Advertisement

ಗದಗ: ಸಂವಿಧಾನ ಧರ್ಮಗ್ರಂಥ ಎಂದವರು ಮೋದಿ- ಬೊಮ್ಮಾಯಿ

05:24 PM May 04, 2024 | Team Udayavani |

ಉದಯವಾಣಿ ಸಮಾಚಾರ
ಗದಗ: ಪ್ರಧಾನಿ ಮೋದಿ ಸಂವಿಧಾನವನ್ನು ಧರ್ಮಗ್ರಂಥ ಎಂದು ಹೇಳಿದ್ದಾರೆ. ಕಾಂಗ್ರೆಸ್‌ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಸಂವಿಧಾನ ಬದಲಾಯಿತ್ತಾರೆಂಬ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ನಗರದ ಬೆಟಗೇರಿ ಖೋಡೆ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಎಸ್ಸಿ ಮೋರ್ಚಾ ವತಿಯಿಂದ ನಡೆದ ಎಸ್ಸಿ ಸಮಾಜದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಅಂಬೇಡ್ಕರ್‌ ಸ್ವಾತಂತ್ರ್ಯ ಹೋರಾಟದ ಮೇಲೆ ಪರಿಣಾಮ ಬೀರಿದರು. ಬ್ರಿಟಿಷರು ಅಂಬೇಡ್ಕರ್‌ ಮೇಲೆ ಪರಿಣಾಮ ಬೀರುವ ಪ್ರಯತ್ನ ಮಾಡಿದರು.

ಸಂವಿಧಾನ ರಚನೆ ಸಂದರ್ಭ ಅಂಬೇಡ್ಕರ್‌ ಮತ್ತು ಮಹಾತ್ಮ ಗಾಂಧಿ ನಡುವೆ ಸಾಕಷ್ಟು ಚರ್ಚೆಯಾಗಿದೆ. ಅದರ ಫಲವಾಗಿ ಎಲ್ಲರಿಗೂ ಸಮಾನ ನ್ಯಾಯ ನೀಡುವ ಸಂವಿಧಾನ ರಚನೆಯಾಗಿದೆ ಎಂದರು.

ಅಂಬೇಡ್ಕರ್‌ ವಿರುದ್ಧ ಕಾಂಗ್ರೆಸ್‌ ಶ್ರೀಮಂತ ಅಭ್ಯರ್ಥಿ ನಿಲ್ಲಿಸಿ ಸೋಲಿಸಿದರು. ಅಂಬೇಡ್ಕರ್‌ ಅಂತ್ಯ ಸಂಸ್ಕಾರಕ್ಕೆ ಜಾಗ ನೀಡಲಿಲ್ಲ. ಈಗ ಅಂಬೇಡ್ಕರ್‌ ಬಗ್ಗೆ ಮಾತನಾಡುತ್ತಾರೆ ಎಂದು ಕಾಂಗ್ರೆಸ್‌ ವಿರುದ್ದ ವಾಗ್ಧಾಳಿ ನಡೆಸಿದರು. ಅಂಬೇಡ್ಕರ್‌ ಅವರ ಇನ್ನೊಂದು ಶಕ್ತಿ ಬಾಬು ಜಗಜೀವನ್‌ರಾಮ್‌, ಕಾಂಗ್ರೆಸ್‌ ಇಬ್ಬಾಗವಾದಾಗ ಇಂದಿರಾ ಗಾಂಧಿ ಬಾಬು ಜಗಜೀವನ್‌ ರಾಮ್‌ ಫೋಟೊ ಹಾಕಿ ಚುನಾವಣೆಯಲ್ಲಿ ಆರಿಸಿ ಬಂದರು.

ಇಂಡಿಯಾ ಪಾಕಿಸ್ತಾನ ಯುದ್ಧದ ಸಮಯದಲ್ಲಿ ಬಾಬು ಜಗಜೀವನ ರಾಮ್‌ ಅವರು ರಕ್ಷಣಾ ಮಂತ್ರಿಯಾಗಿ ದೇಶದ ಗೆಲುವಿನಲ್ಲಿ
ಪಾತ್ರವಹಿಸಿದರು. ಬಾಬು ಜಗಜೀವನ್‌ ರಾಮ್‌ ಅವರು ಹಸಿರು ಕ್ರಾಂತಿ ಮಾಡಿ ಭಾರತವನ್ನು ಸ್ವಾವಲಂಭಿಗಳನ್ನಾಗಿ ಮಾಡಿದರು. ಅದಕ್ಕೂ ಮೊದಲು ಭಾರತ ಬೇರೆ ದೇಶಗಳಲ್ಲಿ ಆಹಾರಕ್ಕಾಗಿ ಭಿಕ್ಷೆ ಬೇಡುತ್ತಿತ್ತು. ಅಮೇರಿಕಾದವರು ದನಗಳಿಗೆ ಹಾಕುವ ಗೋದಿ ಕೊಡುತ್ತಿದ್ದರು ಎಂದು ಹೇಳಿದರು.

Advertisement

ಜಗಜೀವನ್‌ ರಾಮ್‌ ಅವರು ಕಾಂಗ್ರೆಸ್‌ನಿಂದ ಹೊರ ಬಂದು ಪಕ್ಷ ಕಟ್ಟಿದರು ಜನತಾ ಪಕ್ಷದೊಂದಿಗೆ ಸೇರಿ ಸರ್ಕಾರದಲ್ಲಿ ಉಪಪ್ರಧಾನಿ ಆದರು. ಅವರನ್ನು ಪ್ರಧಾನಿ ಮಾಡಲು ವಾಜಪೇಯಿಯವರು ಪ್ರಸ್ತಾಪ ಇಟ್ಟರು. ಆದರೆ, ಕಾಂಗ್ರೆಸ್‌ ಅದಕ್ಕೆ ಅವಕಾಶ ಕೊಡಲಿಲ್ಲ ಎಂದು ಹೇಳಿದರು.

ಮೀಸಲಾತಿ ಹೆಚ್ಚಳ ಕ್ರಾಂತಿಕಾರಕ ನಿರ್ಧಾರ:
ರಾಜ್ಯದಲ್ಲಿ ಎಸ್ಸಿ-ಎಸ್ಟಿ ಮೀಸಲಾತಿ ಹೆಚ್ಚಳ ಮಾಡಬೇಕೆಂದು ಕಳೆದ ಮೂವತ್ತು ವರ್ಷಗಳಿಂದ ಬೇಡಿಕೆ ಇತ್ತು. ಯಾವ ಸಿಎಂಗಳು ಅದನ್ನು ಮಾಡಲು ಹೋಗಿರಲಿಲ್ಲ. ನಾನು ಮೀಸಲಾತಿ ಹೆಚ್ಚಳ ಮಾಡುವ ಕ್ರಾಂತಿಕಾರಣ ತೀರ್ಮಾನ ಮಾಡಿದೆ ಎಂದು ಹೇಳಿದರು.

ಮಾಜಿ ಡಿಸಿಎಂ ಗೋವಿಂದ ಕಾರಜೋಳ ಮಾತನಾಡಿ, ಉತ್ತರ ಕರ್ನಾಟಕ ಭಾಗದಲ್ಲಿ ಎಸ್‌. ಆರ್‌. ಬೊಮ್ಮಾಯಿ ಸಿಎಂ ಆಗಿದ್ದ ಸಂದರ್ಭ ಎಸ್ಸಿ-ಎಸ್ಟಿ ಸಮುದಾಯಕ್ಕೆ ಅನೇಕ ಸೌಲಭ್ಯಗಳನ್ನು ಒದಗಿಸಿರುವುದನ್ನು ನಾವ್ಯಾರು ಮರೆಯಬಾರದು ಎಂದರು. ಆದ್ದರಿಂದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.

ಶಿರಹಟ್ಟಿ ಶಾಸಕ ಡಾ| ಚಂದ್ರು ಲಮಾಣಿ, ವಿಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಗದಗ-ಬೆಟಗೇರಿ  ನಗರಸಭೆ ಅಧ್ಯಕ್ಷೆ ಉಷಾ ದಾಸರ, ಮುಖಂಡರಾದ ಅನಿಲ ಮೆಣಸಿನಕಾಯಿ ಶಂಕರ ಮುಳಗುಂದ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next