Advertisement
ನಗರದ ಕೃಷಿ ಸಂಶೋಧನಾ ಕೇಂದ್ರದ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸರಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘ (ಮೇವಾ)ದ ಜಿಲ್ಲಾ ಘಟಕದ ವತಿಯಿಂದ ರವಿವಾರ ಹಮ್ಮಿಕೊಂಡಿದ್ದ ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
Related Articles
ಕಲಿಕೆ ಕವಲೊಡೆಯುತ್ತಿವೆ. ಪದವಿ ಶಿಕ್ಷಣದ ಬಳಿಕ ಉನ್ನತ ಶಿಕ್ಷಣಕ್ಕೆ ಮಾರ್ಗಗಳು ವೈದ್ಯಕೀಯ, ತಾಂತ್ರಿಕ, ಕಂಪ್ಯೂಟರ್ ವಿಜ್ಞಾನ ಅಲ್ಲದೇ, ಹಲವಾರು ವೈವಿಧ್ಯಮ ಕೋರ್ಸ್‌ಗಳು ಬಂದಿದ್ದು, ಬದಲಾದ ಸನ್ನಿವೇಶಕ್ಕೆ ನಮ್ಮ ಜೀವನ ಶೈಲಿಯನ್ನು ಬದಲಾಯಿಸುವುದು ಅನಿವಾರ್ಯ ಎಂದರು.
Advertisement
ಕರ್ನಾಟಕ ರಾಜ್ಯ ಸರಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘ ಮೇವಾ ಸಂಘಟನೆಯ ಅಬ್ದುಲ್‌ರಹೀಮ ಖಾಜಿ, ಸಲೀಂ ಅಹ್ಮದ ಹಂಚಿನಮನಿ, ಡಾ| ಪ್ಯಾರಅಲಿ ನೂರಾನಿ, ಅಬ್ದುಲ್ ರಜಾಕ ಡಂಕೇದ, ಮೋದಿನಸಾಬ ಬುಕ್ಕಿಟಗಾರ ಅವರು ಶಿಕ್ಷಣ, ಸಂಘಟನೆ, ಪ್ರತಿಭಾ ಪುರಸ್ಕಾರದ ಬಗ್ಗೆ ಮಾತನಾಡಿದರು.
ಸಮಾರಂಭದಲ್ಲಿ ಸುಮಾರು 40ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಮೇವಾ ಗದಗ ಜಿಲ್ಲಾ ಅಧ್ಯಕ್ಷ ಡಾ| ಸಿ.ಎಂ. ರಫೀ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಮೇಲೆ ಮೇವಾದ ರಾಜ್ಯ ಸಂಘಟನಾ ಕಾರ್ಯದರ್ಶಿ ನಿಯಾಜ್‌ಅಹ್ಮದ್ ಹಂಚಿನಮನಿ, ನುಮೇರ್ ನೂರಾನಿ, ರಿಜ್ವಾನ ಕೌಲಗೇರಿ, ಎಂ.ಜೆ. ನದಾಫ, ಶಬ್ಬೀರ ಮುಲ್ಲಾ, ಎಸ್.ಎಸ್. ಚೌಥಾಯಿ, ಮೆಹಬೂಬ ತಾಳಿಕೋಟಿ, ಸಿ.ಎಸ್. ನದಾಫ, ಆರ್.ಬಿ. ಖಾದಿರನವರ, ಎಂ.ಎಚ್. ಶಿರಹಟ್ಟಿ, ಹಮೀದುಲ್ಲಾ ಹುಯಿಲಗೋಳ ಸೇರಿದಂತೆ ಪಾಲಕರು-ಪೋಷಕರು ಇದ್ದರು.
ಡಬ್ಲ್ಯೂ .ಎಸ್. ಶಿರಹಟ್ಟಿ ಪ್ರಾರ್ಥಿಸಿದರು. ರಫೀಕ್ ಸವದತ್ತಿ ಸ್ವಾಗತಿಸಿದರು. ಸಿ.ಎಸ್. ನದಾಫ ಪ್ರಾಸ್ತಾವಿಕವಾಗಿ ಮಾತನಾಡಿದರು. ರಶೀದ್, ಫಜಲಅಹ್ಮದ್ ನಮಾಜಿ ನಿರೂಪಿಸಿ, ಎಂ.ಎ. ಬುಕ್ಕಿಟಗಾರ ವಂದಿಸಿದರು.