ. ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲು ತೀರ್ಮಾನಿಸಲಾಗಿದೆ.
•ಆನಂದ ಎಲ್. ಪೊತ್ನೀಸ್,
ಚೇರಮನ್, ಕೈಗಾರಿಕಾ ವಸ್ತು ಪ್ರದರ್ಶನ ಸಮಿತಿ