Advertisement

Gadag: ಸಮಯ ವ್ಯರ್ಥ ಮಾಡದೇ ಚೆನ್ನಾಗಿ ಓದಿ: ಹೊನ್ನಾಳಿ

05:37 PM Nov 08, 2023 | Team Udayavani |

ಗದಗ: ವಿದ್ಯಾರ್ಥಿಗಳು ಅನವಶ್ಯಕವಾಗಿ ಸಮಯ ವ್ಯರ್ಥ ಮಾಡದೆ ಸೃಜನಾತ್ಮಕ ಹಾಗೂ ಕ್ರಿಯಾತ್ಮಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಹೆತ್ತವರಿಗೆ ಮತ್ತು ಓದಿದ ಸಂಸ್ಥೆಗೆ ಕೀರ್ತಿ ತರಬೇಕೆಂದು ರಾಣಿಬೆನ್ನೂರಿನ ಶ್ರೀ ತರಳಬಾಳು ಜಗದ್ಗುರು ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ| ಶಿವಕುಮಾರ ಹೊನ್ನಾಳಿ ಹೇಳಿದರು.

Advertisement

ನಗರದ ತೋಂಟದಾರ್ಯ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ನಡೆದ ಸೈನ್ಸ್‌ ಫೋರಮ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಕಷ್ಟಪಟ್ಟು ಓದದೇ, ಇಷ್ಟಪಟ್ಟು ಓದಿ ಪಡೆದ ಶಿಕ್ಷಣವನ್ನು ಜ್ಞಾನವನ್ನಾಗಿಯೂ, ಜ್ಞಾನವನ್ನು
ಕೌಶಲ್ಯವನ್ನಾಗಿಯೂ ಪರಿವರ್ತಿಸಿಕೊಳ್ಳಬೇಕು ಎಂದು ಹೇಳಿದರು.

ವಿದ್ಯಾರ್ಥಿಗಳು ಸಿಕ್ಕ ಅವಕಾಶಗಳನ್ನು ಸದುಪಯೋಗ ಮಾಡಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಪದವಿ ಮುಗಿದ ಮೇಲೆ ನಿಮಗೆ ಬರುವ ಮೊದಲ ಸಂಬಳದಲ್ಲಿ ಒಂದು ಒಳ್ಳೆಯ ಪುಸ್ತಕ ತೆಗೆದುಕೊಳ್ಳುವುದರ ಜೊತೆಗೆ ನಿಮ್ಮ ತಾಯಿಗೆ ಒಂದು ಉತ್ತಮ ಗಿಫ್ಟ್‌ ಕೊಡಿ. ಅದರೊಂದಿಗೆ ನಿಮ್ಮ ಆತ್ಮ ಬಲ ಹೆಚ್ಚಿಸಿಕೊಳ್ಳಿ. ಯಶಸ್ಸು ನಿಮ್ಮೊಟ್ಟಿಗೆ ಬರುತ್ತದೆ. ಒಂದು ಉತ್ತಮ ಪುಸ್ತಕ ಒಬ್ಬ ಗುರುವಿಗೆ ಸಮಾನ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶಪಾಲ ಡಾ| ಎಂ.ಎಂ. ಆವಟಿ, ಜೀವನದಲ್ಲಿ ಯಶಸ್ಸು ಸಾಧಿಸಲು ವಿದ್ಯಾರ್ಥಿಗಳು ಶ್ರಮ ಪಡಬೇಕು. ಶ್ರಮಕ್ಕೆ ಪ್ರತಿಫಲ ದೊರೆಯುತ್ತದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಉತ್ತಮ ಕೌಶಲ್ಯ ಮತ್ತು ಉತ್ತಮ ಬುದ್ಧಿಮತ್ತೆ ಹೊಂದಬೇಕಾಗಿದೆ ಎಂದು ಹೇಳಿದರು.

ವಿಜ್ಞಾನ ವಿಭಾಗದ ಮುಖ್ಯಸ್ಥ ಸುನೀಲ ಪಾಟೀಲ, ಸೈನ್ಸ್‌ ಫೋರಮ್‌ ಸಂಚಾಲಕ ಆನಂದ್‌ ಹಳ್ಳಿ, ಉಪ ಪ್ರಾಂಶುಪಾಲ ಡಾ| ಈರಣ್ಣ ಕೊರಚಗಾಂ, ಡಾ| ವಿ.ಟಿ ಮಾಗಳದ, ಡಾ| ಶಶಿಗೌಡ ಎಚ್‌, ಡಾ| ಮಧು ಕೆ.ಎನ್‌., ಡಾ| ಶ್ರೀಕಾಂತ ಕೆಂಗೂರಿ, ಕಾವ್ಯ ಅಬ್ಬಿಗೇರಿ, ವಿಜಯಲಕ್ಷ್ಮೀ, ಎ.ಎ. ಕುಂಬಾರ, ಶಂಭುಲಿಂಗಯ್ಯ ಹೀರೆಮಠ ಇದ್ದರು. ಸುಹಾಸ್‌ ಪಿಳ್ಳಿ ಸ್ವಾಗತಿಸಿ, ಮಾನ್ಯ ಶೆಟ್ಟಿ ನಿರೂಪಿಸಿ, ಸೌಮ್ಯ ಪಸೋಡಿ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next