Advertisement

Gadag: ಹಾಲಕೆರೆಯ ಶ್ರೀಗುರು ಅನ್ನದಾನೇಶ್ವರ ಮಠದಲ್ಲಿ ಬೆಳ್ಳಿ ರಥೋತ್ಸವ

09:23 PM Aug 12, 2024 | Team Udayavani |

ಗದಗ: ಗಜೇಂದ್ರಗಡ ತಾಲೂಕಿನ ಹಾಲಕೆರೆಯ ಶ್ರೀಗುರು ಅನ್ನದಾನ ಸ್ವಾಮೀಜಿಗಳ 47ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಮಹಿಳೆಯರು ಬೆಳ್ಳಿ ರಥವನ್ನು ಸಡಗರ, ಸಂಭ್ರಮದಿಂದ ಎಳೆದರು.

Advertisement

ಸೋಮವಾರ ಸಂಜೆ ಜರುಗಿದ ಬೆಳ್ಳಿ ರಥೋತ್ಸವಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್  ಚಾಲನೆ ನೀಡಿದರು. ಮಹಿಳೆಯರು ಆರತಿ, ನಂದಿಕೋಲ, ಕುಂಭ ಮೇಳದೊಂದಿಗೆ ಭಾಗವಹಿಸಿದ್ದರು. ಡೊಳ್ಳು ಕುಣಿತ, ಭಜನೆಯಲ್ಲಿ ಮಹಿಳೆಯರು ಭಾಗಿಯಾಗಿ ರಥೋತ್ಸವದ ಮೆರುಗು ಹೆಚ್ಚಿಸಿದರು. ಸಹಸ್ರಾರು ಮಹಿಳೆಯರು ಬೆಳ್ಳಿ ರಥ ಎಳೆದು ಭಕ್ತಿಯ ಪರಾಕಾಷ್ಠೆ ಮೆರೆದರೆ, ಭಕ್ತರು ಘೋಷಣೆಗಳ ಕೂಗಿದರು.

ಈ ವೇಳೆ ಹಾಲಕೆರೆ ಸಂಸ್ಥಾನ ಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ, ಘನಮಠೇಶ್ವರ ಮಠದ ಗುರುಬಸವ ಸ್ವಾಮೀಜಿ, ನಿಲಗುಂದ ಪ್ರಭುಲಿಂಗ ಸ್ವಾಮೀಜಿ,  ನಿಡಗುಂದಿಕೊಪ್ಪ ಶಾಖಾ ಶಿವಯೋಗ ಮಂದಿರದ ಅಭಿನವ ಚನ್ನಬಸವ ಸ್ವಾಮೀಜಿ, ಕರೆಗುಡ್ಡ ಮಹಾಂತೇಶ್ವರ ಮಠದ ಮಹಾಂತಲಿಂಗ ಶಿವಾಚಾರ್ಯರು, ಖೇಳಗಿಯ ಶಿವಲಿಂಗೇಶ್ವರ ಸಂಸ್ಥಾನ ಮಠದ ಶಿವಲಿಂಗ ಸ್ವಾಮೀಜಿ, ಗುಳೇದಗುಡ್ಡ ಮರಡಿಮಠದ ಅಭಿನವ ಕಾಡಸಿದ್ದೇಶ್ವರ ಶಿವಾಚಾರ್ಯರು, ವಳಬಳ್ಳಾರಿ ಸುವರ್ಣಗಿರಿ ವಿರಕ್ತಮಠದ ಸದಾಶಿವ ದೇವರು, ಕುರಗೋಡ ನಾಗಲಾಪೂರ ವಿರಕ್ತಮಠದ ಪರ್ವತ ದೇವರು. ಸೋಮಸಮುದ್ರ ವಿರಕ್ತಮಠದ ಸಿದ್ಧಲಿಂಗ ದೇವರು, ಶ್ರೀಧರಗಡ್ಡೆ ವಿರಕ್ತಮಠದ ಮರಿಕೊಟ್ಟೂರ ದೇವರು ನೇತೃತ್ವ ವಹಿಸಿದ್ದರು.

ಅಕ್ಕನಬಳಗದ ಅಧ್ಯಕ್ಷೆ ಅನ್ನಪೂರ್ಣ ಪಾಟೀಲ, ಪಿಎಸ್‌ಐ ಐಶ್ವರ್ಯ ನಾಗರಾಳ, ಕೆಸಿಸಿ ಬ್ಯಾಂಕ್ ವ್ಯವಸ್ಥಾಪಕಿ ಕದರಿ ಶ್ರೀರೀಕಾ, ವೀಣಾ ಪಾಟೀಲ ಸೇರಿದಂತೆ ನರೇಗಲ್ಲ ಜಕ್ಕಲಿ, ಅಬ್ಬಿಗೇರಿ, ಮಾರನಬಸರಿ, ನಿಡಗುಂದಿಕೊಪ್ಪ, ನಿಡಗುಂದಿ, ಗದಗ ಧಾರವಾಡ, ಬಳ್ಳಾರಿ, ರಾಯಚೂರ, ಬಾಗಲಕೋಟ, ಸೇರಿ ಸುತ್ತಮುತ್ತಲಿನ ಜಿಲ್ಲೆಯ ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next