Advertisement

ಗದಗ: ನಿಂತಿಲ್ಲ ಜೂಜಾಟ-ಅಕ್ರಮ ಮದ್ಯ ಮಾರಾಟ

05:51 PM Jun 18, 2022 | Team Udayavani |

ಗದಗ: ಯಕ್ಕಾ ರಾಜಾ-ರಾಣಿ ನನ್ನ ಕೈಯೊಳಗೆ… ಹಿಡಿ ಮಣ್ಣು ನಿನ್ನ ಬಾಯೊಳಗೆ… ಎನ್ನುವ ಹಾಡಿನಂತೆ ಜೂಜಾಟ ಹಣ, ಮಾನ, ಮರ್ಯಾದೆಯನ್ನು ಕಸಿದುಕೊಳ್ಳುತ್ತದೆ. ಮನೆ ಮಾರುವ ಪರಿಸ್ಥಿತಿಗೆ ತಂದು ಬಿಡುತ್ತದೆ. ಇಷ್ಟಿದ್ದರೂ ಜಿಲ್ಲೆಯ ಜೂಜುಕೋರರಿಗೆ ಬುದ್ಧಿ ಬಂದಂತಿಲ್ಲ. ಹೌದು, ಜಿಲ್ಲೆಯಲ್ಲಿ ಇಸ್ಪೀಟ್‌ ಎಲೆಗಳ ಅಂದರ್‌-ಬಾಹರ್‌, ಅಂಕಿ-ಅಂಶಗಳ ಓಸಿ(ಓಪನ್‌ -ಕ್ಲೋಸ್‌)ಯಾಟ ಕಲ್ಯಾಣಿ ಮಟ್ಕಾ, ಬಾಂಬೆ ಮಟ್ಕಾ ಜೂಜಾಟಗಳ ಸಂಖ್ಯೆ ಹೆಚ್ಚಿದೆ. ಜೊತೆಗೆ ಅಕ್ರಮ ಮದ್ಯ ಮಾರಾಟ, ಸಾಗಾಟದ ಪ್ರಮಾಣವೂ ನಿರಂತರವಾಗಿ ಎಗ್ಗಿಲ್ಲದೆ ಸಾಗಿದೆ.

Advertisement

ಜಿಲ್ಲೆಯ ಬಹುತೇಕ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಅಂಕಿ-ಸಂಖ್ಯೆಗಳ ಆಧಾರದ ಮೇಲೆ ನಡೆಯುವ ಕಲ್ಯಾಣಿ ಮಟ್ಕಾ ಹಾಗೂ ಬಾಂಬೆ ಪೇಟೆಯ ಅರಳಿ ಧಾರಣಿ ಮೇಲೆ ತೆಗೆಯುವ ಅಂಕಿ-ಸಂಖ್ಯೆಯ ಬಾಂಬೆ ಮಟ್ಕಾ ಓಸಿಯಾಟ ಸಂಖ್ಯೆ ಹೆಚ್ಚಿದೆ. ಕಲ್ಯಾಣಿ ಹಾಗೂ ಬಾಂಬೆ ಮಟ್ಕಾ ಓಸಿಯಾಟದಲ್ಲಿ 1 ರೂ.ಗೆ 80 ರೂ. ಹಣದ ಆಸೆ ಹುಟ್ಟಿಸಿ ಜನರನ್ನು ಜೂಜಾಟಕ್ಕೆ ತಳ್ಳುವವರ ಸಂಖ್ಯೆಯೂ ಹೆಚ್ಚಿದೆ. ಇದರಿಂದ ಹಲವಾರು ಜನರು ಮನೆ-ಹೊಲ ಕಳೆದುಕೊಂಡು ಬೀದಿಗೆ ಬಿದ್ದಿರುವ ಉದಾಹರಣೆಗಳು ಉಂಟು. ಅಲ್ಲದೇ, ಹಳ್ಳದ ದಂಡೆಯ ಮೇಲೆ, ಶೆಡ್‌ನ‌ಲ್ಲಿ ಇಸ್ಪೀಟ್‌ ಎಲೆಗಳ ಸಹಾಯದಿಂದ ಆಡುವ ಅಂದರ್‌ ಬಾಹರ್‌ ಜೂಜಾಟ ಜನರನ್ನು ಸಂಕಷ್ಟಕ್ಕೀಡು ಮಾಡುತ್ತಿದೆ. ಜೊತೆಗೆ ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳ ಚಹಾ ಅಂಗಡಿ, ಕಿರಾಣಿ ಅಂಗಡಿ, ಡಬ್ಟಾ ಅಂಗಡಿ ಹಾಗೂ ಕೆಲ ಡಾಬಾಗಳಲ್ಲಿ ಲೈಸೆನ್ಸ್‌ ಇಲ್ಲದಿದ್ದರೂ ಅಕ್ರಮವಾಗಿ ಮದ್ಯ ಮಾರಾಟವಾಗುತ್ತಿರುವುದು ಬೆಳಕಿಗೆ ಬಂದಿದೆ.

ಇದರಿಂದ ಗ್ರಾಮೀಣ ಪ್ರದೇಶಗಳಲ್ಲೂ ಕುಡುಕರ ಸಂಖ್ಯೆ ಹೆಚ್ಚಲು ಪ್ರಮುಖ ಕಾರಣವಾಗಿದೆ. ಪೊಲೀಸ್‌ ಇಲಾಖೆ ಕೂಡ ಓಸಿ, ಅಂದರ್‌ -ಬಾಹರ್‌, ಅಕ್ರಮ ಮದ್ಯ ಮಾರಾಟ ಸೇರಿ ಜೂಜಾಟಗಳ ಮೇಲೆ ನಿಗಾ ಇಟ್ಟು ಹಲವಾರು ಪ್ರಕರಣಗಳನ್ನು ದಾಖಲಿಸಿ, ಜೂಜುಕೋರರನ್ನು ವಶಕ್ಕೆ ಪಡೆದರೂ ಜೂಜಾಟದ ಪ್ರಮಾಣ ಕಡಿಮೆಯಾಗಿಲ್ಲ. ಕಳೆದ ಎರಡು ತಿಂಗಳ ಅವ ಯಲ್ಲಿ ಪೊಲೀಸ್‌ ಇಲಾಖೆ ಕಲ್ಯಾಣಿ ಮಟಕಾ, ಬಾಂಬೆ ಮಟಕಾ ಓಸಿಯಾಟದಲ್ಲಿ 50 ಪ್ರಕರಣಗಳನ್ನು ದಾಖಲಿಸಿಕೊಂಡು 67 ಆರೋಪಿಗಳಿಂದ 1,10,975 ರೂ. ವಶಕ್ಕೆ ಪಡೆದುಕೊಂಡಿದೆ.

ಅಂದರ್‌ -ಬಾಹರ್‌ ಜೂಜಾಟದಲ್ಲಿ ತೊಡಗಿಕೊಂಡಿದ್ದ 20 ಪ್ರಕರಣಗಳನ್ನು ಭೇದಿಸಿರುವ ಪೊಲೀಸ್‌ ಇಲಾಖೆ 141 ಆರೋಪಿಗಳಿಂದ 2,21,610 ರೂ. ನಗದು, 1,29,020 ಮೌಲ್ಯದ 11 ಬೈಕ್‌ಗಳನ್ನು ವಶಕ್ಕೆ ಪಡೆದಿದೆ. ಜೊತೆಗೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ 56 ಪ್ರಕರಣಗಳಲ್ಲಿ 58 ಆರೋಪಿಗಳಿಂದ 1,56,176 ಮೌಲ್ಯದ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆದರೂ, ಜೂಜಾಟ ಪ್ರಕರಣಗಳು ಕಡಿಮೆಯಾಗಿಲ್ಲ. ಕಲ್ಯಾಣಿಯಾಟ: ಕಳೆದ ಎರಡು ತಿಂಗಳ ಅವಧಿಯಲ್ಲಿ ಜಿಲ್ಲೆಯ ಗದಗ, ರೋಣ ಹಾಗೂ ಗಜೇಂದ್ರಗಡದಲ್ಲಿ ಕಲ್ಯಾಣಿ, ಬಾಂಬೆ ಮಟ್ಕಾ ಜೂಜಾಟ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ದಾಖಲಾಗಿವೆ.

ಗದಗ ತಾಲೂಕಿನಲ್ಲಿ 15, ಗಜೇಂದ್ರಗಡ ತಾಲೂಕಿನಲ್ಲಿ 11, ರೋಣ, ಶಿರಹಟ್ಟಿ ತಾಲೂಕಿನಲ್ಲಿ ತಲಾ 7, ಲಕ್ಷೆ ¾àಶ್ವರ 3, ಮುಂಡರಗಿ, ನರಗುಂದ ತಾಲೂಕಿನಲ್ಲಿ ತಲಾ 2 ಪ್ರಕರಣಗಳು ದಾಖಲಾಗಿವೆ.

Advertisement

ಅಕ್ರಮ ಮದ್ಯ ಮಾರಾಟ

ಅಕ್ರಮ ಮದ್ಯೆ ಮಾರಾಟಕ್ಕೆ ಸಂಬಂಧಿಸಿ ಗದಗ ತಾಲೂಕಿನಲ್ಲಿ 30, ಶಿರಹಟ್ಟಿ 10, ಗಜೇಂದ್ರಗಡ 6, ಲಕ್ಷ್ಮೇ ಶ್ವರ 4, ನರಗುಂದ ಹಾಗೂ ರೋಣ ತಾಲೂಕಿನಲ್ಲಿ ತಲಾ ಮೂರು ಪ್ರಕರಣಗಳು ದಾಖಲಾಗಿವೆ. ಗ್ರಾಮೀಣ ಪ್ರದೇಶದ ಚಹಾ ಅಂಗಡಿ, ಡಬ್ಟಾ ಅಂಗಡಿಗಳಲ್ಲೇ ಅಕ್ರಮ ಮದ್ಯ ಸಂಗ್ರಹಿಸಿ ಮಾರಾಟ ಮಾಡುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚಿದೆ. ಅದರಂತೆ ಎಲ್ಲ ತಾಲೂಕುಗಳಲ್ಲೂ ಅಂದರ್‌ -ಬಾಹರ್‌ ಆಟ ಮುಂದುವರಿದೆ.

ಅರುಣಕುಮಾರ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next