Advertisement

Gadag: ವಿಷಪೂರಿತ ಆಹಾರ ಸೇವಿಸಿ 200ಕ್ಕೂ ಹೆಚ್ಚು ಕುರಿಗಳು ಸಾವು

10:10 PM Aug 27, 2023 | Team Udayavani |

ಗದಗ : ವಿಷಪೂರಿತ ಆಹಾರ ಸೇವಿಸಿ ಸುಮಾರು 200ಕ್ಕೂ ಹೆಚ್ಚು ಕುರಿಗಳ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಬೀಡನಾಳ ಗ್ರಾಮದಲ್ಲಿ ರವಿವಾರ ನಡೆದಿದೆ.

Advertisement

ಪರಶುರಾಮ ಕಂಬಳಿ, ಕೊಟ್ರಪ್ಪ ಸಣ್ಣಕಲ್ ಸೇರಿದಂತೆ 10 ಜನ ಮಾಲಕರ ಒಟ್ಟು 1,500 ಕುರಿಗಳಲ್ಲಿ 200ಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿವೆ.

10 ಜನರ ತಂಡ ಒಟ್ಟಾಗಿ ಕುರಿಗಳನ್ನು ಮೇಯಿಸುತ್ತಿದ್ದರು. ಕುರಿಗಳು ಮೆಕ್ಕೇಜೋಳ ಬೆಳೆದ ಹೊಲದಲ್ಲಿ ಕ್ರಿಮಿನಾಶಕ ಔಷಧ ಸಿಂಪಡಿಸಿದ ಬೆಳೆ ಸೇವಿಸಿರುವ ಶಂಕೆಯಿದ್ದು, ಏಕಾಏಕಿ ಕುರಿಗಳ ಸಾವು ಕಂಡು ಗುರಿಗಾಯಿಗಳು ಗಾಬರಿಗೊಂಡಿದ್ದಾರೆ.

200ಕ್ಕೂ ಅಧಿಕ ಕುರಿಗಳು ಸಾವು ಕಂಡು ಮಾಲಕರು ಕಣ್ಣಿರಿಡುತ್ತಿದ್ದಾರೆ. ಸ್ಥಳಕ್ಕೆ ಪಶು ವೈದ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next