Advertisement

Gadag; ಐತಿಹಾಸಿಕ ವೀರನಾರಾಯಣ ಸನ್ನಿಧಿಯಲ್ಲಿ ರಾಮೋತ್ಸವದ ನಿಮಿತ್ತ ದೀಪೋತ್ಸವ

08:31 PM Jan 22, 2024 | Team Udayavani |

ಗದಗ: ನಗರದ ಐತಿಹಾಸಿಕ ವೀರನಾರಾಯಣ ದೇವಸ್ಥಾನದಲ್ಲಿ ಶ್ರೀರಾಮೋತ್ಸವದ ನಿಮಿತ್ತ ದೀಪೋತ್ಸವ ಕಾರ್ಯಕ್ರಮ ಅದ್ದೂರಿಯಿಂದ ಜರುಗಿತು.

Advertisement

ದೀಪೋತ್ಸವಕ್ಕೂ ಮುನ್ನ ಪಲ್ಲಕ್ಕಿಯಲ್ಲಿ ಶ್ರೀರಾಮನ ಮೂರ್ತಿಯನ್ನಿಟ್ಟು ಪಲ್ಲಕ್ಕಿ ಉತ್ಸವ ನೆರವೇರಿಸಲಾಯಿತು. ನಂತರ ನಡೆದ ದೀಪೋತ್ಸವ ಕಾರ್ಯಕ್ರಮಕ್ಕೆ ಡಾ. ಮಹೇಶ ನಾಲವಾಡ ಚಾಲನೆ ನೀಡಿದರು.

ಮಹಿಳೆಯರು, ಪುರುಷರು, ಮಕ್ಕಳು ಸೇರಿಕೊಂಡು ದೇವಸ್ಥಾನದ ಆವರಣ ಹಾಗೂ ಮುಂಭಾಗದಲ್ಲಿ ದೀಪವನ್ನು ಬೆಳಗಿಸುತ್ತ ಭಕ್ತಿಯ ಆರಾಧನೆಯಲ್ಲಿ ತೊಡಗಿದರು. ಜೈ ಶ್ರೀರಾಮ ಎಂಬ ಬರಹದಂತೆ ದೀಪಗಳನ್ನು ಹಚ್ಚಿ ಪುನೀತರಾದರು.

ವೀರನಾರಾಯಣ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಡಾ. ಕುಶಾಲ ಗೋಡಖಿಂಡಿ ಸೇರಿ ಮುಖಂಡರು ಪಾಲ್ಗೊಂಡಿದ್ದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next