Advertisement

Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ

11:08 PM Nov 07, 2024 | Team Udayavani |

ಗದಗ: ಸೈಬರ್ ವಂಚಕರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ “ಬಿ.ಎಸ್. ನೇಮಗೌಡ ಐಪಿಎಸ್” ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ವ್ಯಕ್ತಿಯೊಬ್ಬರಿಗೆ 25 ಸಾವಿರ ರೂ. ವಂಚನೆ ಮಾಡಿರುವ ಕುರಿತು ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ತಾಲೂಕಿನ ಬಿಂಕದಕಟ್ಟಿ ಗ್ರಾಮದ ಮಹದೇವ ಗೌಡ ವಾಸುಗೌಡ ಕೊಳ್ಳಿ ಎಂಬವರೇ ವಂಚನೆಗೊಳಗಾದವರು, ಮಂಗಳವಾರ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸೈಬರ್ ವಂಚಕರು “ಬಿ.ಎಸ್. ನೇಮಗೌಡ ಐಪಿಎಸ್” ಎಂಬ ನಕಲಿ ಫೇಸ್‌ಬುಕ್ ಐಡಿ ತೆರೆದು ಎಸ್‌ಪಿ ಫೋಟೋ ಪ್ರೊಫೈಲ್ ಆಗಿ ಬಳಸಿಕೊಂಡು ಮಹದೇವಗೌಡ ವಾಸುಗೌಡ ಕೊಳ್ಳಿಯವರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಾರೆ.

ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸುತ್ತಿದ್ದಂತೆ ಮೆಸೆಂಜರ್‌ನಲ್ಲಿ 6000154286 ಸಿಆರ್‌ಪಿಎಫ್ ಆಫೀಸರ್ ಸಂತೋಷಕುಮಾರ ಅವರಿಗೆ ವರ್ಗಾವಣೆಯಾಗಿದೆ. ಅವರ ಮನೆಯ ಸಾಮಗ್ರಿಗಳು ಕಡಿಮೆ ಬೆಲೆಗೆ ಮಾರಾಟಕ್ಕಿವೆ ಎಂದು ಮೆಸೇಜ್ ಮಾಡಿದ್ದಾರೆ. ಮೊಬೈಲ್ ನಂಬರ್ 8099285143 ಗೆ ವಾಟ್ಸ್ಯಾಪ್ ಡಿಪಿಯಾಗಿ ಎಸ್‌ಪಿ ಬಿ.ಎಸ್. ನೇಮಗೌಡ ಫೊಟೊ ಇಟ್ಟುಕೊಂಡು ವಾಟ್ಸಾಪ್ ಮೆಸೇಜ್‌ ಕೂಡ ಮಾಡಿದ್ದಾರೆ. ಅಲ್ಲದೇ ಅಡ್ವಾನ್ಸ್ ಆಗಿ 25 ಸಾವಿರ ರೂ. ಹಣ ಹಾಕಿಸಿಕೊಂಡು ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಕುರಿತು ತನಿಖೆ ಮುಂದುವರಿದಿದೆ.

ಸಾರ್ವಜನಿಕರು ಮೋಸ,  ವಂಚನೆಗೆ ಒಳಗಾಗದಿರಿ: ಎಸ್‌ಪಿ ನೇಮಗೌಡ ವಿನಂತಿ
ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಸೈಬರ್ ವಂಚಕರು ಗದಗ ಎಸ್ಪಿ ಹೆಸರಿನಲ್ಲಿ ಫೇಕ್ ಫೇಸ್‌ಬುಕ್ ಐಡಿ ಕ್ರಿಯೆಟ್ ಮಾಡಿ ಮತು ಮೆಸೆಂಜ್‌ರ  ಹಾಗೂ ವಾಟ್ಸಾಪ್ ಖಾತೆ ತೆರೆದು ಅವುಗಳಲ್ಲಿ ಗದಗ ಜಿಲ್ಲೆಯ ಎಸ್‌ಪಿ ರವರ ಫೋಟೋವನ್ನು ಡಿಪಿ ಹಾಗೂ  ಪ್ರೊಫೈಲ್ ಫೋಟೋ ಆಗಿ ಇಟ್ಟುಕೊಂಡು ಆ ಮೂಲಕ ಬೇರೆ ಬೇರೆ ಕಾರಣಗಳ ಹೇಳಿ ಸಾರ್ವಜನಿಕರಿಗೆ ವಂಚನೆ ಮಾಡುವ ಪ್ರಯತ್ನದಲ್ಲಿದ್ದು, ಕಾರಣ ಯಾವುದೇ ಸಾರ್ವಜನಿಕರು ಮೋಸ,  ವಂಚನೆಗೆ ಒಳಗಾಗಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next