Advertisement

ಕೃಷ್ಣಮೃಗ ಬೇಟೆ: ಮೂವರು ಆರೋಪಿಗಳ ಸೆರೆ

08:20 PM Oct 04, 2021 | Team Udayavani |

ಗದಗ: ಕೃಷ್ಣಮೃಗ ಬೇಟೆಯಾಡಿ ಅಕ್ರಮವಾಗಿ ಅದರ ಮಾಂಸ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

Advertisement

ಕಣಗಿನಹಾಳ ಗ್ರಾಮದ ಅರ್ಜುನ ಗಿರಿಯಪ್ಪ ಹರಣಶಿಕಾರಿ(19), ಬೆಟಗೇರಿ ಸೆಟ್ಲಮೆಂಟ್ ನಿವಾಸಿಗಳಾದ ರಮೇಶ್ ಮಾನಪ್ಪ ಚವ್ಹಾಳ(24) ಹಾಗೂ ಸುರೇಶ ಚಂದ್ರು ದೊಡ್ಡಮನಿ(22) ಎಂಬುವವರನ್ನು ಬಂಧಿಸಲಾಗಿದೆ. ಬಂಧಿತರಿಂದ 15 ಕೆಜಿ ಕೃಷ್ಣಮೃಗ ಮಾಂಸ, ಎರಡು ಮೊಬೈಲ್ ಫೋನ್ ಹಾಗೂ ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿಗಳು ಸೋಮವಾರ ಬೆಳಗ್ಗೆ ನಗರದ ಹೊರ ವಲಯದ ಎಸ್.ಎಂ.ಕೃಷ್ಣಾ ಸಮೀಪದ ತ್ಯಾಜ್ಯ ವಿಲೇವಾರಿ ಘಟಕದ ಬಳಿ ಕೃಷ್ಣ ಮೃಗದ ಮಾಂಸ ಮಾರಾಟಕ್ಕಾಗಿ ವನ್ಯಜೀವಿಯನ್ನು ಬೇಟೆಯಾಡಿದ್ದರು. ಅದರ ಮಾಂಸ ಸಾಗಿಸುವ ಸಂದರ್ಭದಲ್ಲಿ ಗದಗ ಗ್ರಾಮೀಣ ಠಾಣೆ ಬೀಟ್ ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೆರೆ ಸಿಕ್ಕಿದ್ದಾರೆ.

ಈ ಕುರಿತು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next